ಬೆಂಗಳೂರು:
ಟಿಕ್ ಟಾಕ್ ಗೀಳಿಗೆ ಹೋಗಿ ಸ್ಪೈನಲ್ ಕಾರ್ಡ್ ಮುರಿದು ಕೊಂಡು ಆಸ್ಪತ್ರೆಗೆ ದಾಖಲಾಗಿದ್ದ ಯುವಕ ಕುಮಾರ್ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಕೊನೆಯುಸಿರೆಳೆದಿದ್ದಾನೆ.
ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಡೆಕೆರೆ ಗ್ರಾಮದ ಕುಮಾರ್ ಜೂನ್ 15 ರಂದು ಸ್ನೇಹಿತರ ಜೊತೆ ಟಿಕ್‌ಟಾಕ್‌ನಲ್ಲಿ ಸಾಹಸ ಪ್ರದರ್ಶಿಸುವ ವೇಳೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ. ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದರು ಆದರೆ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಕೊನೆಯುಸಿರೆಳೆದಿದ್ದಾನೆ.