ಕೆಟ್ಟು 8 ತಿಂಗಳಾದರೂ ದುರಸ್ಥಿಯಾಗದ ನೀರಿನ ಘಟಕ

ಹುಳಿಯಾರು

     ಕೆಟ್ಟು 8 ತಿಂಗಳಾದರೂ ಶುದ್ಧ ನೀರಿನ ಘಟಕ ದುರಸ್ಥಿ ಮಾಡದೆ ನಿರ್ಲಕ್ಷ್ಯಿಸಿದ್ದಾರೆ ಎಂದು ಹುಳಿಯಾರು ಸಮೀಪದ ಹಂದನಕೆರೆ ಹೋಬಳಿಯ ಗೋಪಾಲಪುರ ಗ್ರಾಮದ ನಿವಾಸಿ ಜಿ.ಮಂಜುನಾಥ್ ಆರೋಪಿಸಿದ್ದಾರೆ.ಸರಿಸುಮಾರು 130 ಮನೆಗಳಿರುವ ಐನೂರಕ್ಕೂ ಹೆಚ್ಚು ಜನಸಂಖ್ಯೆಯುಳ್ಳ ಗ್ರಾಮದ ಜನರಿಗೆ ಶುದ್ಧ ಕುಡಿಯುವ ನೀರು ಕೊಡುವ ಸಲುವಾಗಿ ಲಕ್ಷಾಂತರ ರೂ. ವೆಚ್ಚದಲ್ಲಿ ಸರ್ಕಾರ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಿತ್ತು.

    ಈ ಘಟಕದ ನೀರು ಬಹಳ ಸಿಹಿಯಾಗಿಯೂ ಮತ್ತು ಪ್ಲೂರೈಡ್ ಮುಕ್ತವಾಗಿಯೂ ಅತೀ ಶುದ್ಧವಾಗಿ ಸಿಗುತ್ತಿದ್ದರಿಂದ ಅಕ್ಕಪಕ್ಕದ ಹಳ್ಳಿಗಳ ನೂರಾರು ಜನರು ನಿತ್ಯ ನೀರು ತೆಗೆದುಕೊಂಡು ಹೋಗುತ್ತಿದ್ದರು. ಆದರೆ 8 ತಿಂಗಳ ಹಿಂದಷ್ಟೆ ಕಾಯಿನ್ ಬಾಕ್ಸ್ ಕೆಟ್ಟಿರುವ ನೆಪದಲ್ಲಿ ಘಟಕಕ್ಕೆ ಬೀಗ ಜಡಿದಿದ್ದಾರೆ.

     ಪರಿಣಾಮ ಇಲ್ಲಿನ ನಿವಾಸಿಗಳು ಸೇರಿದಂತೆ ಅಕ್ಕಪಕ್ಕದ ಹಳ್ಳಿಗಳ ಜನ ಶುದ್ಧ ಕುಡಿಯುವ ನೀರಿಗಾಗಿ ಅಕ್ಷರಶಃ ಅಲೆಯುವಂತ್ತಾಗಿದೆ. ಪಕ್ಕದ ಲಕ್ಷ್ಮೀಪುರ ಅಥವಾ ಹರೇನಹಳ್ಳಿ ಗೇಟ್‍ಗೆ ಹೋಗಿ ನೀರು ತರುವ ಅನಿವಾರ್ಯತೆ ಸೃಷ್ಢಿಯಾಗಿದೆ.ಈ ಬಗ್ಗೆ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತಂದರೂ ಇದುವರೆವಿಗೆ ಸ್ಪಂಧಿಸದೆ ನಿರ್ಲಕ್ಷ್ಯಿಸಿದ್ದಾರೆ. ಇನ್ನಾದರೂ ತಾಲೂಕು ಕಿರು ನೀರು ಸರಬರಾಜು ಎಂಜಿನಿಯರ್ ಇತ್ತ ಗಮನ ಹರಿಸಿ ನೀರಿನ ಘಟಕ ದುರಸ್ಥಿ ಮಾಡಿಸಿ ಶುದ್ಧ ನೀರಿಗಾಗಿ ಗೋಪಾಲಪುರದ ಜನ ಊರೂರು ಅಲೆಯುವುದನ್ನು ತಪ್ಪಿಸುವಂತೆ ಮನವಿ ಮಾಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap