ಕೊರೋನಾ ಸೋಂಕು ನಿಯಂತ್ರಣ : ಕೇಂದ್ರ ಸರ್ಕಾರದ ನಿಲುವಿನಿಂದ ಜನರಿಗೆ ತೊಂದರೆ

ಚಿತ್ರದುರ್ಗ

      ಕೇಂದ್ರ ಸರ್ಕಾರದ ಪೂರ್ವ ಸಿದ್ದತೆ ಇಲ್ಲದೆ ಮಾಡಿದ ಲಾಕ್ ಡೌನ್‍ನಿಂದ ಸಾಕಷ್ಟು ಜನರು ನಲುಗಿ ಹೋಗಿದ್ದಾರೆ. ಅಲ್ಲದೆ ವಿರೋಧ ಪಕ್ಷದ ನಾಯಕರು ನೀಡಿದಂತೆ ವಿವಿಧ ರೀತಿಯ ಸಲಹೆ ಸೂಚನೆಗಳನ್ನು ಸಹಾ ಸರ್ಕಾರ ಪರಿಗಣಿಸಿಲ್ಲ ಎಂದು ಪ್ರದೇಶ ಕಾಂಗ್ರೇಸ್ ಸಮಿತಿಯ ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ ಸರ್ಕಾರಗಳ ಕ್ರಮವನ್ನು ಖಂಡಿಸಿದ್ದಾರೆ.

     ಚಿತ್ರದುರ್ಗ ನಗರದ ಕಾಂಗ್ರೇಸ್ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದದ ಅವರು, ಚೀನಾ, ಅಮೇರಿಕ, ಇಟಲಿ ಲಾಕ್ ಡೌನ್ ಮಾಡಿದರೂ ಭಾರತದಲ್ಲಿ ಮಾಡಲಿಲ್ಲ. ರಾಹುಲ್ ಗಾಂಧಿ ಹೇಳಿದರೂ ಕೂಡ ನಿರ್ಲಕ್ಷ್ಯ ಮಾಡಿದ್ರು. ಇದರಿಂದಾಗಿ ನಾವುಗಳು ಸೋಂಕಿನ ವಿರುದ್ದ ಸೆಣುಸುವಂತಾಗಿದೆ. ದಿನೇ ದಿನೇ ಹೆಚ್ಚಾಗುತ್ತಾ ಹೋಗಿದೆ ಅಲ್ಲದೆ ಕೊರೊನಾದಿಂದ ದೇಶ ತತ್ತರಿಸಿ ಹೋಗುವಂತೆ ಮಾಡಿದ್ದಾರೆ ಎಂದು ದೂರಿದರು.

    ಕೂರೋನ ವೈರಸ್ ವಿರುದ್ದ ಹೋರಾಟ ಮಾಡಬೇಕಾದರೆ ಸರಿಯಾದ ಪೂರ್ವ ಸಿದ್ದತೆಯನ್ನು ಮಾಡಿಕೊಳ್ಳದೇ ಇದ್ದ ಪರಿಣಾಮಗಾಗಿ ಬದುಕಿನ ಜೀವನ ನಡೆಸಲು ಬೇರೆ ಕಡೆಯಿಂದ ಬಂದ ಕಾರ್ಮಿಕರನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದ್ದು, ಅವರವರ ಮನೆಗಳಿಗೆ ಸುರಕ್ಷಿತವಾಗಿ ಕಳುಹಿಸದೇ, ಕೆಲಸ ಮಾಡುವ ಸ್ಥಳದಲ್ಲೂ ಇರದೇ ತ್ರಿಶಂಕು ಸ್ಥಿತಿಯನ್ನು ಅನುಭವಿಸುವಂತೆ ಮಾಡಲಾಯಿತು ಈಗಲೂ ಸಹಾ ಲಾಕ್ ಡೌನ್ 4ನೇ ಹಂತ ತಲುಪಿದ್ದರು ಸಹಾ ಕಾರ್ಮಿಕರು ಅವರ ಮನೆಗಳನ್ನು ತಲುಪಿಲ್ಲ ಸಿದ್ದತೆ ಮಾಡಿಕೊಳ್ಳದೆ ಕಾರ್ಮಿಕರ ಮಾನ ಕಗ್ಗೊಲೆ ಮಾಡಿದ್ದಾರೆ. ಇದಕ್ಕೆ ಸರ್ಕಾರಗಳ ದೂರ ದೃಷ್ಟಿ ಇರದಿರುವುದೇ ಕಾರಣವಾಗಿದೆ ಇದರ ಬಗ್ಗೆ ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಯುತ್ತಿದೆ ಎಂದು ಈಶ್ವರಖಂಡ್ರೆ ತಿಳಿಸಿದರು.

     ಕೇಂದ್ರ ಸರ್ಕಾರ ರಾಜ್ಯಕ್ಕೆ 20 ಲಕ್ಷ ಕೋಟಿ ಪ್ಯಾಕೇಜ್ ನೀಡಿದ್ದೇವೆ ಎಂದು ತಿಳಿಸಿದ್ದಾರೆ ಆದರೆ ಈ ಪ್ಯಾಕೇಜ್ ಎಲ್ಲಿದೆ. ಯಾರಿಗೆ ಕೊಟ್ಟಿದ್ದಿರಾ ಎಂಬ ಮಾಹಿತಿ ಇಲ್ಲ, ಅಲ್ಲದೆ ಅದನ್ನು ಪಡೆಯುವಲ್ಲಿಯೂ ಸಹ ಹಲವಾರು ನಿಭಂಧನೆಗಳನ್ನು ಹಾಕಲಾಗಿದೆ ಈ ರೀತಿಯಾದ ಹಣವನ್ನು ಪಡೆಯಲು ಕಚೇರಿಗಳಿಗೆ ಅಲೆದಾಡಬೇಕಾಗುತ್ತದೆ, ಕುಶಲ ಕರ್ಮಿಗಳು, ರೈತರಿಗೆ ಸಾಕಷ್ಟು ಜನರಿಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರಿದೆ ಇನ್ನು ಹಲವಾರು ಕುಶಲ ಕರ್ಮಿಗಳನ್ನು ಕೈಬಿಡಲಾಗಿದೆ ಅವರಿಗೂ ಸಹಾ ಸರ್ಕಾರ ಸಹಾಯ ಮಾಡಬೇಕಿದೆ ಎಂದು ಸರ್ಕಾರವನ್ನು ಆಗ್ರಹಿಸಿದರು.

     ಕೆಪಿಸಿಸಿಯಿಂದ ನಾಳೆ ಸೋಷಿಯಲ್ ಮೀಡಿಯಾ ಅಭಿಯಾನ ನಡೆಸಲಾಗುತ್ತಿದೆ. ಕಾಂಗ್ರೇಸ್‍ನ ಎಲ್ಲರು ತಮ್ಮಲ್ಲಿನ ಸಾಮಾಜಿಕ ಜಾಲತಾಣಗಳಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಯಾರು ಆದಾಯ ತೆರಿಗೆ ಪಾವತಿ ಮಾಡುತ್ತಾರೋ ಅವರನ್ನು ಬಿಟ್ಟು ಉಳಿದ ಪ್ರತಿಯೊಬ್ಬ ಖಾತೆಯಲ್ಲಿ ಕನಿಷ್ಟ 10 ಸಾವಿರ ರೂ. ಜಮಾವಣೆ ಮಾಡಬೇಕು ಎಂಬುದು ಈ ಅಭಿಯಾನದ ಉದ್ದೇಶವಾಗಿದೆ ಎಂದು ಸರ್ಕಾರ ಇದಕ್ಕೆ ಬಗ್ಗದಿದ್ದರೆ ಮುಂದಿನ ಹೋರಾಟವನ್ನು ರೂಪಿಸಲಾಗುತ್ತದೆ ಎಂದು ಖಂಡ್ರೆಯವರು ಜೂ. 7 ರಂದು ಪದಗ್ರಹಣ ಸಮಾರಂಭ ಇದೆ. ಸಂವಿಧಾನ ಉಳಿಸುತ್ತೇವೆ ಎಂದು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ ಎಂದು ತಿಳಿಸಿದರು.

    ಇದೇ ಸಂದರ್ಭದಲ್ಲಿ ರಾಷ್ಟ್ರ ನಾಯಕರಾದ ಮಾಜಿ ಪ್ರಧಾನಿ ಜವಹರಲಾಲ್ ನೆಹರುರವರ 55 ನೇ ಪುಣ್ಯ ಸ್ಮರಣೆ ಕಾರ್ಯಕ್ರಮದ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.

   ಈ ಸಮಯದಲ್ಲಿ ಚಳ್ಳಕೆರೆ ಶಾಸಕ ಟಿ ರಘುಮೂರ್ತಿ, ವಿಧಾನ ಪರಿಷತ್ ಸದಸ್ಯೆ ಶ್ರೀಮತಿ ಜಯಮ್ಮ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಶಶಿಕಲಾ, ಸದಸ್ಯರಾದ ನರಸಿಂಹರಾಜು, ಮಾಜಿ ಸಚಿವ ಹೆಚ್ ಆಂಜನೇಯ ಮಾಜಿ ಸಂಸದ ಬಿಎನ್ ಚಂದ್ರಪ್ಪ ಮಾಜಿ ಶಾಸಕ ಬಿಜಿ ಗೋವಿಂದಪ್ಪ, ಉಮಾಪತಿ, ಜಿಲ್ಲಾ ಅಧ್ಯಕ್ಷ ತಾಜ್‍ಪೀರ ಕೆಪಿಸಿಸಿ ಕಾರ್ಯದರ್ಶಿ ಹನುಮಲಿ ಷಣ್ಮುಖಪ್ಪ ಕಾರ್ಯಾಧ್ಯಕ್ಷ ಶಿವುಯಾದವ್, ಮೈಲಾರಪ್ಪ ಎನ್‍ಡಿ ಕುಮಾರ ಮತ್ತು ಮುಖಂಡರು ಹಾಜರಿದ್ದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap