ಗಮನ ಬೇರೆಡೆ ಸೆಳೆದು ಕಳ್ಳತನ

ಬೆಂಗಳೂರು

     ಬ್ಯಾಂಕ್‍ನಲ್ಲಿ ಹಣ ಡ್ರಾ ಮಾಡಿಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರನ್ನು ಹಿಂಬಾಲಿಸಿ ಗಮನ ಬೇರೆಡೆ ಸೆಳೆದು ಅವರ ಸ್ಕೂಟರ್‍ನಲ್ಲಿದ್ದ 10 ಸಾವಿರ ನಗದು ಎಟಿಎಂ ಕಾರ್ಡ್‍ಗಳನ್ನು ದೊಚ್ಚಿದ್ದ ನಾಲ್ವರು ಬಾಣಸವಾಡಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

     ಕೃತ್ಯ ವೆಸಗಿದ ಆಂಧ್ರ ಪ್ರದೇಶದ ತಿರುಪತಿಯ ಆರ್.ಗೋಪಿ(32)ಗೋಧಾವರಿಯ ಅಪ್ಪಾರಾವ್(40)ಕಾಕಿನಾಡದ ಗೋಪಿ ಅಲಿಯಾಸ್ ರಾಜನ್ (43)ರಂಗಾರೆಡ್ಡಿ ಜಿಲ್ಲೆಯ ಸುರೇಶ್(44)ನನ್ನು ಬಂಧಿಸಿ ಮೂರು ಬೈಕ್ ಹಾಗೂ ನಗದನ್ನು ವಶಪಡಿಸಿಕೊಳ್ಳಲಾಗಿದೆ.

       ಬಾಣಸವಾಡಿಯ ಜಾರ್ಜ್ ಸೆಲ್ವೆ ಎಂಬುವವರು ಕಳೆದ ಸೆ.3ರಂದು ಬಾಣಸವಾಡಿಯ 80 ಅಡಿ ರಸ್ತೆಯ ಎಸ್‍ಬಿಐ ಬ್ಯಾಂಕಿಗೆ ಹೋಗಿ 10 ಸಾವಿರ ಹಣವನ್ನು ಡ್ರಾ ಮಾಡಿಕೊಂಡು ಹೊಂಡಾ ಅಕ್ಟೀವಾ ಸ್ಕೂಟರ್‍ನ ಡಿಕ್ಕಿಯಲ್ಲಿಕೊಂಡು ಹೊರಟು ಬೆಳಿಗ್ಗೆ 11.15ರ ವೇಳೆ ಕಮ್ಮನಹಳ್ಳಿ ಮುಖ್ಯರಸ್ತೆಯಲ್ಲಿನ ಅಭಿರುಚಿ ಹೊಟೇಲ್ ಬಳಿ ಕಾರು ನಿಲ್ಲಿಸಿ ಜೆರಾಕ್ಸ್ ಅಂಗಡಿಗೆ ಹೋಗಿ ದಾಖಲಾತಿಗಳನ್ನು ಲ್ಯಾಮಿನೇಷನ್ ಮಾಡಿಸಿಕೊಂಡು ಸ್ಕೂಟರ್ ಬಳಿ ಬಂದಾಗ ಎನೋ ಬಿದ್ದಿದೆ ಎಂದು ಗಮನ ಬೇರೆಡೆ ಸೆಳೆದು ಡಿಕ್ಕಿಯಲ್ಲಿಟ್ಟ ಹಣ ಎಟಿಎಂ ಕಾರ್ಡ್‍ನ್ನು ದೋಚಿ ಪರಾರಿಯಾಗಿದ್ದರು.

         ಈ ಸಂಬಂಧ ಬಾಣಸವಾಡಿ ಠಾಣೆಯಲ್ಲಿ ದೂರು ನೀಡಲಾಗಿತ್ತು . ಬಾಣಸವಾಡಿ ಬ್ಯಾಂಕ್‍ನ ಬಳಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದವರನ್ನು ಸಿಸಿ ಟಿವಿ ಕ್ಯಾಮಾರದಲ್ಲಿ ಪರಿಶೀಲಿಸಿ ಕಾರ್ಯಾಚರಣೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link