ಹಳೆಯ ದೃಶ್ಯಗಳನ್ನು ಸೇರಿಸಿ ವಿಡಿಯೋ ಮಾಡಲಾಗಿದೆ : ಡಿಕೆಶಿ

ಬೆಂಗಳೂರು

      ಮಂಗಳೂರು ಗಲಭೆಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಬಿಡುಗಡೆ ಮಾಡಿರುವ ದೃಶ್ಯಗಳ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ಡಿ.ಕೆ ಶಿವಕುಮಾರ್ ಹಳೆಯ ದೃಶ್ಯಗಳನ್ನು ಸೇರಿಸಿ ಬಿಡುಗಡೆ ಮಾಡಲಾಗಿದೆ ಎಂದು ಕಿಡಿಕಾರಿದ್ದಾರೆ.

    ಮಂಗಳೂರಿನಲ್ಲಿ ನಿಷೇಧಾಜ್ಞೆ ಮೀರಿದವರು ಯಾರು? ಗಲಭೆ ನಡೆದ ಸಂದರ್ಭದಲ್ಲಿ ಗುಂಡು ಹಾರಿಸಿ ಸಾಯಿಸುವಂತೆ ಪೊಲೀಸರೆ ಹೇಳುತ್ತಿದ್ದರು. ಅವರಿಗೆ ಹೊಡೆಯಿರಿ. ನೀವೆ ಸಾಯಿಸಿರಿ ಎಂಬ ಮಾತುಗಳು ದಾಖಲಾಗಿರುವುದನ್ನು ನಾನು ಕೇಳಿದ್ದೇನೆ. ಇನ್‍ಸ್ಪೆಕ್ಟರೊಬ್ಬರು ಹೇಳಿರುವ ಮಾತು ದಾಖಲಾಗಿವೆ. ಅಮಾಯಕರನ್ನು ಸಾಯಿಸಿರುವುದು ಯಾರು? ನಿಮಗೆ ಎಲ್ಲಿತ್ತು ಆದೇಶ? ಇದಕ್ಕೆ ಬಿಜೆಪಿ ಸರ್ಕಾರವೆ ನೇರ ಹೊಣೆ ಎಂದು ಆರೋಪಿಸಿದ್ದಾರೆ.

     ಮಂಗಳೂರು ಜನರು ದುಬೈ ಮತ್ತಿತರ ಕೊಲ್ಲಿ ರಾಷ್ಟ್ರಗಳಲ್ಲಿ ಕಷ್ಟಪಟ್ಟು ಮತ್ತೆ ವಾಪಸ್ ಬಂದು ಜೀವನ ನಡೆಸುತ್ತಿದ್ದಾರೆ. ಆದರೆ, ಈ ಹಿಂದೆ ಕೇಂದ್ರ ಸರ್ಕಾರ ನೋಟು ಅಮಾನ್ಯೀಕರಣದಿಂದ ಈಗಾಗಲೆ ನಾಗರಿಕರು ಕಂಗಾಲಾಗಿದ್ದಾರೆ.ಈಗ 2 ಸಾವಿರ ಮುಖ ಬೆಲೆಯ ನೋಟನ್ನು ಕೇಂದ್ರ ಸರ್ಕಾರ ನಿಷೇಧಿಸಲು ಚಿಂತನೆ ನಡೆಸುತ್ತಿದೆ. ಆದರೆ, 500 ಹಾಗೂ ಸಾವಿರ ಮುಖ ಬೆಲೆಯ ನೋಟನ್ನು ನಿಷೇಧಿಸಿದಾಗ ಎಷ್ಟು ಕಾಳಧನ ಪತ್ತೆಯಾಯಿತು ಎಂಬ ಬಗ್ಗೆ ವಿವರಗಳನ್ನೆ ಕೊಟ್ಟಿಲ್ಲ.ಇಂತಹ ಕ್ರಮ ಕೈಗೊಂಡ ಕೇಂದ್ರ ಸರ್ಕಾರವನ್ನು ಯಾರೂ ಕೂಡ ಕ್ಷಮಿಸುವುದಿಲ್ಲ ಎಂದು ಹೇಳಿದರು.

     ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಮಂಗಳೂರು ಹಿಂಸಾಚಾರದ ಪ್ರಕರಣವನ್ನು ಕಾಂಗ್ರೆಸ್ ಅಥವಾ ತಮ್ಮ ತಲೆಗೆ ಕಟ್ಟಲಿ. ಆದರೆ, ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಪೌರತ್ವ ನಿಷೇಧ ಕಾಯ್ದೆ ವಿರುದ್ಧ ಪಕ್ಷಾತೀತವಾಗಿ ರಸ್ತೆಗಿಳಿದು ಧಂಗೆ ಎದ್ದಿದ್ದಾರೆ. ಯಾವುದೇ ಕಾರಣಕ್ಕೂ ಜನರ ಭಾವನೆಯನ್ನು ಕೆಣಕಬಾರದು ಎಂದು ಹೇಳಿದರು.

    ಬೆಂಗಳೂರಿನ ಪುರಭವನದ ಮುಂದೆ ನಡೆದ ಪೌರತ್ವ ಮಸೂದೆ ಪರ ರ್ಯಾಲಿ ವೇಳೆ ಸಂಸದ ತೇಜಸ್ವಿ ಸೂರ್ಯ ಮಾತನಾಡುವ ಭರದಲ್ಲಿ ಎದೆ ಸೀಳಿದರೆ ಎರಡು ಅಕ್ಷರವಿಲ್ಲ, ಪಂಕ್ಚರ್ ಹಾಕಿಕೊಂಡು ಕೆಲಸ ಮಾಡುತ್ತಿದ್ದಾರೆ ಎಂಬ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಅವರು, ಮನೆಯ ಮುಂದೆ ಕಸ ರಾಶಿ ಹಾಕಿದಾಗ ಅದನ್ನು ಸ್ವಚ್ಛಗೊಳಿಸುವರು ಯಾರು ಎಂದು ಪ್ರಶ್ನಿಸಿದರು.

    ದೇಶದ ವಿದ್ಯಾವಂತರು, ಬುದ್ಧಿವಂತರು ಇಲ್ಲದಿದ್ದರೂ ಪರವಾಗಿಲ್ಲ, ಆದರೆ, ಪ್ರಜ್ಞಾವಂತ ಸಮಾಜ ಇರಬೇಕು ಎಂದು ಡಿ.ಕೆ.ಶಿವಕುಮಾರ್ ಹೇಳಿದರು. ಜಾರ್ಖಂಡ್ ವಿಧಾನಸಭಾ ಚುನಾವಣೆಯ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಮತದಾರರು ಉತ್ತರ ಕೊಟ್ಟಿದ್ದಾರೆ ಎಂದು ತಿಳಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap