ರಾಜಯೋಗ ವಾಹಿನಿಯು ಮನಸ್ಸು ಅರಳಿಸಲಿ

ದಾವಣಗೆರೆ

    ಪ್ರಸ್ತುತ ಇರುವ ಖಾಸಗಿ ಸುದ್ದಿ ವಾಹಿನಿಗಳು ಮನಸ್ಸು ಕೆರಳಿಸುವ ಕೆಲಸ ಮಾಡುತ್ತಿದ್ದರೆ, ಆದ್ಯಾತ್ಮಿಕ ವಿಚಾರಗಳನ್ನು ಪ್ರಚಾರ ಮಾಡುವ ರಾಜಯೋಗ ಕನ್ನಡ ವಾಹಿನಿ ಸಹಸ್ರಾರು ಮನಸ್ಸುಗಳನ್ನು ಅರಳಿಸುವ ಕೆಲಸ ಮಾಡಲಿ ಎಂದು ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀವಚನಾನಂದ ಸ್ವಾಮೀಜಿ ಆಶಯ ವ್ಯಕ್ತಪಡಿಸಿದರು.

    ಇಲ್ಲಿನ ದೇವರಾಜ ಅರಸು ಬಡಾವಣೆಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಶಿವಧ್ಯಾನ ಮಂದಿರದಲ್ಲಿ ಸೋಮವಾರ ನಡೆದ ರಾಜಯೋಗ ಕನ್ನಡ ವಾಹಿನಿಯ ಗಾಡ್ಲಿ ಸ್ಟುಡಿಯೋ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

     ಅಷ್ಟಾಂಗ ಯೋಗಗಳ ಕೆಲ ಅಂಗಗಳಾದ ಧಾರಣ, ಧ್ಯಾನ ಮತ್ತು ಸಮಾಧಿಯಿಂದ ಆರಂಭ ಆಗುವುದೇ ರಾಜಯೋಗವಾಗಿದೆ. ಇದು ಸಾಧನೆಗೆ ಒಂದು ರೀತಿಯಲ್ಲಿ ರಹದಾರಿ ಇದ್ದಂತೆ. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಮೂಲ ಕಾರ್ಯಸ್ಥಾನವಾಗಿರುವ ಮೌಂಟ್ ಅಬು ಮನುಷ್ಯನಲ್ಲಿ ವೃತ್ತಿ ಮತ್ತು ಪ್ರವೃತ್ತಿಯನ್ನು ಬೆಳೆಸುತ್ತಿದ್ದರೆ, ಇದೇ ಸಂಸ್ಥೆಯಿAದ ಆರಂಭವಾಗಿರುವ ರಾಜಯೋಗದ ಹೆಸರಿನ ಕನ್ನಡ ಟಿವಿ ವಾಹಿನಿಯು ಮನುಷ್ಯನನ್ನು ನಿವೃತ್ತಿ ಮತ್ತು ನಿಷ್ಪತಿಯತ್ತ ಕರೆದೊಯ್ಯಲಿ ಎಂದು ಶುಭ ಹಾರೈಸಿದರು.

    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರಜಾಪಿತ ಬ್ರಹ್ಮಾಕುಮಾರೀಸ್ ಈಶ್ವರೀಯ ವಿಶ್ವ ವಿದ್ಯಾಲಯದ ಮಾಧ್ಯಮ ವಿಭಾಗದ ಛೇರ್ಮನ್ ರಾಜಯೋಗಿ ಬ್ರಹ್ಮಾಕುಮಾರ ಕರುಣಾಜಿ, ನಮ್ಮ ಸಂಸ್ಥೆ ಮೊದಲು ಒಬ್ಬರಿಂದ ಒಬ್ಬರಿಗೆ ಜ್ಞಾನ ಕೊಡುವ ಕೆಲಸ ಮಾಡುತಿತ್ತು. ಬಳಿಕ ಯೋಗ ಶಿಬಿರದ ಮೂಲಕ ಜ್ಞಾನ ಪಸರಿಸುವ ಕೆಲಸ ಮಾಡುತಿತ್ತು. ಅದರೆ, ಸಮಯ ನಮಗಿಂತ ವೇಗವಾಗಿ ಓಡುತ್ತಿರುವುದನ್ನು ಅರಿತು ಮಾಧ್ಯಮದ ಮೂಲಕ ಆಧ್ಯಾತ್ಮಿಕ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದ ಪೀಸ್ ಆಫ್ ಮೈಂಡ್ ಹಾಗೂ ಅವೇಕ್ನಿಂಗ್ ಟಿವಿ ಚಾನೆಲ್‌ಗಳನ್ನು ಆರಂಭಿಸಿದ್ದು, ಈಗ ಈ ಟಿವಿ ಚಾನಲ್ ಕನ್ನಡ ಅವತರಣಿಕೆಯಲ್ಲಿ ರಾಜಯೋಗ ವಾಹಿನಿ ಮೂಲಕ ಹಳ್ಳಿ, ಹಳ್ಳಿಗೂ ಆಧ್ಯಾತ್ಮ ಶಿಕ್ಷಣ ನೀಡಲಿದೆ ಎಂದು ಮಾಹಿತಿ ನೀಡಿದರು.

   ನಮ್ಮ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯವು ವಿಶ್ವದ ೧೪೦ ದೇಶಗಳಲ್ಲಿ ನಿರಾಕಾರ ಜ್ಯೋತಿ ಸ್ವರೂಪಿಯಾಗಿರುವ ಶಿವನೊಬ್ಬನೇ, ಇಡೀ ವಿಶ್ವ ಒಂದೇ ಹಾಗೂ ಈ ಜಗತ್ತಿನಲ್ಲಿರುವವರೆಲ್ಲರೂ ಒಂದೇ ಕುಟುಂಬದವರು ಎಂಬ ಮೂರು ಸಂದೇಶಗಳನ್ನು ಪ್ರಚಾರ ಮಾಡುತ್ತಿದೆ. ನಮ್ಮ ಸಂಸ್ಥೆಯಿAದ ಆರಂಭವಾದ ರಾಜಯೋಗ ಕನ್ನಡ ಟಿವಿ ಮೊದಲು ಸಧ್ಯ ಜಿಯೋ ಟಿವಿಯಲ್ಲಿ ಬರುತ್ತಿದ್ದು, ನಂತರ ಕೇಬಲ್, ಮೊಬೈಲ್ ಆ್ಯಪ್ ಸೇರಿದಂತೆ ಸ್ಯಾಟಲೆಟ್ ಚಾನಲ್ ಆಗಿಯೂ ಅಭಿವೃದ್ಧಿ ಹೊಂದಲಿದೆ ಎಂದರು.

    ಪತ್ರಕರ್ತ ರವಿ ಹೆಗಡೆ ಮಾತನಾಡಿ, ಇಂದು ಎಲ್ಲಿಯೂ ಶಾಂತಿ ಎಂಬ ಮಾತೆ ಇಲ್ಲ. ಶಾಂತಿ ಎನ್ನುವುದು ಖಾಸಗಿ ಸುದ್ದಿ ವಾಹಿನಿಗಳ ಪರಮ ವಿರೋಧಿಯಾಗಿದೆ. ಟಿವಿಗಳು ನೀಡುತ್ತಿರುವ ಸುದ್ದಿಗಳು ಒಳ್ಳೆಯವು ಮತ್ತು ಸರಿಯಗಿ ಇದೆ ಎಂಬ ಅಭಿಪ್ರಾಯ ಯಾವ ಸಂಪಾದಕರಲ್ಲೂ ಇಲ್ಲ. ಇಂದು ಕೆಟ್ಟ ಸುದ್ದಿಗಳನ್ನು ಟಿವಿಗಳಲ್ಲಿ ವೈಭವಿ ಕರಿಸುತ್ತಿರುವುದು ಖಾಸಗಿ ಸುದ್ದಿ ವಾಹಿನಿಗಳ ಮಧ್ಯೆ ನಡೆಯುತ್ತಿರುವ ಟಿಆರ್‌ಪಿ ಯುದ್ಧಕ್ಕಾಗಿ. ಇದರಲ್ಲಿ ಶಿಷ್ಟರ ರಕ್ಷಣೆ ಮತ್ತು ದುಷ್ಟರ ಸಂಹಾರಕ್ಕಗಿಯೂ ಯುದ್ಧ ನಡೆಯುತ್ತಿದ್ದು, ಖಾಸಗಿ ಸುದ್ದಿ ವಾಹಿನಿಗಳು ಬಿತ್ತರಿಸಿದ ಎಷ್ಟೊ ಕೆಟ್ಟ ಸುದ್ದಿಗಳಿಂದ ಒಳ್ಳೆಯ ಪರಿಣಾಮವೂ ಆಗಿದೆ ಎಂದರು.

     ಸ್ಯಾಟ್‌ಲೆಟ್ ಚಾನಲ್ ಮಾಡುವ ಶಕ್ತಿಯೂ ಪ್ರಜಾಪಿತ ಬ್ರಹ್ಮಾಕುಮಾರೀಸ್ ಈಶ್ವರೀಯ ವಿಶ್ವ ವಿದ್ಯಾಲಯಕ್ಕೆ ಇದೆ. ಈ ಸಂಸ್ಥೆಯಿAದ ಆರಂಭವಾಗಿರುವ ರಾಜಯೋಗ ಕನ್ನಡ ಟಿವಿಯು ಯುವಕರಿಗೆ ಮನರಂಜನೆ ನೀಡುವುದು ಸೇರಿದಂತೆ ಯಾವ, ಯಾವ ವಯೋಮಾನದವರಿಗೆ ಯಾವ್ಯಾವ ಸುದ್ದಿಯ ಅಗತ್ಯತೆ ಇದೆಯೋ ಅದನ್ನು ಕೊಡುವುದರ ಜೊತೆಗೆ ಸ್ಥಳೀಯ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿ, ಸದ್ವಿಚಾರಗಳನ್ನು ನೀಡುವ ಮೂಲಕ ಒಳ್ಳೆಯ ಸಮಾಜ ನಿರ್ಮಾಣಕ್ಕೆ ಶ್ರಮಿಸಲಿದೆ ಎಂದರು.

      ಪತ್ರಕರ್ತ ಗಿರೀಶ್‌ರಾವ್ ಹತ್ವಾರ್(ಜೋಗಿ) ಮಾತನಾಡಿ, ಇಂದೋ ಎಷ್ಟೋ ಜನರಿಗೆ ಜೀವನವನ್ನು ಅನುಭವಿಸುವ ಚಾಕಚಕ್ಯತೆ ಇಲ್ಲವಾಗಿದೆ. ಹೀಗಾಗಿ ಹಲವರು ಮಠ, ಬ್ರಹ್ಮಕುಮಾರಿ ಸಂಸ್ಥೆ ಸೇರುವ ಮಾತನಾಡುತ್ತಾರೆ. ಆದರೆ, ಇದು ಕತ್ತಿ ಅಂಚಿನ ಹಾದಿ ಎಂಬುದು ಬಹುತೇಕರಿಗೆ ಗೊತ್ತಿಲ್ಲ. ಮಠ ಮತ್ತು ಆಧ್ಯಾತ್ಮಿಕ ಸಂಸ್ಥೆಗಳನ್ನು ಸೇರಬೇಕಾದರೆ ಗಟ್ಟಿಯಾದ ಆತ್ಮಬಲಬೇಕು ಎಂದರು.

      ಮನುಷ್ಯ ದೇವರು ನಂಬುವ ಹಾಗೆ ಬದುಕಬೇಕೆ ಹೊರತು, ದೇವರನ್ನು ನಂಬಿ ಬದುಕಬಾರದು. ಯಾರಿಗೆ ಹೇಗೆ ಬದುಕಬೇಕೆಂಬ ಇಷ್ಟವಿದೆಯೋ ಆ ರೀತಿಯಲ್ಲಿ ಬದುಕಲು ಬಿಡುವವನೆ ನಿಜವಾದ ದೇವರು ಎಂದರು.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವೀರಪ್ಪ ಎಂ. ಭಾವಿ ಮಾತನಾಡಿ, ಮನುಷ್ಯನಿಗೆ ಸಂಕಷ್ಟ ಎದುರಾದಾಗ ಧಾರ್ಮಿಕ ಸಂಸ್ಥೆಗಳು ಒಂದು ರೀತಿಯಲ್ಲಿ ಬೆನ್ನೆಲುಬಾಗಿ ನಿಂತು ದಾರಿ ತೋರಿಸುತ್ತಿರುವುದು ಶ್ಲಾಘನೀಯ ಎಂದರು.

     ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಬಿ.ಎನ್.ಮಲ್ಲೇಶ್ ಮಾತನಾಡಿ, ಸುದ್ದಿ ವಾಹಿನಿಗಳು ಸೆನ್ಷೆಸಿಯಲ್ ನ್ಯೂಸ್ ಕೊಡುವ ಭರದಲ್ಲಿ ಜನರನ್ನು ಕುರ್ಚಿಯ ಅಂಚಿನಲ್ಲಿ ಕೂತು ಟಿವಿ ನೋಡುವ ಉನ್ಮಾದವನ್ನು ಸೃಷ್ಟಿಸಿವೆ. ಆದರೆ, ರಾಜಯೋಗ ಟಿವಿ ಚಾನಲ್‌ಗಳಂತಹ ವಾಹಿನಿಯಿಂದ ಈ ಉನ್ಮಾದ ಬಿತ್ತುವ ಚಾನಲ್‌ಗಳ ಸಂಖ್ಯೆ ಕಡಿಮೆ ಆಗಬಹುದು ಎಂದರು.

    ಹಿರಿಯ ಪತ್ರಕರ್ತ ಜಿ.ಎಂ.ಆರ್.ಆರಾಧ್ಯ ಮಾತನಾಡಿ, ನಮ್ಮ ರಾಷ್ಟç ನಾಯಕರು ಈಗ ಸ್ವಚ್ಛತೆ, ಶುದ್ಧ ಕುಡಿಯುವ ನೀರಿನ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ, ಕಳೆದ ೧೫ ವರ್ಷಗಳ ಹಿಂದೆ ನಾವು ಮೌಂಟ್ ಅಬುಗೆ ಹೋಗಿದ್ದಾಗ ಸ್ವಚ್ಛತೆ ಮತ್ತು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿರುವುದನ್ನು ಗಮನಿಸಿದ್ದೇವು. ಅಲ್ಲಿನ ಧ್ಯಾನ ಮಂದಿರಕ್ಕೆ ಹೋದರೆ, ಎಂತಹ ನಾಸ್ತಿಕನೂ ಆಸ್ತಿಕನಾಗಿ ಬಿಡುತ್ತಾನೆ ಎಂದರು.

    ಅಧ್ಯಕ್ಷತೆ ವಹಿಸಿದ್ದ ಪ್ರಜಾಪಿತ ಬ್ರಹ್ಮಾಕುಮಾರೀಸ್ ಈಶ್ವರೀಯ ವಿಶ್ವ ವಿದ್ಯಾಲಯದ ಬ್ರಹ್ಮಾಕುಮಾರಿ ಲೀಲಾಜಿ, ರಾಜಯೋಗ ಕನ್ನಡ ಟಿವಿಯು ಹಿರಿಯರಿಗೆ ಆಧ್ಯಾತ್ಮ ಶಿಕ್ಷಣ, ಮಕ್ಕಳಿಗೆ ಮೌಲಿಕ ಜ್ಞಾನ, ಯುವಕರಿಗೆ ಚಾರಿತ್ರö್ಯ ನಿರ್ಮಾಣದ ಶಿಕ್ಷಣ, ವಿದ್ಯಾರ್ಥಿಗಳಿಗೆ ಮನೋ ಏಕಾಗ್ರತೆಯ ಶಿಕ್ಷಣ ನೀಡುವುದರ ಜೊತೆಗೆ, ಜಾತಿ ಮತ್ತು ಧರ್ಮ ಭೇದ ಹೋಗಲಾಡಿಸಿ, ಈ ಜಗತ್ತಿನಲ್ಲಿ ಇರುವವರೆಲ್ಲರೂ ಒಂದೇ ಎಂಬ ಸದ್ಭಾವನೆ ಬಿತ್ತಲಿದೆ ಎಂದರು.ಕಲಾಕಲ್ಪ ನಾಟ್ಯ ಸಂಸ್ಥೆಯ ವಿದ್ಯಾರ್ಥಿಗಳು ಸ್ವಾಗತ ನೃತ್ಯ ಮಾಡಿದರು. ಪತ್ರಕರ್ತ ಇ.ಎಂ.ಮAಜುನಾಥ್ ಸ್ವಾಗತಿಸಿದರು. ಪದ್ಮಕ್ಕ ನಿರೂಪಿಸಿದರು. ಗೀತಕ್ಕ ವಂದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link