ಅಪಘಾತಗಳಲ್ಲಿ ಬಲಿಯಾದವರ ಪೈಕಿ ಶಾಲಾ ಮಕ್ಕಳ ಸಂಖ್ಯೆಯೇ ಅಧಿಕ..!

ಬೆಂಗಳೂರು

    ದೇಶದಲ್ಲಿ ಸಂಭವಿಸುವ ರಸ್ತೆ ಅಪಘಾತಗಳಲ್ಲಿ ಶೇಕಡ 64 ರಷ್ಟು ಶಾಲಾ ಮಕ್ಕಳು ಬಲಿಯಾಗಿದ್ದು, ಇವರಲ್ಲಿ 14 ವರ್ಷದೊಳಗಿನ ಮಕ್ಕಳ ಪ್ರಮಾಣ ಶೇ.38ರಷ್ಟಿದೆ ಎನ್ನುವ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ.ಹೆಚ್ಚುತ್ತಿರುವ ರಸ್ತೆ ಅಪಘಾತಗಳಲ್ಲಿ ಮಕ್ಕಳು ಬಲಿ ಹೆಚ್ಚಾಗುತ್ತಿರುವುದಕ್ಕೆ ಆತಂಕ ವ್ಯಕ್ತವಾಗಿದೆ ನಗರದ ನಿಮ್ಹಾನ್ಸ್ ಸಭಾಂಗಣದಲ್ಲಿ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನಗಳ ಸಂಸ್ಥೆ (ನಿಮ್ಹಾನ್ಸ್) ಮತ್ತು ಸುರಕ್ಷತಾ ಸಂಪರ್ಕ ಸಂಸ್ಥೆ ಅಂಡರ್ರೈಟರ್ಸ್ ಲ್ಯಾಬೋರೇಟರೀಸ್ (ಯುಎಲ್) ಬಿಡುಗಡೆ ಮಾಡಿರುವ ವರದಿಯಲ್ಲಿ ಅಪಘಾತದಲ್ಲಿ ಮಕ್ಕಳ ಸಾವು ಹೆಚ್ಚಾಗುತ್ತಿರುವ ಅಂಕಿ ಅಂಶಗಳನ್ನು ಉಲ್ಲೇಖ ಮಾಡಲಾಗಿದೆ.

    ಶಾಲೆಗಳಲ್ಲಿನ ಸುರಕ್ಷತೆ ಮಟ್ಟವನ್ನು ಹೆಚ್ಚಿಸುವ ಜೊತೆಗೆ ಬೆಂಗಳೂರು ಮತ್ತು ಕೋಲಾರ ಜಿಲ್ಲೆಗಳಲ್ಲಿನ ಸರಿ ಸುಮಾರು 131 ಶಾಲೆಗಳಲ್ಲಿ ನಡೆಸಲಾದ ಸುರಕ್ಷತಾ ಮೌಲ್ಯಮಾಪನಗಳನ್ನು ಆಧಾರದ ಮೇಲೆ ಈ ವರದಿ ತಯಾರು ಮಾಡಲಾಗಿದ್ದು, ಹಲವು ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿದೆ

   ರಸ್ತೆ ಅಪಘಾತ ಮಾತ್ರವಲ್ಲದೆ, ಸುಟ್ಟಗಾಯಗಳು ಮತ್ತು ನೀರಿನಲ್ಲಿ ಮುಳುಗುವ ಪ್ರಕರಣಗಳು ಕ್ರಮವಾಗಿ ಶೇ. 13- ಮತ್ತು 19ರಷ್ಟು ಏರಿಕೆಯಾದರೆ, ವಿಷ ಸೇವಿಸಿ, ಶೇಕಡ 6 ರಷ್ಟು ಮಕ್ಕಳು ಪ್ರತಿ ವರ್ಷ ಸಾವನ್ನಪ್ಪುತ್ತಾರೆ. ಅಲ್ಲದೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಶೇಕಡಾ 12ರಷ್ಟು ಮಕ್ಕಳು ದೀರ್ಘಕಾಲದ ಅಂಗಾಂಗ ವೈಫಲ್ಯಕ್ಕೆ ತುತ್ತಾಗುತ್ತಿದ್ದಾರೆ ಎಂದು ವರದಿ ಹೇಳಿದೆ.

    ರಾಜ್ಯ ವ್ಯಾಪ್ತಿಯ ಕೆಲ ಶಾಲೆಗಳಲ್ಲಿ ನಡೆಸಿದ ಸುರಕ್ಷತಾ ಸಮೀಕ್ಷೆ ವರದಿಯನ್ವಯ ಶೇಕಡ 50 ರಷ್ಟು ಮಾತ್ರ ಶಾಲೆಗಳಲ್ಲಿ ಸುರಕ್ಷತೆ ಕ್ರಮಗಳನ್ನು ಪಾಲಿಸುತ್ತಿದ್ದಾರೆ. ಬಹುತೇಕ ಶಾಲೆಗಳಲ್ಲಿ ಕಟ್ಟಡಗಳು ಸರಿಯಿಲ್ಲ ಅದೇ ರೀತಿ ಹಲವು ಅಪಘಾತ ಸಂಭವಿಸಲು ಪೂರಕವಾದ ವಾತಾವರಣ ನಿರ್ಮಾಣವಾಗಿದೆ.ಶಾಲಾ ವ್ಯಾಪ್ತಿಗಳಲ್ಲಿ ರಸ್ತೆ ಗುಂಡಿಗಳು ಬಾವಿಗಳು ಇರುವುದು ಬೆಳಕಿಗೆ ಬಂದಿದೆ.

    ವರದಿ ಬಿಡುಗಡೆ ಮಾಡಿ ಮಾತನಾಡಿದ ಯು ಎಲ್ ಉಪಾಧ್ಯಕ್ಷ ಸುರೇಶ್ ಸುಗವನಮ್, ಭಾರತದಲ್ಲಿ ಮಕ್ಕಳ ಗಾಯಗಳು ಬೆಳೆಯುತ್ತಿರುವ ಸಾರ್ವಜನಿಕ ಆರೋಗ್ಯ ತೊಂದರೆಯಾಗಿದೆ ಕಳೆದ ದಶಕದಲ್ಲಿ ಸುಮಾರು ಐದು ಲಕ್ಷ ಮಕ್ಕಳು ಮೃತಪಟ್ಟಿದ್ದಾರೆ ಇದು ಗಂಭೀರ ಸಮಸ್ಯೆಯಾಗಿದ್ದು ಈ ಬಗ್ಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಮಕ್ಕಳ ಸಂಖ್ಯೆ ತೀರಾ ಕಡಿಮೆಯಾಗಲಿದೆ ಎಂದರು.

    ನಿಮ್ಹಾನ್ಸ್ ನಿರ್ದೇಶಕ  ಪ್ರೊ.ಬಿ.ಎನ್. ಗಂಗಾ ಧರ್ ಮಾತನಾಡಿ, ಮಕ್ಕಳಲ್ಲಿ ಗಾಯಗಳಿಂದ ಉಂಟಾಗುವ ಸಾವು ಆಸ್ಪತ್ರೆ ಸೇರ್ಪಡೆ ಮತ್ತು ವೈಫಲ್ಯಗಳನ್ನು ದೇಶದಲ್ಲಿ ನಿರ್ಲಕ್ಷ ಮಾಡಲಾಗುತ್ತಿದ್ದು ಇದು ಒಂದು ರೀತಿಯಲ್ಲಿ ಅಡಗಿರುವ ತೊಂದರೆಯಾಗಿದೆ. ಸಾಕ್ಷಿ ಆಧಾರಿತ ನೀತಿಗಳು ಮತ್ತು ತಳಮಟ್ಟದಲ್ಲಿ ಅನುಷ್ಠಾನವಾಗುವ ಅಗತ್ಯವಿರುವ ಕಾರ್ಯಕ್ರಮ ಗಳ ಅಗತ್ಯವಿದೆ ಸಾಕ್ಷಿ ಆಧಾರಿತ ನೀತಿಗಳು ಮತ್ತು ತಳಮಟ್ಟದಲ್ಲಿ ಅನುಷ್ಠಾನವಾಗುವ ಅಗತ್ಯವಿರುವ ಕಾರ್ಯಕ್ರಮಗಳ ಅಗತ್ಯವಿದೆ ಎಂದು ತಿಳಿಸಿದರು.

     ಇದೇ ವೇಳೆ,ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ.ಕೆ.ಜಿ.ಜಗದೀಶ್ ಮಾತನಾಡಿ, ಶಾಲಾ ವ್ಯಾಪ್ತಿಯಲ್ಲಿ ಮಕ್ಕಳ ಸುರಕ್ಷತಾ ಕ್ರಮಗಳಿಗೆ ಒತ್ತು ನೀಡಲಾಗುವುದು ಎಂದರು. ಈ ಸಂದರ್ಭದಲ್ಲಿ ನಿಮ್ಹಾನ್ಸ್ ಸಾರ್ವಜನಿಕ ಸ್ವಾಸ್ಥ್ಯ ಕೇಂದ್ರದ ಮುಖ್ಯಸ್ಥ ಡಾ.ಜಿ. ಗುರುರಾಜ್, ರಿಜಿಸ್ಟ್ರಾರ್ ಪೆÇ್ರ. ಶೇಖರ್ ಮತ್ತಿತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link