ಚಿತ್ರದುರ್ಗ
ಸುಪ್ರಿಂ ಕೋರ್ಟ್ ಒಳಮೀಸಲಾತಿಗೆ ಸಂಬಂಧಿಸಿದಂತೆ ಉತ್ತಮ ಆದೇಶ ನೀಡಿದೆ. ಇದರಿಂದ ಮೂರು ರಾಜಕೀಯ ಪಕ್ಷಗಳು ಒಳಮೀಸಲಾತಿ ಜಾರಿಗೆ ತರಲು ಒಲವು ತೋರಿದ್ದು ವಿಧಾನ ಸಭಾ ಅಧಿವೇಶನಕ್ಕೆ ಮುನ್ನ ಸಿಎಂ ಭೇಟಿ ಮಾಡಿ ಅಧಿವೇಶನದಲ್ಲಿ ಜಾರಿಗೆ ಒತ್ತಡವನ್ನು ಹಾಕುವಂತೆ ಮನವಿ ಮಾಡುತ್ತೇವೆ ಎಂದು ಮಾಜಿ ಸಚಿವ ಎಚ್. ಆಂಜನೇಯ ಹಾಗೂ ಸಂಸದ ನಾರಾಯಣಸ್ವಾಮಿ ಇಬ್ಬರು ಹೇಳಿದರು.
ಅವರು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಎಚ್. ಆಂಜನೇಯ ರಾಜ್ಯ ಸರ್ಕಾರ ಹಾಗೂ ಕೇಂದ್ರದ ಸೇರಿದಂತೆ ಸುಮಾರು 40 ಜನ ಮಾದಿಗ ಶಾಸಕರು ಸಂಸದರು ಸಚಿವರು ಇದ್ದಾರೆ. ಇವರೆಲ್ಲರ ಸಭೆಯನ್ನು ಕರೆದು ಮಾತನಾಡುತ್ತೇವೆ. ಸಮಾಜಕ್ಕೆ ಅದರಲ್ಲೂ ಎಲ್ಲಾ ಸಮಾಜದ ಮೀಸಲಾತಿ ವಂಚಿತರಿಗೆ ಮಾದಿಗರಿಗೆ ಜನ ಸಂಖ್ಯೆ ಆಧಾರದ ಮೇಲೆ ಒಳಮೀಸಲಾತಿ ಹಂಚಿಕೆಯಾಗಬೇಕು. ಇದಕ್ಕಾಗಿ ನಾವು ಒತ್ತಡವನ್ನು ಹಾಕುತ್ತಾ ಮನವಿಯನ್ನು ಮಾಡುತ್ತೇವೆ ಎಂದರು.
ಮಾದಿಗ ಸಮುದಾಯ ಮೀಸಲಾತಿಯಿಂದ ವಂಚಿತವಾಗಿ ಸಾವಿನ ಅಂಚಿಗೆ ಬಂದು ತಲುಪಿದೆ. ಈ ಉಳಿಯಬೇಕು. ಅಧಿವೇಶನಕ್ಕೂ ಮೊದಲು ಎಲ್ಲ ಜಾತಿಗಳ, ಎಲ್ಲ ಪಕ್ಷಗಳ ಮುಖಂಡರೊಂದಿಗೆ ಚರ್ಚಿಸುತ್ತೇವೆ. ಅಗತ್ಯವಾಗಿ ಒಳ ಮೀಸಲಾತಿ ಜಾರಿಯಾಗಬೇಕು ಸಫಾಯಿ ಕರ್ಮಚಾರಿಗಳು, ಶೌಚಾಲಯ ಸ್ವಚ್ಛತೆ, ಚಪ್ಪಲಿ ಹೊಲಿಗೆ, ಕಸ ಕೂಡಿಸುವಂತ ಕಾರ್ಯ ಮಾಡುತ್ತಿರುವ ಮಾದಿಗ ಸಮುದಾಯ ಅತ್ಯಂತ ಶೋಷಣೆಗೆ ಒಳಗಾಗಿದೆ. ಎಸ್ಸಿ ಪಟ್ಟಿಯಿಂದ ಇತರೆ ಯಾವುದೇ ಜಾತಿ ತೆಗೆಯಿರಿ ಎಂದು ನಾವು ಒತ್ತಾಯ ಮಾಡುವುದಿಲ್ಲ. ಆದರೆ ನಮ್ಮ ಹಕ್ಕಿನ ಮೀಸಲಾತಿ ನೀಡಿ ಎಂದು ಕೋರುತ್ತೇವೆ ಎಂದು ತಿಳಿಸಿದರು.
ಈಗಾಗಲೇ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಒಳ ಮೀಸಲಾತಿ ಪರವಾಗಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪನವರು ಮೀಸಲಾತಿ ಪರವಾಗಿದ್ದು ಕೂಡಲೇ ಜಾರಿ ಮಾಡುತ್ತಾರೆನ್ನುವ ವಿಶ್ವಾಸವಿದೆ. ಭೋವಿ, ಲಂಬಾಣಿ ಸೇರಿದಂತೆ ಇತರೆ ಯಾವುದೇ ಜಾತಿಯವರು ಒಳ ಮೀಸಲಾತಿ ವಿವಾದ ಮಾಡದಂತೆ ಸಹಕಾರ ನೀಡಬೇಕು ಎಂದು ಹೇಳಿದರು.
ಸಂಸದ ನಾರಾಯಣಸ್ವಾಮಿ, ಮಾತನಾಡಿ ಆಳಿದ ಮೂರು ಪಕ್ಷಗಳು ಕೂಡ ಒಳ ಮೀಸಲಾತಿ ಬಗ್ಗೆ ಶಾಸಕಾಂಗ ಸಭೆಯಲ್ಲಿ ಮಂಡಿಸಲು ವಿಫಲವಾಗಿದ್ದವು. ಆದರೆ ಈ ಬಾರಿ ಹಾಗೆ ಆಗಲು ಬಿಡುವುದಿಲ್ಲ. ಈಗಾಗಲೇ ಮೂರು ಪಕ್ಷಗಳ ನಾಯಕರು ಒಲವು ತೋರಿದ್ದಾರೆ ಮೀಸಲಾತಿ ಬೇಕು ಎಂದು ಕೂಡ ಹೇಳಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಮಾದಿಗ ಸಮುದಾಯದ ಸಚಿವರು ಶಾಸಕರು ಇದ್ದಾರೆ. ಅವರುಗಳನ್ನು ಕೂಡ ವಿಶ್ವಾಸಕ್ಕೆ ತೆಗೆದುಕೊಂಡು ಶಾಸನ ಸಭೆ ಹಾಗೂ ಶಾಸಕಾಂಗ ಸಭೆಯಲ್ಲಿ ಮಂಡಿಸಬೇಕು ಎಂದು ಸಿಎಂ ಹಾಗೂ ಸಚಿವರ ಮೇಲೆ ಒತ್ತಡ ತರುತ್ತೇವೆ ಎಂದರು.
ಒಳ ಮೀಸಲಾತಿ ಜಾರಿ ಮಾಡುವಂತೆ ಒತ್ತಾಯಿಸಿ ಮತ್ತು ನ್ಯಾ.ಸದಾಶಿವ ಆಯೋಗದ ವರದಿ ಅನುಷ್ಠಾನಕ್ಕಾಗಿ ಡಿಎಸ್‍ಎಸ್, ಭೋವಿ, ಲಂಬಾಣಿ ಇತರೆ ಜಾತಿಗಳೊಂದಿಗೆ ಶೀಘ್ರ ಚರ್ಚೆ ನಡೆಸಲಾಗುವುದುಸುಪ್ರೀಂ ಕೋರ್ಟ್ ಒಳ ಮೀಸಲಾತಿ ನೀಡಲು ತಮ್ಮ ಆಶಯ ವ್ಯಕ್ತ ಪಡಿಸಿದೆ. ಕಳೆದ 25-30 ವರ್ಷಗಳಿಂದ ಒಳ ಮೀಸಲಾತಿಗಾಗಿ ಹೋರಾಟ ಮಾಡಿಕೊಂಡು ಬರಲಾಗುತ್ತಿತ್ತು. ಆಂದ್ರ ಪ್ರದೇಶ, ತಮಿಳು ನಾಡು, ಹಿಮಾಚಲ ಪ್ರದೇಶ, ಪಂಜಾಬ್ ರಾಜ್ಯಗಳಲ್ಲಿ ಅಸ್ಪೃಶ್ಯರಿಗೆ ವಿಶೇಷ ಒಳ ಮೀಸಲಾತಿ ನೀಡಲಾಗಿತ್ತು ಎಂದು ಹೇಳಿದರು.
ಮಾದಿಗ ಸಮುದಾಯ ಯಾವುದೇ ಜಾತಿಯ ವಿರೋಧಿಯಲ್ಲ. ಮಾದಿಗ ಸಮುದಾಯಕ್ಕೆ ಅನ್ಯಾಯವಾಗಿದೆ. ಸರಿಪಡಿಸಿ ನ್ಯಾಯ ನೀಡಿ ಎಂದು ಕೇಳುತ್ತಿದ್ದೇವೆ. ಕೇವಲ ಎಸ್ಸಿ ಪಟ್ಟಿಗೆ ಒಳ ಮೀಸಲಾತಿ ಜಾರಿ ಮಾಡಿ ಎಂದು ನಾವು ಕೇಳುವುದಿಲ್ಲ. ಎಸ್ಟಿ ಸೇರಿದಂತೆ ಇತರೆ ಹಿಂದುಳಿದ ನೂರಾರು ಜಾತಿಗಳಿಗೆ ಇಂದಿಗೂ ಮೀಸಲಾತಿಯಲ್ಲಿ ಅನ್ಯಾಯವಾಗಿದೆ ಅಂತಹ ಎಲ್ಲ ಅವಕಾಶ ವಂಚಿತ ಜಾತಿಗಳಿಗೆ ಒಳ ಮೀಸಲಾತಿ ನೀಡಿ ಎಂದು ಕೋರುತ್ತೇವೆಂದು ಹೇಳಿದ ಸಂಸದರುಎಡ ಹಾಗೂ ಬಲಗೈ ಸಮುದಾಯದ ಮುಖಂಡರನ್ನು ಕೂಡ ಕರೆದು ಸಭೆ ಮಾತನಾಡುತ್ತೇವೆ. ಇನ್ನು ನಾವು ಯಾವ ಜಾತಿಗೂ ಮೀಸಲಾತಿಯಿಂದ ಹೊರಗಿಡಬೇಕು ಎಂದು ಹೇಳುತ್ತಿಲ್ಲ. ಅವರಿಗೂ ಕೂಡ ಮೀಸಲಾತಿಯನ್ನು ಕೊಡಬೇಕು ಎಂದು ನಾರಾಯಸ್ವಾಮಿ ಹೇಳಿದರು.
ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಈ ಮೂರು ಪಕ್ಷಗಳು ಒಳ ಮೀಸಲಾತಿ ಪರವಾಗಿ ಹೋರಾಟ ಸಂದರ್ಭದಲ್ಲಿದ್ದವು. ಆದರೆ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಎಲ್ಲ ರಾಜಕೀಯ ಪಕ್ಷಗಳು ಒಳ ಮೀಸಲಾತಿ ನೀಡಲು ಹಿಂದೇಟು ಹಾಕಿದ್ದವು. ಆದರೆ ಈಗ ಸುಪ್ರೀಂ ಕೋರ್ಟ್ ಸೂಕ್ತ ಆದೇಶ ನೀಡಿದ್ದು ಒಳ ಮೀಸಲಾತಿಗೆ ಒಪ್ಪಿಗೆ ನೀಡಿದೆ ಎಂದು ತಿಳಿಸಿದರು.
ಭೋವಿ, ಲಂಬಾಣಿ, ಕೊರಚ, ಕೊರಮ ಸೇರಿದಂತೆ ಎಸ್ಸಿ ಪಟ್ಟಿಯಲ್ಲಿ 101 ಜಾತಿಗಳಿವೆ. ಯಾವ ಜಾತಿಯನ್ನು ಎಸ್ಸಿ ಪಟ್ಟಿಯಿಂದ ತೆಗೆಯಿರಿ ಎಂದು ನಾವು ಒತ್ತಾಯ ಮಾಡುವುದಿಲ್ಲ. ಯಾವುದೇ ಜಾತಿ ಮೀಸಲಾತಿಯಿಂದ ವಂಚಿತವಾಗಿದ್ದರೆ ಅಂತಹ ಜಾತಿಗಳ ಪರವಾಗಿ ತಾವು ನಿಲ್ಲುವುದಾಗಿ ಹೇಳಿದರು.
ಈಗಾಗಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರೊಟ್ಟಿಗೆ ಈಗಾಗಲೇ ಚರ್ಚಿಸಲಾಗಿದೆ. ಆರ್ ಎಸ್‍ಎಸ್ ಮುಖಂಡರು ಒಳಮೀಸಲಾತಿ ಪರ ಇದ್ದಾರೆ. ಇದೇ ಅಧಿವೇಶನದಲ್ಲಿ ಒಳ ಮೀಸಲಾತಿ ಕುರಿತು ಚರ್ಚಿಸುವಂತೆ ಒತ್ತಾಯಿಸಿದ್ದೇವೆಂದು ಹೇಳಿದರು.
ಮಾಜಿ ಲೀಡ್ಕರ್ ನಿಗಮ ಅಧ್ಯಕ್ಷ ಓ.ಶಂಕರ್, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ನರಸಿಂಹರಾಜು, ಜಿಪಂ ಸದಸ್ಯ ಪ್ರಕಾಶ ಮೂರ್ತಿ ಸುದ್ದಿಗೋಷ್ಠಿಯಲ್ಲಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ