ಬೆಂಗಳೂರು
ಬಿಡದಿಯ ಧ್ಯಾನಪೀಠದ ಸ್ವಾಮಿ ನಿತ್ಯಾನಂದನ ವಿರುದ್ಧ ದಾಖಲಾಗಿರುವ ಅತ್ಯಾಚಾರ ಪ್ರಕರಣ ವಿಚಾರಣೆ ರಾಮನಗರ ಕೋರ್ಟ್‌ನಲ್ಲಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಬೇರೆ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ದೂರುದಾರ ಲೆನಿನ್ ಹೈಕೋರ್ಟ್ ಮೊರೆಹೋಗಿದ್ದಾರೆ.
ನಿತ್ಯಾನಂದನ ಭಕ್ತೆ ಆರತಿರಾವ್ ಅವರ ಮೇಲೆ ನಡೆದ ಅತ್ಯಾಚಾರ ಪ್ರಕರಣವನ್ನು ರಾಮನಗರ ಕೋರ್ಟ್‌ವಿಚಾರಣೆ ನಡೆಸುತ್ತಿದ್ದು ವಿಚಾರಣೆ ಈಗಾಗಲೇ ವಿಳಂಬವಾಗಿದೆ. ಅಲ್ಲದೆ ಆರೋಪಿ 44 ಬಾರಿ ಕೋರ್ಟ್ ವಿಚಾರಣೆಗೆ ಗೈರು ಹಾಜರಾಗಿದ್ದಾರೆ.ಹೀಗಾಗಿ ನ್ಯಾಯದಾನ ವಿಳಂಬವಾಗುವುದರಿಂದ ಪ್ರಕರಣವನ್ನು ಬೇರೆ ಕೋರ್ಟ್ ಅಥವಾ ಜಿಲ್ಲೆಗೆ ವರ್ಗಾಯಿಸುವಂತೆ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.ಈ ಮಧ್ಯೆ ವಿಚಾರಣೆಗೆ ಕೋರ್ಟ್‌ಗೆ ಗೈರಾಗುತ್ತಿರುವ ನಿತ್ಯಾನಂದ ಎಲ್ಲಿದ್ದಾನೆ ಎಂಬುದು ಯಾರಿಗೂ ತಿಳಿದಿಲ್ಲ. ಹೀಗಾಗಿ ಆತನನ್ನು ಪತ್ತೆ ಮಾಡಬೇಕು ಎಂದು ದೂರುದಾರರು ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.
ವಿನಾಯಿತಿ:
ರಾಮನಗರದ 3ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆಯುತ್ತಿರುವ ಪ್ರಕರಣದ ವಿಚಾರಣೆಗೆ ಹಾಜರಾಗಲು ಆಗುತ್ತಿಲ್ಲ ಹೀಗಾಗಿ ವಿನಾಯಿತಿ ನೀಡಬೇಕು ಎಂದು ಮೊರೆಹೋಗಿದ್ದ ನಿತ್ಯಾನಂದನಿಗೆ ಹೈಕೋರ್ಟ್ ಅರ್ಜಿ ಪುರಸ್ಕರಿಸಿ ವಿನಾಯಿತಿ ನೀಡಿದೆ. ರಾಮನಗರ ಕೋರ್ಟ್‌ನಲ್ಲೂ ಮಂಗಳವಾರ ಕೂಡ ಸಾಕ್ಷಿಗಳನ್ನು ವಿಚಾರಣೆ ನಡೆಸಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








