ತಂತ್ರಜ್ಞಾನ ಬಳಸಿ ಕನ್ನಡ ಕಟ್ಟುವ ಕೆಲಸ ಆಗಬೇಕು..!

ತುಮಕೂರು

    ತಂತ್ರಜ್ಞಾನ ಬಳಸಿಕೊಂಡು ಮಕ್ಕಳೊಂದಿಗೆ ಕನ್ನಡ ಭಾಷೆಯನ್ನು ಕಟ್ಟುವ ಕೆಲಸ ಮಾಡಿದರೆ ಕನ್ನಡದ ಬೆಳವಣಿಗೆ ಸಾಧ್ಯ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ, ಚಲನ ಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ ಹೇಳಿದರು.

   ಮೈಸೂರು ವಿಶ್ವವಿದ್ಯಾಲಯ ಪುನಶ್ಚೇತನ ಕನ್ನಡ ಅಧ್ಯಾಪಕರ ಒಕ್ಕೂಟದ ಆಶ್ರಯದಲ್ಲಿ ಭಾನುವಾರ ನಗರದಲ್ಲಿ ನಡೆದ ಕನ್ನಡದ ನಾಳೆಗಳು ಎಂಬ ವಿಷಯದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ಸಿಬಿಎಸ್‍ಸಿ, ಐಸಿಎಸ್‍ಸಿ, ನವೋದಯ, ಉರ್ದು ಶಾಲೆ ಸೇರಿದಂತೆ ಎಲ್ಲಾ ಶಾಲೆಗಳಲ್ಲೂ ಕಡ್ಡಾಯವಾಗಿ ಒಂದನೇ ತರಗತಿಯಿಂದ ಕನ್ನಡವನ್ನು ಒಂದು ವಿಷಯವಾಗಿ ಕಲಿಸಬೇಕು ಎಂದು ಸರ್ಕಾರ 2017ರಲ್ಲಿ ಆದೇಶ ಮಾಡಿತ್ತು.

   ಅದು ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿದ್ದರೆ, ಆ ಶಾಲೆ ಮಕ್ಕಳು ಈ ವೇಳೆಗೆ ಮೂರನೇ ತರಗತಿಯಲ್ಲಿ ಕನ್ನಡ ಭಾಷೆ ಕಲಿಯುತ್ತಿದ್ದರು. ಆದರೆ, ಅಸಡ್ಡೆ ಮಾಡಿ, ನೆಪ ಹೇಳಿ ಅನುಷ್ಠಾನಗೊಳಿಸಲಿಲ. ಕಲಿಸಿದ್ದರೆ ಹತ್ತು ವರ್ಷಗಳಲ್ಲಿ ಕನ್ನಡ ಭಾಷೆ ಪ್ರಾಬಲ್ಯವಾಗಿ ಬೆಳೆಯುತ್ತಿತ್ತು ಎಂದು ಹೇಳಿದರು.

   ಶಾಲಾ ಹಂತದಲ್ಲಿಯೇ ಕನ್ನಡ ಭಾಷೆಯ ಕಲಿಕೆ ಆರಂಭವಾಗಬೇಕು. ಕನ್ನಡ ಅಧ್ಯಯನ ವಿಷಯವಾಗಬೇಕು. ಮಾತೃಭಾಷೆ ನಮ್ಮ ಸಂಸ್ಕøತಿಯನ್ನು ಪ್ರತಿಬಿಂಬಿಸುತ್ತದೆ. ಮಾತೃಭಾಷೆ ನಾಶವಾದರೆ ಅದರೊಂದಿಗೆ ನಮ್ಮ ಸಂಸ್ಕøತಿಯೂ ನಾಶವಾಗುತ್ತದೆ ಎಂಬ ಎಚ್ಚರಿಕೆ ಇರಬೇಕು ಎಂದರು.

   ಇತಿಹಾಸವನ್ನು ತಿರುಚುವ ಪ್ರಯತ್ನಗಳು ಹಿಂದಿನಿಂದಲೂ ನಡೆದು ಬಂದಿವೆ. ಒಂದು ದೇಶ ಹಾಳು ಮಾಡಲು ಯುದ್ಧ ಮಾಡಬೇಕಾಗಿಲ್ಲ, ಆ ದೇಶದ ಸಂಸ್ಕøತಿಯನ್ನು ಹಾಳು ಮಾಡಿದರೆ ಸಾಕು, ಆ ದೇಶ ತಾನೇ ಹಾಳಾಗುತ್ತದೆ. ಕನ್ನಡದ ಮೇಲೂ ಇಂತಹ ದಾಳಿಯ ವ್ಯವಸ್ಥಿತ ಹುನ್ನಾರ ನಡೆದಿದೆ. ವ್ಯಕ್ತಿ ತನ್ನ ಓದಿನೊಂದಿಗೆ ಸಂಸ್ಕøತಿ ಬೆರೆಸಿಕೊಂಡಾಗ ಬೆಳೆಯುತ್ತಾನೆ ಎಂದು ಹೇಳಿದರು.

   ನಮ್ಮ ವ್ಯವಸ್ಥೆಯಲ್ಲಿ ಮೂಲವಾಗಿ ಕಂಡುಬರುವುದು ಗುರು-ಶಿಷ್ಯ ಪರಂಪರೆ. ಹಿಂದೆ ಶಿಕ್ಷಣವು ಗುರು ಕೇಂದ್ರಿತವಾಗಿತ್ತು, ಈಗ ಶಿಷ್ಯ ಕೇಂದ್ರಿತವಾಗಿದೆ. ಶಿಷ್ಯ ಬಯಸಿದ್ದನ್ನು ಗುರು ಕಲಿಸುವ ಪರಿಸ್ಥಿತಿ ಬಂದಿದೆ. ಈಗಂತೂ ಜ್ಞಾನ ಅರ್ಜಿಸಬೇಕಾದ ಉತ್ಕಟತೆ ಕಮ್ಮಿಯಾಗುತ್ತಿದೆ. ಬರೀ ಪ್ರಶ್ನೆಗಳನ್ನು ಕೇಳುವ ಮನೋಭಾವ ಬೆಳೆಯುತ್ತಿದೆ ಹೊರತು, ಉತ್ತರ ಪಡೆಯುವ ತಾಳ್ಮೆ, ಅಗತ್ಯವಿಲ್ಲ ಎನ್ನುವ ಮನಸ್ಥಿತಿ ಹೆಚ್ಚಾಗುತ್ತಿದೆ ಎಂದು ನಾಗಾಭರಣ ವಿಷಾದಿಸಿದರು.

    ಕನ್ನಡ ಕಲಿಯಲು ಅನುಕೂಲ ವ್ಯವಸ್ಥೆ ಮಾಡಿಕೊಡಬೇಕು. ಕನ್ನಡ ಕಲಿಕೆಯ ಮನಸ್ಥಿತಿ, ಅನಿವಾರ್ಯತೆ ರೂಪಿಸಬೇಕು. ಕಲಿಕೆಗೆ ಅನುಕೂಲವಾಗುವಂತಹ ತಂತ್ರಜ್ಞಾನಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಸಲಹೆ ಮಾಡಿದರು.ಸಮಾರಂಭದ ಸಾನಿಧ್ಯವಹಿಸಿದ್ದ ಹಿರೇಮಠದ ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಕನ್ನಡವನ್ನು ಆಧುನೀಕರಣದ ಸ್ವರೊಂದಿಗೆ ಅವಿನಾಭಾವಗೊಳಿಸಬೇಕು. ಕನ್ನಡ ಆಪ್, ಕನ್ನಡ ಕೋಶಗಳು ಸುಲಭವಾಗಿ ಸಿಗುವಂತೆ ಮಾಡಬೇಕು ಎಂದು ಹೇಳಿದರು.

     ಕನ್ನಡಕ್ಕೆ ದೊಡ್ಡ ಇತಿಹಾಸವಿದೆ. ಅನೇಕ ಸಾಹಿತಿಗಳು ತಮ್ಮ ಸಾಹಿತ್ಯದ ಮೂಲಕ ಭಾಷೆಯನ್ನು ಮತ್ತಷ್ಟು ಶ್ರೀಮಂತಗೊಳಿಸಿದ್ದಾರೆ. ಕನ್ನಡ ಮನಸ್ಥಿತಿ ಬೆಳಸಿಕೊಂಡು ಮಾತೃಭಾಷೆಯನ್ನು ಉನ್ನತ ಮಟ್ಟಕ್ಕೆ ತರಲು ಎಲ್ಲರೂ ಕಾಳಜಿ ವಹಿಸಬೇಕು ಎಂದರು.

    ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಬಾ. ಹ. ರಮಾಕುಮಾರಿ ‘ಪುನರ್ಕಲ್ಪ’ ಕೃತಿ ಬಿಡುಗಡೆ ಮಾಡಿದರು.
ಹಿರಿಯ ಕನ್ನಡ ಪ್ರಾಧ್ಯಾಪಕ ಪ್ರೊ. ನೀಲಗಿರಿ ತಳವಾರ, ಸಹಾಯಕ ಪ್ರಾಧ್ಯಾಪಕ ಡಾ. ರತ್ನಾಕರ ಮಲ್ಲಮೂಲೆ, ಡಾ. ರಂಗಸ್ವಾಮಿ, ಡಾ. ಡಿ. ವಿ. ಪರಶಿವಮೂರ್ತಿ, ಡಾ. ಡಿ. ಶಿವನಂಜಯ್ಯ, ಡಾ. ರೇಣುಕಾಪ್ರಸಾದ್, ಪ್ರೊ. ಮಂಜುನಾಥ್ ಮತ್ತಿತರರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap