ಹರಪನಹಳ್ಳಿ:
ಮೂರು ಪ್ರಮುಖ ಜಿಲ್ಲೆಗಳಿಗೆ ಸಂಪರ್ಕವಾಗಿರುವ ರಾಜ್ಯಹೆದ್ದಾರಿ ಸಂಚಾರಿಗಳಿಗೆ ಮೃತ್ಯುವಿಗೆ ಆಹ್ವಾನ ನೀಡಿದಂತಾಗಿದೆ.
ಪಟ್ಟಣದ ಹರಿಹರ ವೃತ್ತದಿಂದ ಮಂಡ್ಯಾ, ಮೊಣಕಾಲ್ಮುರು, ದಾವಣಗೆರೆ ಜಿಲ್ಲೆಗಳಿಗೆ ಸಂಪರ್ಕ ನೀಡುವ ಏಕೈಕ ರಾಜ್ಯಹೆದ್ದಾರಿ ಅರಸಿಕೆರೆ ಹಾಗೂ ಕೊಟ್ಟೂರು ವೃತ್ತಗಳಿಗೆ ಬಹುಮುಖ್ಯವಾದ ಬೈಪಾಸ್ ರಸ್ತೆಯಾಗಿದೆ. ಆದರೆ ತೋಟಗಾರಿಕೆ ಇಲಾಖೆ ಮುಂದೆಯಿಂದ ಸಾಗುವ ರಸ್ತೆ ವಾಲ್ಮಿಕಿ ನಗರ ಮತ್ತು ಅರಸಿಕೆರೆ ರಸ್ತೆಗಳಿಗೆ ಕವಲೊಡೆಯುವ ರಸ್ತೆ ಭಾಗ ಕಿರಿದಾಗಿರುವುದರಿಂದ ಹಗೂ ರಸ್ತೆ ಪಕ್ಕದಲ್ಲಿ ಆಳವಾದ ಚರಂಡಿಗಳಿರುವುದರಿಂದ ವಾಹನಗಳಿಗೆ ಸಂಚಾರಕ್ಕೆ ತುಂಬಾ ತೊಂದರೆಯ ಜೊತೆಗೆ ಅಪಾಯವನ್ನು ಆಹ್ವಾನಿಸುವಂತಿದೆ.
ಸ್ವಯಂ ಪ್ರೇರಣೆಯಿಂದ ಮನೆಗಳ ತೆರವು
2017-18 ರ ಸಾಲಿನ ದಿವಂಗತ ಮಾಜಿ ಶಾಸಕ ಎಂ.ಪಿ.ರವೀಂದ್ರರವರ ಆಡಳಿತಾವಧಿಯಲ್ಲಿ 8 ನೇ ವಾರ್ಡ್ ಶಾಲೆಯಿಂದ ಹರಿಹರ ವೃತ್ತದ ವರೆಗೂ ರಸ್ತೆ ಅಗಲೀಕರಣ ಹಾಗೂ ರಸ್ತೆ ವಿಭಜಕ ನಿರ್ಮಾಣ ಕಾರ್ಯವಾಗಿತ್ತು. ವಾಲ್ಮೀಕಿ ನಗರದ ನಿವಾಸಿಗಳು ಸ್ವಯಂ ಪ್ರೇರಿತರಾಗಿ ರಸ್ತೆ ಅಗಲಿಕರಣಕ್ಕೆ ತಾವೇ ಮನೆಗಳನ್ನು ಮಳಿಗೆಗಳನ್ನು ತೆರವುಗೊಳಿಸಿ ರಸ್ತೆ ನಿರ್ಮಾಣಕ್ಕೆ ಅನುವು ಮಾಡಿಕೊಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಅಲ್ಲಿಂದ ಇಲ್ಲಿಯವರೆಗೂ ಹರಿಹರ ವೃತ್ತವನ್ನು ರಸ್ತೆ ವಿಭಜಕ ತಲುಪಲೇ ಇಲ್ಲ. ಅರಸಿಕೆರೆ ಹಾಗೂ ಕೊಟ್ಟೂರು ಬೈಪಾಸ್ ರಸ್ತೆಯಿಂದ ಮಾತ್ರ ವಿಭಜಕ ಕಾಮಗಾರಿ ಪೂರ್ಣಗೊಂಡಿದೆ. ಒಟ್ಟಾರೆ ರಸ್ತೆಯಲ್ಲಿ 300 ರಿಂದ 400 ಮೀಟರ್ ನಷ್ಟು ರಸ್ತೆ ಮಾತ್ರ ಅಪಾಯದಂಚಿನಲ್ಲಿದ್ದು ಸಂಚಾರಿಗಳಿಗೆ ತೊಂದರೆಗೀಡುಮಾಡಿದೆ.
ನಿತ್ಯ ಸಾವಿರಾರು ವಾಹನಗಳು, ಹಾಗೂ ಪಾದಚಾರಿಗಳು ಸಂಚರಿಸುವ ರಸ್ತೆಯಾಗಿದ್ದು ಸಾಕಷ್ಟು ಹಣ ವ್ಯಹಿಸಿ ರಸ್ತೆ ನಿರ್ಮಾಣ ಮಾಡಿದ್ದರಾದರೂ ಸ್ಪಲ್ಪ ಪ್ರಮಾಣದಲ್ಲಿ ಕಿರಿದಾಗಿಸಿರುವ ರಸ್ತೆಯಿಂದ ಜೀವ ಕೈಯಲ್ಲಿಡಿದು ಓಡಾಡುವಂತಾಗಿದೆ. ಮಕ್ಕಳನ್ನು ಶಾಲೆಗೆ ಕಳಿಸಲೂ ಯೋಚಿಸುವಂತಿದೆ ಎನ್ನುತ್ತಾರೆ ನಿವಾಸಿಗಳು.
ನೆಮ್ಮದಿಯಿಲ್ಲದ ಬದುಕು
ರಸ್ತೆ ಪಕ್ಕದಲ್ಲೇ ಮನೆಇರುವ ನಾವು ನಿತ್ಯವೂ ವಾಹನ ಸಂಚಾರದಿಂದ ಧೂಳು ತುಂಬುವುದಲ್ಲದೆ. ಮನೆಬಿಟ್ಟು ರಸ್ತೆಗಿಳಿಯಲು ಯೋಚಿಸುವಂತಾಗಿದೆ. ಈ ರಸ್ತೆ ಸಂಪೂರ್ಣ ಪ್ರಮಾಣದಲ್ಲಿ ನಿರ್ಮಾಣ ಮಾಡಿದ ಮೇಲೆ ನಮ್ಮ ಮನೆಯ ಅಳತೆಗಳು ಸಿಗಲಿದ್ದು ಪ್ರಸ್ತುತ ಮನೆ ದುರಸ್ತಿ ಮಾಡಿಸಿಕೊಳ್ಳುವುದಕ್ಕೆ ಆಲೋಚಿಸುತ್ತಿದ್ದೇವೆ. ಕೂಡಲೆ ಸಂಬಂಧಪಟ್ಟ ಅಧಿಕಾರಿಗಳುರಸ್ತೆ ನಿರ್ಮಾಣ ಮಾಡಿ ನಮಗೆ ನೆಮ್ಮದಿ ನೀಡಿ ಎಂದು ಅಳಲು ತೋಡಿಕೊಳ್ಳುತ್ತಾರೆ ಗುಂಡಿನಕೇರಿ ನಿವಾಸಿ ಅಲ್ಲಾಭಕ್ಷಿ.
ಇದೇ ರಸ್ತೆಯಲ್ಲಿ ನಿತ್ಯ ಮಾರುಕಟ್ಟೆಗೆ ಬಂಡಿಯಲ್ಲಿ ತರಕಾರಿ ಸಾಗಿಸುವಾಗ ಜೀವ ಕೈಯಲ್ಲಿಡಿದೇ ಸಾಗಬೇಕಿದೆ ಕಿರಿದಾದ ರಸ್ತೆ ಒಂದೆಡೆಯಾದರೆ ರಸ್ತೆ ಪಕ್ಕದಲ್ಲೆ ಧನದ ಮಾಂಸದಂಗಡಿಗಳಿದ್ದು, ಅಂಗಡಿಗಳ ಮುಂದೆ ವಾಹನ ನಿಲುಗಡೆಯಿಂದಾಗಿ ರಸ್ತೆಯಲ್ಲಿ ಸಾಗಲು ಹರಸಾಹಸ ಪಡಬೇಕಾಗುತ್ತದೆ ಎನ್ನುತ್ತಾರೆ ರೈತ ಚಿಕ್ಕೇರಿ ವೆಂಕಟೇಶ್
ಬೈಪಾಸ್ ರಸ್ತೆಗಳ ದುರಸ್ಥಿ ಕಾರ್ಯ ನಡೆಯುತ್ತಿದೆ. ವಾಲ್ಮಿಕಿ ಕಾಲೋನಿಯಲ್ಲಿನ ಕಿರಿದಾದ ರಸ್ತೆಯ ಬಗ್ಗೆ ಗಮನಕ್ಕಿದೆ. ಸಮಸ್ಯೆಯೂ ತಿಳಿದಿದೆ. ಶೀಘ್ರದಲ್ಲೇ ದುರಸ್ಥಿಗೆ ಇಲಾಖೆ ಮುಂದಾಗುವುದು ಎಂದು ಲೋಕೋಪಯೋಗಿ ಹಾಗು ಬಂದರು ಒಳನಾಡು ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಲಿಂಗಣ್ಣ ಹೇಳುತ್ತಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ