ಬೆಂಗಳೂರು : ಓಕಳಿಪುರಂ ಕಾರಿಡಾರ್ ಕಾಮಗಾರಿ ಸದ್ಯಕ್ಕೆ ಪೂರ್ತಿಯಾಗಲ್ಲ: ರೆಲ್ವೆ

  1. ಬೆಂಗಳೂರು:

     ಐದು ವರ್ಷಗಳಿಂದ ತೆವಳುತ್ತಾ ಸಾಗುತ್ತಿರುವ ಓಕಳಿಪುರ ಅಷ್ಟಪಥ ಕಾರಿಡಾರ್‌ ಕಾಮಗಾರಿ ಸದ್ಯಕ್ಕೆ ಪೂರ್ಣಗೊಳ್ಳುವ ಲಕ್ಷಣ ಕಾಣಿಸುತ್ತಿಲ್ಲ. ಇಲ್ಲಿ ತುಮಕೂರಿಗೆ ಸಂಪರ್ಕ ಕಲ್ಪಿಸುವ ರೈಲ್ವೆ ಹಳಿ ಕೆಳಗಿನ ಬಾಕ್ಸ್‌ ಪುಷಿಂಗ್‌ ಕಾಮಗಾರಿಗೆ ಇನ್ನೂ ಮೂರು ತಿಂಗಳು ಕಾಲವಕಾಶಬೇಕು ಎಂದು ರೈಲ್ವೆ ಇಲಾಖೆ ಕೋರಿದೆ. ಚೆನ್ನೈ ಕಡೆಗೆ ಸಾಗುವ ಹಳಿ ಕೆಳಗೆ ಬಾಕ್ಸ್‌ ಪುಷಿಂಗ್‌ ಕಾಮಗಾರಿಯೂ ನಿರೀಕ್ಷಿತ ವೇಗದಲ್ಲಿ ಸಾಗುತ್ತಿಲ್ಲ.

    ಬಿಬಿಎಂಪಿ ಆಡಳಿತಾಧಿಕಾರಿ ಗೌರವ್‌ ಗುಪ್ತ ಹಾಗೂ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರು ಬಿಬಿಎಂಪಿ ವ್ಯಾಪ್ತಿಯಲ್ಲಿ ಅನುಷ್ಠಾನಗೊಳ್ಳುತ್ತಿರುವ ವಿವಿಧ ಕಾಮಗಾರಿಗಳನ್ನು ಸೋಮವಾರ ತಪಾಸಣೆ ನಡೆಸಿದರು. ಈ ಸಂದರ್ಭದಲ್ಲಿ ಓಕಳಿಪುರ ಕಾರಿಡಾರ್‌ನ ಕಾಮಗಾರಿ ಪ್ರಗತಿ ಬಗ್ಗೆ ಮಾಹಿತಿ ನೀಡಿದ ರೈಲ್ವೆ ಇಲಾಖೆ ಎಂಜಿನಿಯರ್‌ಗಳು, ‘ತುಮಕೂರು ಕಡೆಗೆ ಸಾಗುವ ರೈಲ್ವೆ ಹಳಿ ಕೆಳಗೆ 11 ಮೀ. ಅಗಲದ ಬಾಕ್ಸ್ ಅಳವಡಿಸಬೇಕಿದೆ. ಈ ಕಾಮಗಾರಿ ಡಿಸೆಂಬರ್ ವೇಳೆಗೆ ಪೂರ್ಣಗೊಳಿಸುತ್ತೇವೆ’ ಎಂದು ಭರವಸೆ ನೀಡಿದರು.  

    ಮಂಜುನಾಥ ಪ್ರಸಾದ್‌, ‘ಸಮನ್ವಯ ಕುರಿತು ಏನೇ ಸಮಸ್ಯೆ ಇದ್ದರೂ ತಿಳಿಸಿ. ಅವುಗಳನ್ನು ಬಗೆಹರಿಸುತ್ತೇವೆ. ಆದರೆ, ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಿ’ ಎಂದು ಸೂಚಿಸಿದರು.

   ‘ಚೆನ್ನೈ ಕಡೆ ಹೋಗುವ ರೈಲ್ವೆ ಹಳಿ ಕೆಳಗೆ ಎರಡು ಬಾಕ್ಸ್ ನಿರ್ಮಾಣವನ್ನೂ ಚುರುಕುಗೊಳಿಸಬೇಕು. ಬಿಬಿಎಂಪಿ, ರೈಲ್ವೆ ಇಲಾಖೆ, ಕೆಪಿಟಿಸಿಎಲ್ ಹಾಗೂ ಜಲಮಂಡಳಿ ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಬೇಕು. ವಿದ್ಯುತ್ ಮಾರ್ಗದ ಸ್ಥಳಾಂತರ ಹಾಗೂ ಮೂಲಸೌಕರ್ಯ ಕೊಳವೆಗಳ ಸ್ಥಳಾಂತರಕ್ಕೂ ಶೀಘ್ರ ಕ್ರಮಕೈಗೊಳ್ಳಬೇಕು’ ಎಂದು ಗೌರವ್‌ ಗುಪ್ತ ಸೂಚನೆ ನೀಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap