13ರಿಂದ 20 ಆಸನ ಸಾಮರ್ಥ್ಯದ ವಾಹನಗಳ ತೆರಿಗೆ ಇಳಿಕೆ..!

ಬೆಂಗಳೂರು

     ರಾಜ್ಯದಲ್ಲಿನ 13 ರಿಂದ 20 ಆಸನ ಸಾಮರ್ಥ್ಯವುಳ್ಳ ಒಪ್ಪಂದ ವಾಹನಗಳಿಗೆ ಪ್ರತಿ ಆಸನಕ್ಕೆ ನಿಗದಿ ಪಡಿಸಿರುವ 900 ರೂಪಾಯಿಗಳ ಮೋಟಾರು ವಾಹನ ತೆರಿಗೆಯನ್ನು 700 ರೂಪಾಯಿಗೆ ಇಳಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದ್ದಾರೆ.ಮೋಟಾರು ವಾಹನಗಳ ತೆರಿಗೆಯನ್ನು ಇಳಿಸಬೇಕೆಂದು ಹಲವಾರು ವಾಹನ ಮಾಲೀಕರು, ವಿವಿಧ ಸಂಘಟನೆಗಳು ಸಲ್ಲಿಸಿದ್ದ ಬೇಡಿಕೆಗೆ ಸ್ಪಂದಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

     ಕರ್ನಾಟಕ ಮೋಟಾರು ವಾಹನಗಳ ತೆರಿಗೆ ಅಧಿನಿಯಮ 1957 ರಕರ್ನಾಟಕ ಕಾಯ್ದೆ 35/1957) ಕಲಂ 16(1) ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ಮೋಟಾರು ವಾಹನಗಳ ಅಧಿನಿಯಮ 1957ರ ಷೆಡ್ಯೂಲ್ (ಎ) ಐಟಂ ಸಂಖ್ಯೆ: 5(ಎ)(iii) ರಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.ಪ್ರತಿ ಆಸನಕ್ಕೆ ನಿಗದಿಪಡಿಸಿದ ದರವನ್ನು ಸರಿಸುಮಾರು 200 ರೂಪಾಯಿ ಕಡಿಮೆ ಮಾಡಿರುವುದರಿಂದ ವಾಹನ ಮಾಲೀಕರು ಮತ್ತು ವಿವಿಧ ಸಂಘಟನೆಗಳ ಬಹುದಿನಗಳ ಬೇಡಿಕೆಗೆ ಈಡೇರಿದಂತಾಗಿದೆ. ಇತರ ಕೆಲವು ರಾಜ್ಯಗಳು ಕೂಡ ಲಾಕ್ ಡೌನ್ ಸಂಕಷ್ಟದಲ್ಲಿದ್ದ ವಾಹನ ಮಾಲೀಕರಿಗೆ ಸಹಾಯ ಮಾಡುವ ಉದ್ದೇಶದಿಂದ ತೆರಿಗೆ ಇಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap