ರಾಜಕೀಯದಲ್ಲಿ ಶಾಶ್ವತವಾದ ಮಿತ್ರರು ಶತ್ರುಗಳು ಇರುವುದಿಲ್ಲ :ಕೆ.ಎನ್ ರಾಜಣ್ಣ

ಮಧುಗಿರಿ:

     ಚುನಾವಣೆಗಳು ಸಾಮಾನ್ಯ ಆದರೆ ರಾಜಕೀಯ ಕ್ಷೇತ್ರದಲ್ಲಿ ಶಾಶ್ವತವಾದ ಮಿತ್ರರು ಶತ್ರುಗಳು ಇರುವುದಿಲ್ಲ ಎಂದು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್ ರಾಜಣ್ಣ ಅಭಿಪ್ರಾಯಪಟ್ಟರು.

    ಪಟ್ಟಣದ ಎಂಎನ್‍ಕೆ ಸಮುದಾಯ ಭವನದಲ್ಲಿ ತಾಲ್ಲೂಕು ಕಾಂಗ್ರೆಸ್ ಸಮಿತಿ ವತಿಯಿಂದ ಆಯೋಜಿಸಿದ್ದ ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಪದಗ್ರಹಣದ ಪ್ರಯುಕ್ತ ಗ್ರಾಮ ಪಂಚಾಯಿತಿ ಅಧ್ಯಕ್ಷರುಗಳ ಪೂರ್ವಭಾವಿ ಸಭೆಯ ಉದ್ಘಾಟನೆಯನ್ನು ನೇರವೇರಿಸಿ ಮಾತನಾಡಿದರು. ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಸ್ಥಳೀಯ ಮುಖಂಡರಿಗೆ ಅಧಿಕಾರ ಕೊಡಿಸಲು ಹಿರಿಯ ನಾಯಕರು ಸಹಾಯ ಮಾಡಬೇಕು. ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿದ್ದ ನೀಡಿದ್ದ ಜನಪರ ಕಾರ್ಯಕ್ರಮಗಳ ಬಗ್ಗೆ ಗ್ರಾಮೀಣ ಜನರಿಗೆ ಮನವರಿಕೆ ಮಾಡಿಕೊಟ್ಟು ಕಾಂಗ್ರೆಸ್ ಪಕ್ಷದ ಪರ ಮತಯಾಚನೆ ಮಾಡಬೇಕು.

      ಗ್ರಾಪಂಗಳ ಅವಧಿ ಮುಗಿದಿದ್ದು ಈಗಿನ ಬಿಜೆಪಿ ಸರ್ಕಾರ ನಾಮನಿರ್ದೇಶನ ಮಾಡಲು ಹೊರಟಿದ್ದು ಡಿ.ಕೆ.ಶಿವಕುಮಾರ್ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಇದಕ್ಕೆ ನನ್ನ ಸಹಮತವಿದೆ. ಜನಪ್ರತಿನಿಧಿಗಳಾದವರು ಜನರಿಗೆ ಅಧಿಕಾರದ ಲಾಭವನ್ನು ತಲುಪಿಸಬೇಕು. ಸಾಮಾನ್ಯ ಕಾರ್ಯಕರ್ತನನ್ನು ಮುಖಂಡರನ್ನಾಗಿ ಬೆಳಸಿದಾಗ ನಮಗೂ ಗೌರವ ದೊರೆಯುತ್ತದೆ ಪಕ್ಷವು ಬೆಳೆಯುತ್ತದೆ. ಸಮುದಾಯವನ್ನು ಪ್ರತಿನಿಧಿಸುವ ಮುಖಂಡರಿಗೆ ಗೌರವ ಸ್ಥಾನ ಮಾನ ನೀಡಿದರೆ ಪಕ್ಷಕ್ಕೆ ಬಹುಮತ ದೊರೆಯುತ್ತದೆ.

      ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷ ತೊರೆಯುವುದಿಲ್ಲ ಮುಂದಿನ ಚುನಾವಣೆಯಲ್ಲಿ ನಾನೇ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೆನೆ ತಾಲ್ಲೂಕಿನ ಜನರು ಯಾವುದೇ ಗೊಂದಲಕ್ಕೆ ಒಳಗಾಗಬೇಡಿ ನಿಮ್ಮ ಉತ್ಸಾಹ ವಿಶ್ವಾಸ ನೋಡಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ತನ್ನ ಗತ ವೈಭವನ್ನು ಮರಳಿ ಪಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ. ನಮ್ಮ ಜಿಲ್ಲಾ ಬ್ಯಾಂಕಿನಿಂದ ಹಲವಾರು ಜನಪರ ಹಾಗೂ ರೈತರ ಪರವಾದಂತಹ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ರಾಜ್ಯಮಟ್ಟದಲ್ಲಿ ಉತ್ತಮ ಹೆಸರುಗಳಿಸಿದೆ ಎಂದರು.

       ಕೆಪಿಸಿಸಿ ವೀಕ್ಷಕ ಶ್ರೀನಾಥ್ ಮಾತನಾಡಿ ಕ್ಷೇತ್ರದ ಜನರಿಗಾಗಿ ಸಾವಿರಾರು ಕೋಟಿ ಅನುದಾನ ತಂದು ಕ್ಷೇತ್ರವನ್ನು ಅಭಿವೃದ್ಧಿ ಪಡಿಸಿದ ಕೆ.ಎನ್ ರಾಜಣ್ಣ ರವರನ್ನು ಚುನಾವಣೆಯಲ್ಲಿ ಪರಾಭವಗೊಳಿಸಿದ್ದು ದುರದೃಷ್ಟಕರ. ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಮ್ಮ ಪಕ್ಷ ಬಲಿಷ್ಟವಾಗಿ ಸುಮಾರು 180 ಶಾಸಕರು ಆಯ್ಕೆಯಾಗಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು.

       ಮುಖಂಡ ವಾಲೇಚಂದ್ರು ಮಾತನಾಡಿ ನನಗೆ ಮೊದಲಿನಿಂದಲೂ ರಾಜಣ್ಣನವರ ಜೊತೆ ಒಡನಾಟವಿದೆ ಅವರು ಜಿಲ್ಲೆಯಲ್ಲಿಯೇ ಅತ್ಯಧಿಕವಾಗಿ ದೀನದಲಿತರ ಪರವಾದಂತಹ ಕಾರ್ಯಕ್ರಮಗಳು ಹಾಗೂ ಕೋವಿಡ್ ಸಂಧರ್ಭದಲ್ಲಿ ಬಡವರಿಗೆ ಅನ್ನದಾನ ಕಾರ್ಯಕ್ರಮ ಆಯೋಜಿಸುವುದರ ಮೂಲಕ ಜಿಲ್ಲೆಯ ಜನ ನಾಯಕರಾಗಿದ್ದಾರೆ ಎಂದರು.

     ಕೆಪಿಸಿಸಿ ವೀಕ್ಷಕ ಆಶೋಕ್ ಕುಮಾರ್, ನರಸೀಯಪ್ಪ, ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಆರ್.ರಾಜೇಂದ್ರ, ರಾಜ್ಯ ಸಹಕಾರ ಮಹಾಮಂಡಲದ ಅಧ್ಯಕ್ಷ ಎನ್.ಗಂಗಣ್ಣ, ಜಿಪಂ ಸದಸ್ಯರಾದ ಜಿ.ಜೆ.ರಾಜಣ್ಣ, ಚೌಡಪ್ಪ ತಾಪಂ ಅಧ್ಯಕ್ಷೆ ಇಂದಿರಾದೇನಾನಾಯ್ಕ, ಪಿ.ಸಿ ಕೃಷ್ಣರೆಡ್ಡಿ, ಪುರಸಭೆ ಸದಸ್ಯರಾದ ತಿಮ್ಮರಾಯಪ್ಪ, ಆಲೀಂ, ಲಾಲಪೇಟೆ ಮಂಜುನಾಥ್, ಮಂಜುನಾಥ್ ಆಚಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಸ್.ಆರ್.ರಾಜಗೋಪಾಲ್, ಎಂ.ಎಸ್.ಮಲ್ಲಿಕಾರ್ಜುನಯ್ಯ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶಶಿಕುಮಾರ್ ಹುಲಿಕುಂಟೆಮಠ್ ಮುಖಂಡರಾದ ಎಂ.ಕೆ.ನಂಜುಂಡಯ್ಯ, ಆದಿನಾರಾಯಣರೆಡ್ಡಿ, ಎಂ.ಎಸ್.ಶಂಕರನಾರಾಯಣ, ಸಾಧಿಕ್, ಪರಿಶಿಷ್ಟ ಜಾತಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ರಂಗಶ್ಯಾಮಣ್ಣ ಹಾಗೂ ಕಾರ್ಯಕರ್ತರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link