ಬೆಂಗಳೂರು:
ಝೂಮ್ ಕಾರನ್ನು ಬಾಡಿಗೆಗೆ ಪಡೆದು ಅಂಗಡಿಗಳಿಗೆ ನುಗ್ಗಿ ಮೋಜು ಮಾಡುತ್ತಿದ್ದ ರಾಜಸ್ತಾನ ಮೂಲದ ನಾಲ್ವರು ಆರೋಪಿಗಳನ್ನು ವರ್ತೂರು ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರಾಜಸ್ಥಾನ ಮೂಲದ ವೀರೇಂದ್ರ ಸಿಂಗ್(23) ವಿನೋದ್ ಸಿರ್ವಿ (21), ಗೋಪಾಲ್ ಸಿಂಗ್(23)ರಾಕೇಶ್ ಪ್ರಜಾಪತ್(25)ನನ್ನು ಬಂಧಿಸಿ 9 ಲಕ್ಷ ರೂ. ಮೌಲ್ಯದ ಒಂದು ಝೂಮ್ ಕಾರು, 5000 ರೂ. ಬೆಲೆಯ ಸೌಂದರ್ಯ ವರ್ಧಕಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕೂಲಿ ಅರಸಿ ಬಂದಿದ್ದ ವೀರೇಂದ್ರ ಸಿಂಗ್,ವಿನೋದ್ ಸಿರ್ವಿ ಹಾಗೂ ಗೋಪಾಲ್ ಸಿಂಗ್ ರಾಜಸ್ಥಾನ ಮೂಲದವರ ಅಂಗಡಿಗಳಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು ಹೆಚ್ಚಿನ ಹಣದಾಸೆಗೆ ಕಳ್ಳತನಕ್ಕಿಳಿದಿದ್ದ ಆರೋಪಿಗಳು ಕಳವು ಮಾಡಿದ ಮಾಲುಗಳನ್ನು ರಾಕೇಶ್ ಪ್ರಜಾಪತ್‍ಗೆ ಮಾರಾಟ ಮಾಡಿ ಮೋಜು ಮಾಡುತ್ತಿದ್ದರು ಎಂದು ಎಂದು ವೈಟ್‍ಫೀಲ್ಡ್ ವಿಭಾಗದ ಡಿಸಿಪಿ ಅಬ್ದುಲ್ ಅಹದ್ ತಿಳಿಸಿದ್ದಾರೆ
ಝೂಮ್ ಕಾರನ್ನು ಬಾಡಿಗೆಗೆ ಪಡೆದು ವರ್ತೂರಿನ ಕ್ರೀಸಾಲಿನ್ ಶಾಲೆಯ ಹಿಂಭಾಗ ಸ್ಕೂಲ್ ಬಸ್‍ಗಳಿಗೆ ಅಳವಡಿಸಲು ತಂದಿದ್ದ ಸುಮಾರು 95 ಸಾವಿರ ರೂ. ಬೆಲೆಬಾಳುವ ಬ್ಯಾಟರಿಗಳನ್ನು ಕಳವು ಮಾಡಿದ್ದರು.20 ದಿನಗಳ ಹಿಂದೆ ವರ್ತೂರು ಬಳಗೆರೆ ಮಖ್ಯ ರಸ್ತೆಯಲ್ಲಿ ಝೂಮ್ ಕಾರ್‍ನಲ್ಲಿ ಬಂದು ಮೆಡಿಕಲ್ ಶಾಪ್‍ವೊಂದರರ ಬಾಗಿಲು ಮುರಿದು ಅಲ್ಲಿದ್ದ ಸೌಂದರ್ಯ ವರ್ಧಕಗಳನ್ನು ಕಳವು ಮಾಡಿ ಮಾರಾಟ ಮಾಡಿದ್ದರು.
ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ವರ್ತೂರು ಠಾಣೆ ಪೊಲಿಸ್ ಇನ್ಸ್‍ಪೆಕ್ಟರ್ ಬಿ.ರಾಮಚಂದ್ರ ಮತ್ತಿತರ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ .ಆರೋಪಿಗಳ ಬಂಧನದಿಂದ ವರ್ತೂರು ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದ 2 ಪ್ರಕರಣಗಳು ಬೆಳಕಿಗೆ ಬಂದಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ







