ಅರಬ್ ಮಹಿಳೆಯರ ಬಗ್ಗೆ ಅಸಭ್ಯ ಟ್ವೀಟ್: ತೇಜಸ್ವಿ ಸೂರ್ಯ ತಲೆದಂಡಕ್ಕೆ ಹೆಚ್ಚಿದ ಒತ್ತಡ..!

ಬೆಂಗಳೂರು:

      ಐದು ವರ್ಷಗಳ ಹಿಂದೆ ಮಾಡಿದ್ದ ಟ್ವೀಟ್ ಸೋಷಿಯಲ್ ಮೀಡಿಯಾದಲ್ಲಿ ಸದ್ದುಮಾಡಿ ವೈರಲ್ ಆಗಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಟೀಕೆಗಳ ಸುರಿಮಳೆಯೇ ಕೇಳಿಬರುತ್ತಿದೆ. ಅವರನ್ನು ಸಂಸದ ಸ್ಥಾನದಿಂದ ಕಿತ್ತುಹಾಕಬೇಕೆಂದು ಪ್ರಧಾನಿಯನ್ನು ಒತ್ತಾಯಿಸುತ್ತಿದ್ದಾರೆ.

     2015ರಲ್ಲಿ ಸಂಸದ ತೇಜಸ್ವಿ ಸೂರ್ಯ ಒಂದು ಟ್ವೀಟ್ ಮಾಡಿದ್ದರು. ಅದರಲ್ಲಿ ಶೇಕಡಾ 95ರಷ್ಟು ಅರಬ್ ಮಹಿಳೆಯರು ಕಳೆದ ಕೆಲ ನೂರು ವರ್ಷಗಳಲ್ಲಿ ಲೈಂಗಿಕ ತೃಪ್ತಿ, ಪರಾಕಾಷ್ಠೆಯನ್ನು ಹೊಂದಲಿಲ್ಲ. ಲೈಂಗಿಕ ಕ್ರಿಯೆಗಳಿಂದ ಇಲ್ಲಿನ ತಾಯಂದಿರು ಮಕ್ಕಳನ್ನು ಹೆರುತ್ತಾಳೆಯೇ ಹೊರತು ಪ್ರೀತಿಯಿಂದಲ್ಲ ಎಂದು ಬರೆದಿದ್ದರು.

     ಇದು ಅರಬ್ ಮಹಿಳೆಯರ ಮೇಲೆ ತೇಜಸ್ವಿ ಸೂರ್ಯ ಮಾಡಿರುವ ನಿಂದನಾತ್ಮಕ, ಅವಹೇಳನ ಹೇಳಿಕೆ ಎಂದು ಅಲ್ಲಿನ ಉದ್ಯಮ ಮಹಿಳೆ ನೂರಾ ಅಲ್ ಗುರೈರ್ ಟ್ವೀಟ್ ಮಾಡಿ ತೀವ್ರ ಹರಿಹಾಯ್ದರು. ಭಾರತದಲ್ಲಿ ಮುಸಲ್ಮಾನರನ್ನು ಯಾವ ರೀತಿ ನೋಡಿಕೊಳ್ಳುತ್ತಾರೆ ಎಂದು ಇದರಿಂದ ಗೊತ್ತಾಗುತ್ತದೆ. ಇದು ಆ ಸಂಸದನ ಇಸ್ಲಾಮೋಫೋಬಿಯಾ ಮತ್ತು ದುರ್ಬಳಕೆ ಮನೋಭಾವವನ್ನು ತೋರಿಸುತ್ತದೆ.

     ನಿಮ್ಮನ್ನು ಬೆಳೆಸಿದ ರೀತಿ, ನೀವು ಬೆಳೆದುಬಂದ ರೀತಿ ಬಗ್ಗೆ ಮರುಕವಾಗುತ್ತದೆ, ಭಾರತ ದೇಶದಲ್ಲಿ ಹಲವು ಮಹಿಳಾ ನಾಯಕರಿದ್ದರೂ ಕೂಡ ಮಹಿಳೆಯರಿಗೆ ಗೌರವ ತೋರಿಸುವ ಗುಣ ನಿಮ್ಮಲ್ಲಿ ಬಂದಿಲ್ಲ. ಸರ್ಕಾರ ನಿಮಗೆ ವಿದೇಶಾಂಗ ಖಾತೆ ನೀಡಿದರೆ ಅರಬ್ ದೇಶಕ್ಕೆ ಬರಬೇಡಿ. ನಿಮಗೆ ಇಲ್ಲಿ ಸ್ವಾಗತ ಇಲ್ಲ. ನೆನಪಿಟ್ಟುಕೊಳ್ಳಿ ಎಂದು ಖಾರವಾಗಿ ಟ್ವೀಟ್ ಮಾಡಿದ್ದಾರೆ.
    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap