ಹುಕ್ಕೇರಿ:
ದೀಪಾವಳಿ ನಂಣತರದಲ್ಲಿ ಸುಪ್ರೀಂಕೋರ್ಟ್ ಅನರ್ಹರಿಗೆ ಕ್ಲೀನ್ ಚಿಟ್ ಕೊಟ್ಟರೆ ಯಡಿಯೂರಪ್ಪ ಸಂಪುಟಕ್ಕೆ ಸೇರ್ಪಡೆಗೊಳ್ಳಲು ತುದಿಗಾಲಲ್ಲಿ ನಿಂತಿರುವ ಅನರ್ಹರಿಗೆ ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಮರ್ಮಾಘಾತ ನೀಡಿದ್ದಾರೆ.
ಅನರ್ಹ ಶಾಸಕರಿಗೂ ಮತ್ತು ಬಿಜೆಪಿ ಪಕ್ಷಕ್ಕೂ ಯಾವುದೇ ರೀತಿಯಲ್ಲಿಯೂ ಸಂಬಂಧವಿಲ್ಲ ಎಂದು ಹೆಳುವ ಮೂಲಕ ಲಕ್ಷ್ಮಣ್ ಸವದಿ ವಿವಾದ ಸೃಷ್ಠಿಸಿದ್ದಾರೆ.ಮೈತ್ರಿ ಪಕ್ಷದಲ್ಲಿನ ಶಾಸಕರ ನಡುವೆ ನಡೆಯುತ್ತಿರುವ ತಿಕ್ಕಾಟಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.ಬಿಜೆಪಿ ಸೇರಲು ಚಿಂತನೆಯಲ್ಲಿ ತೊಡಗಿರುವ ಅನರ್ಹರಿಗೆ ಈ ಸುದ್ದಿ ಬರಸಿಡಿಲಿನಂತೆ ಬಡಿದಿದೆ ಎಂದರೆ ತಪ್ಪಾಗುವುದಿಲ್ಲ ಮತ್ತು ಅವರು ಈಗ ತ್ರಿಶಂಕು ಸ್ಥಿತಿಯಲ್ಲಿದ್ದಾರೆ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ