ಮುಷ್ಕರಗಳು ವೈದ್ಯರ ವೃತ್ತಿಗೆ ಶೋಭೆ ತರುವುದಿಲ್ಲ : ಡಾ ಕೆ ಸುಧಾಕರ್

ಬೆಂಗಳೂರು :

   ಕೊರೋನದಂಥ ಸಂದರ್ಭವನ್ನು ಬಳಸಿಕೊಂಡು ವೈದ್ಯರು ಮುಷ್ಕರ ಹೂಡುವುದು ಮಾನವೀಯತೆಯಲ್ಲ. ಇದು ಅವರ ವೃತ್ತಿಗೆ ಗೌರವ ತರುವುದಿಲ್ಲ. ವೈದ್ಯ ಸಂಘದ ಪದಾಧಿಕಾರಿಗಳು ಪ್ರಜ್ಞಾವಂತರು. ಅವರು ಮುಷ್ಕರ ಹಿಪಡೆಯುವ ವಿಶ್ವಾಸವಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ಹೇಳಿದರು.

   ಕಾಡುಗೊಂಡನಹಳ್ಳಿಯಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್‌ ಮೆಡಿಕಲ್ ಕಾಲೇಜಿನಲ್ಲಿ ಕೋವಿಡ್‌ ಪರೀಕ್ಷಾ ಪ್ರಯೋಗಾಲಯ ಹಾಗೂ ಕೌಶಲ್ಯ ತರಬೇತಿ ಕೇಂದ್ರವನ್ನು ಶುಕ್ರವಾರ ಉದ್ಘಾಟಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೇತನ ಪರಿಷ್ಕರಣೆ ವೈದ್ಯರ ಪ್ರಮುಖ ಬೇಡಿಕೆ. ಈ ಸಂಬಂಧ ಈಗಾಗಲೇ ನಾಲ್ಕೈದು ಬಾರಿ ಅವರೊಂದಿಗೆ ಸಭೆ ನಡೆಸಿದ್ದೇವೆ. ಸಭೆಯ ನಿರ್ಣಯಕ್ಕೆ ಬಹುಪಾಲು ಒಪ್ಪಿದ್ದಾರೆ. ಆದರೂ ಮುಷ್ಕರ ನಡೆಸುತ್ತೇವೆ ಎನ್ನುವ ಹಠ ಸರಿಯಲ್ಲ. ಕೊರೋನ ಸಂದರ್ಭದಲ್ಲಿ ವೈದ್ಯರ ಪಾತ್ರ ಮಹತ್ಚದ್ದು, ಇದನ್ನೇ ಬಂಡವಾಳ ಮಾಡಿಕೊಂಡು ಬೇಡಿಕೆ ಮುಂದಿಟ್ಟು ಮುಷ್ಕರ ಹೂಡುವುದು ಮಾನವೀಯತೆ ಅಲ್ಲ. ಇದು ಅವರ ವೃತ್ತಿಗೆ ಗೌರವ ತರುವುದಿಲ್ಲ. ವೈದ್ಯ ಸಂಘದ ಪದಾಧಿಕಾರಿಗಳು ಪ್ರಜ್ಞಾವಂತರು. ಅವರು ಮುಷ್ಕರ ಕೈ ಬಿಡುವ ವಿಶ್ವಾಸವಿದೆ ಎಂದು ಹೇಳಿದರು.

     ಕರ್ನಾಟಕದಲ್ಲಿ ಕೊರೋನ ನಿಯಂತ್ರಣದಲ್ಲಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಕೊರೋನಾ ಪರೀಕ್ಷಾ ಪ್ರಮಾಣ ದಿನಕ್ಕೆ 75 ಸಾವಿರ ಇದೆ. ಇದರಿಂದ ಸೋಂಕು ಪ್ರಕರಣಗಳು ಹೆಚ್ಚೆನಿಸುತ್ತದೆ. ಇಷ್ಟು ದಿನ ಕೇರಳದಲ್ಲಿ ಟೆಸ್ಟ್ ಪ್ರಮಾಣ ಕಡಿಮೆ ಇದ್ದರಿಂದ ಅಲ್ಲಿ ಸೋಂಕು ಪ್ರಮಾಣವೂ ಕಡಿಮೆ ಇತ್ತು, ಈಗ ಟೆಸ್ಟ್ ಪ್ರಮಾಣ ಹೆಚ್ಚಿಸಿದ್ದರಿಂದ ಪ್ರಕರಣಗಳು ಹೆಚ್ಚಾಗುತ್ತಿದೆ. ಆದರೆ ಕರ್ನಾಟಕದಲ್ಲಿ ತಮಿಳುನಾಡು, ಆಂಧ್ರಕ್ಕೆ ಹೋಲಿಸಿದರೆ ಕೋರೋನ ನಿಯಂತ್ರಣದಲ್ಲಿದೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

Recent Articles

spot_img

Related Stories

Share via
Copy link
Powered by Social Snap