ದೇಶದಲ್ಲಿ ಸೈನಿಕರು, ಪೊಲೀಸರ ಸೇವೆ ಶ್ಲಾಘನೀಯ

ಚಿತ್ರದುರ್ಗ

       ದೇಶಕ್ಕಾಗಿ ತಮ್ಮ ಜೀವನವನ್ನೇ ತ್ಯಾಗ ಮಾಡಿ ಕರ್ತವ್ಯ ನಿರ್ವಹಿಸುವ ಸೈನಿಕರು ಮತ್ತು ಪೊಲೀಸರ ಕರ್ತವ್ಯ ಶ್ಲಾಘನೀಯವಾದದು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಕಾಂತ್ ವಟವಟಿ ತಿಳಿಸಿದರು.ಪೊಲೀಸ್ ಹುತಾತ್ಮರ ದಿನಾಚರಣೆ ಅಂಗವಾಗಿ ನಗರದ ಡಿಎಆರ್ ಕಚೇರಿ ಆವರಣದಲ್ಲಿ ವೀರ ಪ್ರತಿಮೆಗೆ ಗೌರವ ಸಮರ್ಪಿಸಿ ಮಾತನಾಡಿದರು

      1951ರಲ್ಲಿ ಚೀನಾದ ಲಡಾಕ್‍ನಲ್ಲಿ ನಡೆದ ಘಟನೆಯನ್ನು ನಾವು ಇಂದಿಗೂ ಸ್ಮರಿಸಿಕೊಳ್ಳುವ ಅಗತ್ಯವಿದೆ. ಕರುಣ್‍ಸಿಂಗ್ ನೇತೃತ್ವದ ನಮ್ಮ ಸಿಆರ್ಪಿಎಫ್ ತಂಡವು ದೊಡ್ಡ ಸಂಖ್ಯೆಯ ಸೈನಿಕರನ್ನು ಹೊಂದಿದ್ದ ಚೀನಾ ದೇಶದ ವಿರುದ್ದ ಹೋರಾಡಿ, ಗೆಲವು ಸಾಧಿಸಿಕೊಂಡಂತಹ ಸೈನ್ಯ ನಮ್ಮದು. ಈ ಘಟನೆಯಲ್ಲಿ ನಮ್ಮ 10 ಜನ ಸಿಆರ್ಪಿಫ್ ಯೋಧರು ಮರಣ ಹೊಂದಿದ್ದರು .ಮತ್ತು ಒಂಭತ್ತು ಜನ ಚೀನಾದ ಆಕ್ರಮಣಕಾರರನ್ನು ಬಂಧಿಸಲಾಯಿತು. ಈ ವಿಜಯದ ನೆನೆಪಿಗಾಗಿ ಪ್ರತಿ ವರ್ಷ ಅ.21 ರಂದು ಪೊಲೀಸ್ ಹುತಾತ್ಮ ದಿನವನ್ನು ಆಚರಿಸಲಾಗುತ್ತಿದೆ ಎಂದರು.

      ನಮ್ಮ ದೇಶದ ರಕ್ಷಣೆ ಮತ್ತು ನಮ್ಮ ಶಾಂತಿಯುತ ಜೀವನಕ್ಕೆ ಮುಖ್ಯ ಕಾರಣಕರ್ತರೆಂದರೆ ಈ ದೇಶದ ಸೈನಿಕರು ಮತ್ತು ಪೊಲೀಸರು. ದೇಶದ್ಯಾಂತ ಇಂದು ಪೊಲೀಸ್ ಹುತಾತ್ಮರ ದಿನವನ್ನು ಆಚರಿಸಲಾಗುತ್ತಿದೆ. ಪ್ರತಿ ವರ್ಷ ದೇಶದಲ್ಲಿ ಅನೇಕ ಪೊಲೀಸರು ಮತ್ತು ಯೋಧರು ಹುತಾತ್ಮರಾಗುತ್ತಾರೆ. ಹುತಾತ್ಮ ಪೊಲೀಸ್ ಮತ್ತು ಯೋಧರ ಆತ್ಮಕ್ಕೆ ಶಾಂತಿ ಮತ್ತು ಗೌರವ ವಂದನೆ ಸಲ್ಲಿಸಲು ಇದು ಸೂಕ್ತ ಸಮಯ. ಅವರನ್ನು ಕಳೆದುಕೊಂಡಿರುವ ಕುಟುಂಬಕ್ಕೆ ನಾವೆಲ್ಲಾ ಆತ್ಮಸ್ಥೈರ್ಯ ತುಂಬಬೇಕು ಎಂದ ಅವರು ವೈಯಕ್ತಿವಾಗಿ ನನಗೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ಹೆಮ್ಮೆಯ ವಿಷಯವಾಗಿದ್ದು ಈ ಮೂಲಕ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸೋಣ ಎಂದು ಹೇಳಿದರು

     ದೇಶದ ರಕ್ಷಣೆ ಮಾಡುವಲ್ಲಿ ಸೈನಿಕರ ಪಾತ್ರ ಹೆಚ್ಚು ಮಹತ್ವವಾಗಿದ್ದು, ದೇಶದ ಮತ್ತು ಜನರ ಹಿತರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡುವ ಇವರು ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿದೆ. ಜನ ಸಾಮಾನ್ಯರ ಶಾಂತಿ ಮತ್ತು ಸುರಕ್ಷತೆಗಾಗಿ ನಮ್ಮ ದೇಶದ ಸೈನಿಕರು ಮತ್ತು ಪೊಲೀಸರು ಸದಾ ಕರ್ತವ್ಯನಿರತರಾಗಿರುತ್ತಾರೆ ಎಂದು ಅವರ ಕಾರ್ಯವನ್ನು ಸ್ಲಾಘೀಸಿದರು.

      ಎಸ್ಪಿ ಡಾ.ಕೆ.ಅರುಣ್ ಸೆ. 2018 ರಿಂದ ಸೆ. 2019 ರವರೆಗೆ 292 ಜನ ಪೊಲೀಸ್ ಮತ್ತು ಯೋಧರು ದೇಶದಲ್ಲಿ ಹುತಾತ್ಮರಾಗಿದ್ದು ಇದರಲ್ಲಿ ಕರ್ನಾಟಕದ 12 ಜನ ಪೊಲೀಸ್ ಮತ್ತು ಯೋಧರು ಹುತಾತ್ಮರಾಗಿದ್ದಾರೆ ಎಂದ ಅವರು ರಾಜ್ಯದ ಹುತಾತ್ಮ ಯೋಧರ ಮತ್ತು ಪೊಲೀಸರ ಹೆಸರಗಳು ಹೇಳಿ ಗೌರವ ವಂದನೆ ಸಲ್ಲಿಸಿದರು. ಜಿಲ್ಲೆಯ ಹುತಾತ್ಮ ಪೊಲೀಸರ ಕುಟುಂಬ ವರ್ಗದವರು ಹಾಗೂ ವಯೋನಿವೃತ್ತಿ ಹೊಂದಿದ ಯೋಧರು ಕಾರ್ಯಕ್ರಮದಲ್ಲಿ ಹಾಜರಿದ್ದರು.

     ಹುತ್ಮಾತ ಯೋಧರ ಗೌರವಾರ್ಥ ಮೂರು ಸುತ್ತು ವಾಲಿ ಫೈರಿಂಗ್ ನಡೆಸಲಾಯಿತು. ಡಿ.ಸಿ.ಆರ್.ವಿನೋತ್ ಪ್ರಿಯಾ, ಎಎಸ್ಪಿ ಎಂ.ಬಿ.ನಂದಗಾವಿ, ಪೊಲೀಸ್ ತರಬೇತಿ ಶಾಲೆ ಪ್ರಚಾರ್ಯ ಟಿ.ಪಾಪಣ್ಣ ಮೊದಲಾದ ಗಣ್ಯರು ಭಾಗವಹಿಸಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link