ಮಿಡಿಗೇಶಿ
ರಾಜ್ಯ ಸರ್ಕಾರವು ಮಧುಗಿರಿ ತಾಲ್ಲೂಕಿನ 54 ಕೆರೆಗಳಿಗೆ ಎತ್ತ್ತಿನ ಹೊಳೆಯ ನೀರನ್ನು ಹಾಯಿಸಿ ರೈತರ ಬದುಕಿಗೆ ಆಸರೆಯಾಗುವ ಯೋಜನೆಯಲ್ಲಿ ತೊಡಗಿದೆ. ಆದರೆ ಕೆರೆಗಳ ಅಂಗಳವನ್ನೆ ಉಳ್ಳವರು ನುಂಗಿ ನೀರು ಕುಡಿಯುತ್ತಿದ್ದರೂ ಸಹ ಸಂಬಂಧಪಟ್ಟ ಸಣ್ಣ ನೀರಾವರಿ ಇಲಾಖೆ, ಕಂದಾಯ ಇಲಾಖೆಯ ಸ್ಥಳೀಯ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ವಹಿಸಿ, ಬೇಜವಾಬ್ದಾರಿತನ ತೋರುತ್ತಿದ್ದಾರೆ.
ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಗ್ರಾಮದ ದೊಡ್ಡಕೆರೆಯ ಅಂಗಳದಲ್ಲಿ ಸುಮಾರು ಇಪ್ಪತ್ತು ಎಕರೆಗಳಷ್ಟು ಭೂಮಿಯನ್ನು ಬೆನಕನಹಳ್ಳಿ ಗ್ರಾಮಕ್ಕೆ ಸೇರಿದ ಐದಾರು ಜನ ರೈತರೆ ನುಂಗಿ ನೀರು ಕುಡಿಯುತ್ತಿದ್ದಾರೆ.ಅಧಿಕಾರಿಗಳು ಕೆರೆ ಅಂಗಳ ಒತ್ತುವರಿಯನ್ನು ಕಂಡೂ ಕಾಣದಂತಿರುವ ಒಳ ಮರ್ಮವಾದರೂ ಏನು? ಸದರಿ ಇಲಾಖೆಯವರು ಒತ್ತುವರಿದಾರರ ಕಪ್ಪದ ಹಣಕ್ಕೇನಾದರೂ ತಲೆ ಬಾಗಿದ್ದಾರೆಯೆ ಎಂಬ ಪಿಸುನುಡಿಗಳು ಸಾಮಾನ್ಯ ಜನತೆಯಿಂದ ಕೇಳಿ ಬರುತ್ತಿವೆ.
ಈ ಬಗ್ಗೆ ಗ್ರಾಮಸ್ಥರುಗಳಿಂದ ಪತ್ರಿಕಾಲಯಕ್ಕೆ ಲಿಖಿತ ದೂರುಗಳ ಸುರಿಮಳೆ ಹಾಗೂ ದೃಶ್ಯಮಾಧ್ಯಮಗಳಲ್ಲಿ ವೈರಲ್ ಆಗಿರುತ್ತದೆ. ದೊಡ್ಡಕೆರೆಯ ಅಂಗಳ ಒತ್ತುವರಿಯಾಗಿರುವ ಬಗ್ಗೆ ತಾಲ್ಲೂಕಿನ ತಹಸೀಲ್ದಾರ್ ವಿಶ್ವನಾಥ್‍ರವರನ್ನು ಸಂಪರ್ಕಿಸಿದಾಗ ರೆವಿನ್ಯೂ ಇನ್‍ಸ್ಪೆ ಕ್ಟರ್‍ರವರಿಂದ ಮಾಹಿತಿ ಸಂಗ್ರಹಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿರುತ್ತಾರೆ. ಈ ಕೆಲಸ ತ್ವರಿತವಾಗಿ ಆಗಬೇಕಷ್ಟೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ