ಹೆಚ್ ಡಿ ಕೋಟೆ :ಗ್ರಾಮಸ್ಥರಿಗೆ ಮತ್ತೆ ಒಂಟಿ ಸಲಗದ ಭೀತಿ..!

ಮೈಸೂರು

     ಮೈಸೂರಿನ ಸುತ್ತಾಮುತ್ತಲಿನ ಕಾಡಿನಲ್ಲಿ ವನ್ಯಜೀವಿ ಸಂಪತ್ತು ಹೇರಳವಾಗಿದ್ದು ಅದು ಆಗಾಗ ನಾಡಿನತ್ತ ಮುಖ ಮಾಡುವುದು ಸಾಮಾನ್ಯ ಅದರಲ್ಲೂ ಒಂಟಿ ಸಲಗಗಳು ಎಚ್.ಡಿ.ಕೋಟೆ ತಾಲೂಕಿನಲ್ಲಿರುವ ಕಾಡಂಚಿನ ಗ್ರಾಮಗಳಲ್ಲಿ ಹಾವಳಿ ಮುಂದುವರೆಸಿವೆ.ನಾಡಿಗೆ ಬಂದ ಕಾಡಾನೆಗಳ ಹಿಂಡನ್ನು ಯಶಸ್ವಿಯಾಗಿ ಕಾಡಿಗೆ ಅಟ್ಟಿ ನೆಮ್ಮದಿಯುಸಿರು ಬಿಡುವ ವೇಳೆಗೆ ಮತ್ತೊಂದು ಕಡೆಯಲ್ಲಿ ಕಾಣಿಸಿಕೊಳ್ಳುತ್ತಿವೆ , ಇತ್ತ ರೈತರು ತಾವು ಬೆಳೆದ ಬೆಳೆಗಳನ್ನು ಕಾಪಾಡಿಕೊಳ್ಳಲಾಗದೆ ಕಂಗಾಲಾಗಿದ್ದಾರೆ.

     ಕಷ್ಟಪಟ್ಟು ಬೆಳೆದ ಬೆಳೆ ಫಸಲು ಕೈಗೆ ಬರುತ್ತಿದ್ದಂತೆಯೇ ಅರಣ್ಯದಿಂದ ಜಮೀನಿನತ್ತ ನುಗ್ಗುವ ಕಾಡಾನೆಗಳ ಹಿಂಡು ಎಲ್ಲವನ್ನು ತಿಂದು ಅಥವಾ ತುಳಿದು ನಾಶ ಮಾಡುತ್ತಿವೆ. ಇದರಿಂದ ವರ್ಷವಿಡೀ ಕಷ್ಟ ಪಟ್ಟು ಬೆಳೆದ ಬೆಳೆ ಕೈ ಹತ್ತುವ ವೇಳೆಗೆ ನಾಶವಾಗಿಬಿಡುವುದನ್ನು ಕಂಡು ರಯತರು ಒದ್ದಾಡುತ್ತಿದ್ದಾರೆ.

    ಇದೀಗ ಹಂಪಾಪುರ-ಹೊಮ್ಮರಗಳ್ಳಿ ಗ್ರಾಮಗಳ ನಡುವೆ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿಂಭಾಗದಲ್ಲಿ ಕಾಣಿಸಿಕೊಂಡಿರುವ ಒಂಟಿ ಸಲಗ ಜನರಲ್ಲಿ ಪ್ರಾಣ ಭೀತಿಯುಂಟು ಮಾಡಿದೆ. ಇದು ಎಲ್ಲೆಂದರಲ್ಲಿ ಅಲೆಯುತ್ತಿರುವುದರಿಂದ ಯಾವಾಗ ತಮ್ಮ ಗ್ರಾಮದತ್ತ ಬಂದು ಬಿಡುತ್ತೋ ಎಂಬ ಭಯ ಅಕ್ಕ ಪಕ್ಕದ ಗ್ರಾಮಸ್ಥರದ್ದಾಗಿದೆ. ಇದರಿಂದ ಬೇಸತ್ತಿರುವ ಗ್ರಾಮಸ್ಥರು ಅರಣ್ಯ ಇಲಾಖೆಗೆ ಹಿಡಿ ಶಾಪ ಹಾಕುತ್ತಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap