ಮಧುಗಿರಿ:
ಕಳೆದ 3 ತಿಂಗಳಿನಿಂದ ನೀರಿದ್ದರು ಸಹ ಶುದ್ದ ನೀರಿನ ಘಟಕವು ಕಾರ್ಯನಿರ್ವಹಿಸದೆ ಲಕ್ಷಾಂತರು ರೂ ಮೌಲ್ಯದ ವಸ್ತುಗಳು ಸ್ತಬ್ಧವಾಗಿದ್ದು ಶುದ್ಧ ನೀರಿನಿಂದ ಗ್ರಾಮಸ್ಥರು ವಂಚಿತರಾಗಿದ್ದಾರೆ.
ತಾಲ್ಲೂಕಿನ ಕಸಬ ಹೋಬಳಿಯ ಗಂಜಲಗುಂಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮುದ್ದನೇಹಳ್ಳಿ ಗ್ರಾಮಸ್ಥರು ಶುದ್ದ ನೀರಿಗಾಗಿ ಸುಮಾರು 2 ಕಿ.ಮೀ ದೂರದ ಕೃಷ್ಣಯ್ಯನ ಪಾಳ್ಯ ಹಾಗೂ ದಾಸಪ್ಪನ ಪಾಳ್ಯಕ್ಕೆ ಶುದ್ಧ ನೀರಿಗಾಗಿ ಹೋಗ ಬೇಕಾದ ಅನಿರ್ವಾಯತೆ ಎದುರಾಗಿದೆ. ಗ್ರಾಮೀಣಾ ಕುಡಿಯುವ ನೀರು ಮತ್ತು ಸರಬರಾಜು ಇಲಾಖೆಯ ವತಿಯಿಂದ ಲಕ್ಷಾಂತರ ರೂಗಳನ್ನು ವೆಚ್ಚ ಮಾಡಿ ಮುದ್ದಯ್ಯನ ಪಾಳ್ಯ ಗ್ರಾಮದಲ್ಲಿ ಘಟಕವನ್ನು ತೆರೆಯಲಾಗಿತ್ತು.
ಘಟಕದಲ್ಲಿ ನೀರಿನ ಲಭ್ಯತೆ ಇದ್ದರು ಸಹ ಕಳೆದ ಮೂರು ತಿಂಗಳಿನಿಂದ ಸ್ತಬ್ಧವಾಗಿದ್ದು ಅಧಿಕಾರಿಗಳು ರಿಪೇರಿ ಮಾಡಿಸುವ ಗೋಜಿಗೆ ಹೋಗಿಲ್ಲ ಎಂಬುದು ಗ್ರಾಮಸ್ಥರ ಆರೋಪ.ಗ್ರಾಮಸ್ಥ ರಾಜು ಮಾತನಾಡಿ ಬೋರ್ ವೆಲ್‍ನಲ್ಲಿ ನೀರು ಹೆಚ್ಚಾಗಿದೆ ಆದರೂ ಘಟಕ್ಕೆ ನೀರು ಸರಬರಾಜು ಮಾಡುತ್ತಿಲ್ಲ ಹಲವಾರು ಬಾರಿ ಸಂಬಂಧಪಟ್ಟವರಿಗೆ ಹೇಳಿದ್ದರೂ ಸಹ ಇದೂ ವರೆವಿಗೂ ಸರಿಪಡಿಸಲು ಮುಂದಾಗಿಲ್ಲ. ಘಟಕದ ಬಾಗಿಲು ಹಾಳಾಗಿದೆ ಎಂದರು.
ಗ್ರಾಮಸ್ಥ ಆನಂದ್ ಮಾತನಾಡಿ ಕಳೆದ ಮೂರು ತಿಂಗಳಿನಿಂದ ಶುದ್ಧ ನೀರಿನ ಘಟಕ ಕೆಟ್ಟು ನಿಂತಿದೆ. ಈ ಹಿಂದೆ ಕಾಯಿನ್‍ಗಳನ್ನು ಹಾಕಿ ನೀರು ಪಡೆಯಲಾಗುತ್ತಿದ್ದು ಈಗ ನೀರಿದ್ದರು ಸಹ ನೀರು ಫಿಲ್ಟರ್ ಆಗುತ್ತಿಲ್ಲ ಎಂದು ಘಟಕ ಬಂದ್ ಮಾಡಲಾಗಿದೆ. ನೀರಿಗಾಗಿ ಅಕ್ಕಾಪಕ್ಕಾದ ಗ್ರಾಮಗಳಿಗೆ ಹೋಗ ಬೇಕಾಗಿದೆ. ಆದಷ್ಟೂ ಬೇಗಾ ಸಂಭಂಧಪಟ್ಟವರು ಸರಿಪಡಿಸಿ ಗ್ರಾಮಸ್ಥರಿಗೆ ಅನೂಕೂಲ ಮಾಡಿಕೊಡುವಂತೆ ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
