ಮತ್ತೆ ವಕ್ಕರಿಸಬಹುದು ಆರ್.ಸಿ.ಇ.ಪಿ ಗುಮ್ಮ, ಎಚ್ಚರ : ಜಿ.ಎನ್.ನಾಗರಾಜು

ತಿಪಟೂರು :

    ಆರ್.ಸಿ.ಇ.ಪಿ ಒಪ್ಪಂದಕ್ಕೆ ಇಂದು ಸಹಿ ಹಾಕದೇ ಇರಬಹುದು ಆದರೆ ಇದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕಾಲದಿಂದಲೂ ಪ್ರಚಲಿತದಲ್ಲಿದ್ದು ಈಗ ನನಮಗೆಗೆಲ್ಲ ತಿಳಿಯುತ್ತಿದೆ, ಇಂದು ನಾವು ಆರ್.ಸಿ.ಇ.ಪಿ ಒಪ್ಪಂದಕ್ಕೆ ಮತ್ತೆ ಬಂದು ಒಕ್ಕರಿಸವ ಸಾಧ್ಯತೆ ದಟ್ಟವಾಗಿದ್ದು ನಾವು ಎಚ್ಚರದಿಂದಿರಬೇಕು ಎಂದು ಉಪನ್ಯಾಸಕ ಸಮಾಜ ವಿಜ್ಞಾನಿ ಜಿ.ಎನ್.ನಾಗರಾಜ್ ತಿಳಿಸಿದರು.

     ನಗರದ ಠಾಗೂರ್ ವಿದ್ಯಾಸಂಸ್ಥೆಯಲ್ಲಿ ಆರ್.ಇ.ಸಿ.ಪಿ ಮತ್ತು ಎಫ್.ಟಿ.ಎ ಕುರಿತು ಜಾಗತಿಕ ವ್ಯಾಪಾರ ನೀತಿಗಳು ಮತ್ತು ಭಾರತದ ಕೃಷಿ ಬಿಕ್ಕಟ್ಟಿನಿಂದ ಭಾರತದ ರೈತರಿಗೆ ಮತ್ತು ಆರ್ಥಿಕತೆಯ ಮೇಲಾಗುವ ಪರಿಣಾಮಗಳನ್ನು ಕುರಿತು ಉಪನ್ಯಾಸ ಮತ್ತು ಸಂವಾದವನ್ನು ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ, ಕರ್ನಾಟಕ ಪ್ರಾಂತ್ಯ ರೈತ ಸಂಘ, ಸಿ.ಐ.ಟಿ.ಯು, ಬೆಲೆಕಾವಲು ಸಮಿತಿ, ಕನ್ನಡ ರಕ್ಷಣಾ ವೇದಿಕೆ, ಜಯ ಕರ್ನಾಟಕ, ದಲಿತ ಸಂಘರ್ಷ ಸಮಿತಿ, ಸಮಾನ ಮನಸ್ಕ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದು

     ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಆರ್.ಇ.ಸಿ.ಪಿ ಪ್ರಪಂಚದಲ್ಲಿ ಅತ್ಯಂತ ದೊಡ್ಡದಾದ ಮುಕ್ತ ಮಾರಾಟ ವ್ಯವಸ್ಥೆಯಾಗಿದ್ದು, ಆಮದು ಸುಂಕ ಮತ್ತು ಮಾರಾಟ ಸುಂಕವಿಲ್ಲದೇ ನಡೆಯುವಂತಹ ವ್ಯಾಪಾರ ವಹಿವಾಟು ಇದಾಗಿದೆ. ಕಳೆದ 7 ವರ್ಷಗಳಿಂದಲೂ ಇದರ ಬಗ್ಗೆ ಅನೇಕ ನಿರ್ಣಯಗಳನ್ನು ಕೈಗೊಂಡರು ಪ್ರಜಾಪ್ರಭುತ್ವ ದೇಶದಲ್ಲಿ ಜನಸಾಮಾನ್ಯರಿಗೆ ಕಿಂಚಿತ್ತು ಮಾಹಿತಿಯನ್ನು ನೀಡದೇ ಇರುವುದು ನಿಜಕ್ಕೂ ದುರಂತದ ಸಂಗತಿ. 16 ದೇಶಗಳು ಸೇರಿ ಮಾಡಿಕೊಳ್ಳುವ ಒಡಂಬಡಿಕೆಯಿಂದ ರೈತರು ಹಾಗೂ ಮಧ್ಯಮ ಕೈಗಾರಿಕೆಗಳ ಮೇಲೆ ಅತೀ ಹೆಚ್ಚಿನ ಪರಿಣಾಮವನ್ನು ಬಿರುತ್ತದೆ.

       ಕೇಲವೇ ಕೆಲವು ಮಂದಿ ದೊಡ್ಡ ದೊಡ್ಡ ಕೈಗಾರಿಕೋದ್ಯಮಿಗಳ ಅನುಕೂಲಕ್ಕಾಗಿ ಒಡಂಬಡಿಕೆಗೆ ಸಹಿ ಹಾಕಿದರೆ ದೇಶದ ಆರ್ಥಿಕತೆ ಗಣನೀಯವಾಗಿ ಕುಸಿತ ಕಾಣುವಲ್ಲಿ ಅನುಮಾನವಿಲ್ಲ. ಆರ್.ಇ.ಸಿ.ಪಿಯಿಂದ ಆಮದು-ರಫ್ತಿನಲ್ಲಿ ಗಣನೀಯ ಬದಲಾವಣೆಗಳು ಆಗುತ್ತವೆ ಎಂದಿದ್ದರೆ ಅದು ಸತ್ಯಕ್ಕೆ ದೂರವಾದ ವಿಚಾರ. ಒಂದು ವೇಳೆ ಒಡಂಬಡಿಕೆಗಳಿಗೆ ಸಹಿ ಹಾಕುವ ಮುನ್ನಾ ಜನಸಾಮಾನ್ಯರ ಚರ್ಚೆಗೆ ಬಿಡಿ ಜೊತೆಗೆ ಕೃಷಿಯನ್ನು ಇದರಿಂದ ದೂರವಿಡಲು ಪ್ರಯತ್ನಿಸುವ ಅಗತ್ಯವಿದೆ.

      ಏಕೆಂದರೆ ಹೊರದೇಶಗಳಲ್ಲಿ ಅತೀ ಹೆಚ್ಚಿನ ಅಂದರೆ ಶೇ.50ಕ್ಕೂ ಅಧಿಕ ಸಹಾಯಧನವನ್ನು ನೀಡಿ ಕಾರ್ಪೋರೆಟ್ ಕಂಪನಿಗಳಿಂದ ಕೃಷಿ ಮಾಡಿಸುತ್ತಾರೆ. ಆದರೆ ಭಾರತದಲ್ಲಿ ರೈತರು ಕೃಷಿಯನ್ನು ತಮ್ಮ ಕಿಂಚಿತ್ತು ಜಮೀನಿನಲ್ಲಿ ಮಾಡುತ್ತಾರೆ ಎನ್ನುವುದನ್ನು ಮನಗಾಣಬೇಕಿದೆ. ಅಗತ್ಯ ವಸ್ತುಗಳ ಉತ್ಪಾದಿಸುವ ಸ್ವಾವಲಂಭಿತನವನ್ನು ಬೆಳಸಿಕೊಂಡಾಗ ಮಾತ್ರವೇ ದೇಶದ ಅಭಿವೃದ್ಧಿ ಸಾಧ್ಯ ಎಂದರು.

      ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ ಆರ್.ಇ.ಸಿ.ಪಿ ಯಿಂದ ಮುಂದುವರೆದ ದೇಶಗಳ ಮತ್ತು ಮುಂದುವರೆಯುತ್ತಿರುವ ದೇಶಗಳ ನಡುವಿನ ಸಮರವಾಗಿದ್ದು, ಆರ್ಥಿಕ ಭಯೋತ್ಪಾದಕತೆ ಎಂದರೆ ತಪ್ಪಾಗಲಾರದು. ಭಾರತ ಮತ್ತು ಚೀನಾವನ್ನೇ ವಿವಿಧ ಮುಂದುವರೆದ ದೇಶಗಳು ಗುರಿಯಾಗಿರಿಸಿಕೊಂಡು ಮುಕ್ತ ವ್ಯಾಪಾರದ ಒಡಂಬಡಿಕೆಯನ್ನು ತರಲು ಮುಂದಾಗಿವೆ. ಇದರಿಂದ ದೇಶದ ಆರ್ಥಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದ್ದು, ಗ್ರಾಮೀಣ ಭಾಗದ ಜನರಿಗೂ ಇದರ ಬಿಸಿ ತಟ್ಟುತ್ತದೆ. ಮುಂದಿನ ದಿನಗಳಲ್ಲಿ ಇದರ ಬಗ್ಗೆ ಇನ್ನೂ ಹೆಚ್ಚಿನ ವಿಚಾರಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕಾರ್ಯವಾದಾಗ ಮಾತ್ರವೇ ಜಾಗೃತಿ ಸಾಧ್ಯವಾಗುತ್ತದೆ ಎಂದರು.ಕಾರ್ಯಕ್ರಮದಲ್ಲಿ ಸಿ.ಬಿ.ಶಶಿಧರ್, ರೈತ ಸಂಘ, ಪ್ರಾಂತ ರೈತಸಂಘ, ಸೌಹಾರ್ಧ ತಿಪಟೂರು, ನಗರದ ಸಮಾನಮಸ್ಕ ವೇದಿಕೆಯಗಳ ಸದಸ್ಯರುಗಳು ಮತ್ತಿತರರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link