ಶರವೇಗದಲ್ಲಿ ಬೆಳೆಯುತ್ತಿರುವ ಸೂರು ರಹಿತರ ಸಂಖ್ಯೆ..!

ಬೆಂಗಳೂರು

   ರಾಜ್ಯದಲ್ಲಿ ಸೂರು ರಹಿತರ ಸಂಖ್ಯೆ ಶರವೇಗದಲ್ಲಿ ಬೆಳೆಯುತ್ತಿದ್ದು ಅವರ ಸಂಖ್ಯೆ ಈಗ 36 ಲಕ್ಷಕ್ಕೂ ಹೆಚ್ಚಿರುವ ಅಂಶ ಬೆಳಕಿಗೆ ಬಂದಿದೆ.ಸರ್ಕಾರ ನಡೆಸಿರುವ ಇತ್ತೀಚಿನ ಸಮೀಕ್ಷೆಯಿಂದ ಈ ಅಂಶ ಬೆಳಕಿಗೆ ಬಂದಿದ್ದು,ಕಾಂಗ್ರೆಸ್ ಸದಸ್ಯ ಎನ್.ಎ.ಹ್ಯಾರಿಸ್ ಅವರ ಪ್ರಶ್ನೆಗೆ ವಸತಿ ಸಚಿವ ವಿ.ಸೋಮಣ್ಣ ಅವರು ನೀಡಿರುವ ಲಿಖಿತ ಉತ್ತರದಿಂದ ಇದು ಬಹಿರಂಗಗೊಂಡಿದೆ.

    ರಾಜ್ಯದಲ್ಲಿ ಆರು ವಸತಿ ಯೋಜನೆಗಳಿದ್ದು ಎರಡು ನಿವೇಶನ ಯೋಜನೆಗಳು ಇದೆ.ಬಸವ,ಅಂಬೇಡ್ಕರ್,ವಾಜಪೇಯಿ,ದೇವರಾಜ ಅರಸು,ಪ್ರಧಾನಮಂತ್ರಿ ಗ್ರಾಮೀಣ ಆವಾಸ್ ಹಾಗೂ ಪ್ರಧಾನ ಮಂತ್ರಿ ನಗರ ಆವಾಸ್ ಯೋಜನೆಗಳು ವಸತಿ ಯೋಜನೆಗಳಾದರೆ ,ಇಂದಿರಾಗ್ರಾಮೀಣ ವಸತಿ ನಿವೇಶನ ಹಾಗೂ ವಾಜಪೇಯಿ ನಗರ ನಿವೇಶನ ಯೋಜನೆಗಳು ನಿವೇಶನ ರಹಿತರನ್ನು ಗುರುತಿಸುತ್ತವೆ.

     ಈ ಯೋಜನೆಗಳ ಅಡಿಯಲ್ಲಿ ಇತ್ತೀಚಿಗೆ ನಡೆಸಿದ ಸಮೀಕ್ಷೆಯ ಪ್ರಕಾರ ರಾಜ್ಯದ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಮನೆ,ನಿವೇಶನ ಹೊಂದದವರ ಸಂಖ್ಯೆ 36.69 ಲಕ್ಷದಷ್ಟಿದೆ ಎಂದು ಸಚಿವ ವಿ.ಸೋಮಣ್ಣ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.ಕಳೆದ ಮೂರು ವರ್ಷಗಳಲ್ಲಿ ವಸತಿ ಯೋಜನೆಗಳ ಅನುಷ್ಟಾನಕ್ಕಾಗಿ ಕೇಂದ್ರ ಸರ್ಕಾರ 2,851 ಕೋಟಿ ರೂಪಾಯಿಗಳನ್ನು ಒದಗಿಸಿದ್ದು ಇದರಡಿ,ಒಂಭತ್ತು ಲಕ್ಷಕ್ಕೂ ಹೆಚ್ಚು ಮಂದಿಗೆ ವಿವಿಧ ವಸತಿ ಯೋಜನೆಗಳಲ್ಲಿ ಮನೆ ಒದಗಿಸಲಾಗಿದೆ.

    ಅದೇ ರೀತಿ ಮೂವತ್ತೇಳು ಸಾವಿರಕ್ಕೂ ಅಧಿಕ ಮಂದಿಗೆ ನಿವೇಶನಗಳನ್ನು ಒದಗಿಸಲಾಗಿದೆ.ಮುಂದಿನ ದಿನಗಳಲ್ಲಿ ಈ ಕಾರ್ಯ ಮತ್ತಷ್ಟು ತ್ವರಿತಗತಿಯಿಂದ ಮುಂದುವರಿಯಲಿದೆ ಎಂದು ವಿವರಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap