ಗುಬ್ಬಿ
ಜಮೀನಿನಲ್ಲಿ ಕೃಷಿ ನಡೆಸಿಕೊಂಡು ಬದುಕು ನಡೆಸುತ್ತಿರುವ ಸಂದರ್ಭದಲ್ಲಿ ಏಕಾಏಕಿ ಜಮೀನಿಗೆ ಕಾಲಿಟ್ಟ ತಾಲ್ಲೂಕು ಆಡಳಿತ ಒತ್ತುವರಿ ತೆರುವು ಎಂಬ ನೆಪದಲ್ಲಿ ಫಲವತ್ತಾದ ನೂರಾರು ಅಡಕೆಗಿಡಗಳು ಮತ್ತು ತೆಂಗಿನ ಮರಗಳನ್ನು ಧರೆ ಗುರುಳಿಸಿ ಬಡ ಕುಟುಂಬಗಳನ್ನ ಬೀದಿಪಾಲು ಮಾಡಿರುವ ಅಧಿಕಾರಿಗಳ ವರ್ತನೆ ಖಂಡನೀಯವಾದುದಾಗಿದ್ದು ಕೂಡಲೆ ಈ ಘಟನೆಗೆ ಕಾರಣರಾದವರನ್ನು ಅಮಾನತ್ತುಗೊಳಿಸಿ ನೊಂದ ಕುಟುಂಬಗಳಿಗೆ ಸೂಕ್ತವಾದ ಪರಿಹಾರ ನೀಡುವಂತೆ ಭಾರತೀಯ ಕ್ರಿಬ್ಕೋ ಸಹಕಾರಿ ಸಂಸ್ಥೆ ನಿರ್ಧೇಶಕರಾದ ಆರ್.ರಾಜೇಂದ್ರ ಒತ್ತಾಯಿಸಿದರು.
ತಾಲ್ಲೂಕಿನ ತಿಪ್ಪೂರಿನ ಸಿದ್ದಮ್ಮ ಮತ್ತು ಸಣ್ಣ ಕೆಂಪಯ್ಯ ಎಂಬ ಇಬ್ಬರು ಸಂತಸ್ಥರಿಗೆ ತಲಾ 25 ಸಾವಿರ ರೂ ಪರಿಹಾರ ವಿತರಿಸಿ ಮಾತನಾಡಿದ ಅವರು ಜಿಲ್ಲಾಧಿಕಾರಿಗಳು ಕೂಡಲೆ ಸ್ಥಳಪರಿಶೀಲನೆ ಮಾಡಿ ಜೀವನಾಧಾರವಾಗಿದ್ದ ತೋಟವನ್ನು ಕಳೆದುಕೊಂಡ ಸಂತ್ರಸ್ಥರಿಗೆ ಸರ್ಕಾರದಿಂದ ಹೆಚ್ಚಿನ ಪರಿಹಾರ ನೀಡುವಂತೆ ಒತ್ತಾಯಿಸಿದರು. ಘಟನೆಗೆ ಕಾರಣರಾದ ತಹಸಿಲ್ದಾರ್ ಅವರನ್ನು ಅಮಾನತುಗೊಳಿಸಿ ಸೂತ ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಜಿ.ಎನ್.ಬೆಟ್ಟಸ್ವಾಮಿ, ಸಾಗಸಂದ್ರ ದೇವರಾಜು, ಡಿಸಿಸಿ ಭ್ಯಾಂಕ್ ನಿರ್ಧೇಶಕ ಸಿಂಗದಹಳ್ಳಿ ರಾಜಕುಮಾರ್, ಜಿ.ಡಿ.ಸುರೇಶ್ ಗೌಡ, ಎ.ನರಸಿಂಹಮೂರ್ತಿ, ಎನ್.ಲಕ್ಷ್ಮೀರಂಗಯ್ಯ, ಹೇರೂರು ನಾಗಣ್ಣ, ಎಚ್.ಡಿ.ಯಲ್ಲಪ್ಪ, ಕೃಷ್ಣಮೂರ್ತಿ ಮುಂತಾದವರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ