ತುರುವೇಕೆರೆ:
ತಾಲ್ಲೂಕಿನ ಮಾಯಸಂದ್ರಹೋಬಳಿಯ ಮದ್ದನಹಳ್ಳಿ ಬಳಿಯ ಉಪನಾಲೆಯಲ್ಲಿ ಕೈ ಕಾಲು ತೊಳೆಯಲು ಹೋಗಿದ್ದ ಇಬ್ಬರು ಯುವಕರು ನೀರುಪಾಲಾಗಿರುವು ಘಟನೆ ಭಾನುವಾರ ಸಂಜೆ ನಡೆದಿದೆ.
ನೀರು ಪಾಲಾದ ಇಬ್ಬರು ಯುವಕರು ಬೆಂಗಳೂರು ಮತ್ತು ಮಾಗಡಿ ಮೂಲದವರಾಗಿದ್ದು ಮೃತ ಯುವಕರು ಬೆಂಗಳೂರಿನ ಏಷ್ಯಯನ್ ಪೇಯಿಂಟ್ ಅಂಗಡಿಯಿಂದ ತುರುವೇಕೆರೆ ಪಟ್ಟಣದ ಬಣ್ಣದ ಅಂಗಡಿಗೆ ಬಣ್ಣದ ಬಾಕ್ಸ್‍ಗಳನ್ನು ಇಳಿಸಿ ವಾಪಸ್ ಬೆಂಗಳೂರಿಗೆ ತೆರಳುತ್ತಿರುವಾಗ ರಾಷ್ಟ್ರೀಯ ಹೆದ್ದಾರಿಯ ಪಕ್ಕದ ಮದ್ದನಹಳ್ಳಿ ಬಳಿಯ ಉಪನಾಲೆಯಲ್ಲಿ ಕೈಕಾಲು ತೊಳೆಯಲು ಮೂವರು ನೀರಿಗಿಳಿದಿದ್ದಾರೆ. ಅದರಲ್ಲಿ ಇಬ್ಬರು ರಭಸವಾಗಿ ಹರಿಯುವ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ ಇನ್ನುಳಿದ ಒಬ್ಬ ಬಚಾವಾಗಿದ್ದಾನೆಂದು ಸ್ಥಳದಲ್ಲಿದ್ದವರು ತಿಳಿಸಿದರು.
ವಿಷಯ ತಿಳಿದು ಮುದ್ದನಹಳ್ಳಿ ಆಸುಪಾಸಿನ ಜನ ನಾಲುವೆ ಬಳಿ ಜಮಾಯಿಸಿದರು. ನೀರುಪಾಲದ ಯುವಕರ ಪೊಷಕರು ಮತ್ತು ಸಂಬಂಧಿಕರ ರೋಧನ ಹೃದಯ ಕಲಕುವಂತಿತ್ತು. ಪೊಲೀಸರು ಮತ್ತು, ಅಗ್ನಿಶಾಮಕ ಸಿಬ್ಬಂದಿಗಳು ಹಾಗು ಗ್ರಾಮಸ್ಥರೊಡಗೂಡಿ ಶವ ಶೋಧ ಕಾರ್ಯ ನಡೆಸಿದರು. ರಭಸವಾಗಿ ಹರಿಯುವ ನೀರಿನಲ್ಲಿ ಶವ ಪತ್ತೆಯಾಗದೆ ಶೋಧ ಕಾರ್ಯ ಮುಂದುವರೆಸಿದ್ದಾರೆ.
ದೂರವಾಣಿ ಕರೆ ಸ್ವೀಕರಿಸದ ಎಂಜಿನಿಯರ್:
ಶವಕ್ಕಾಗಿ ಶೋಧ ಕಾರ್ಯ ನಡೆಸಲು ಉಪನಾಲೆಯ ನೀರನ್ನು ನಿಲ್ಲಿಸುವಂತೆ ಸಂಜೆಯಿಂದ ಹೇಮಾವತಿ ಎಂಜಿನಿಯರ್‍ಗೆ ಪೊಲೀಸರು ಹಲವು ತಾಸು ಕರೆ ಮಾಡಿದರೂ ಸ್ವೀಕರಿಸದಿದ್ದರಿಂದ ನಾಲೆ ಬಳಿಯಿದ್ದ ಜನರು ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
