ಚಿತ್ರದುರ್ಗ
ರಾಜ್ಯ ಸತತ ಏಳೆಂಟು ವರ್ಷಗಳಿಂದ ಬರದ ದವಡೆಗೆ ಸಿಲುಕುತ್ತಿದೆ. ಪ್ರತಿಯೊಬ್ಬರು ಸಸಿ ನೆಟ್ಟು ಪೆÇೀಷಿಸುವ ಹೊಣೆ ಹೊತ್ತು ಪ್ರಾಮಾಣಿಕವಾಗಿ ನಿರ್ವಹಿಸದಿದ್ದರೇ ಮುಂದಿನ ದಿನಗಳಲ್ಲಿ ಭಾರಿ ಸಂಕಷ್ಟವನ್ನು ಎದುರಿಸಬೇಕಾದೀತು ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಎಚ್ಚರಿಸಿದ್ದಾರೆ.
ದೇಶಾದ್ಯಂತ ಸ್ವಚ್ಛ ಭಾರತ ಮಿಷನ್(ಗ್ರಾಮೀಣ)ಅಂದೋಲನ ಅಂಗವಾಗಿ ನಗರ ಸಮೀಪದ ಮೇದೆಹಳ್ಳಿ ಗ್ರಾಪಂನಲ್ಲಿ ಘನ ಮತ್ತು ದ್ರವ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿ ತ್ಯಾಜ್ಯ ವಿಲೇವಾರಿಗೆ ಮುಂದುವರಿದ ದೇಶಗಳು ಅಳವಡಿಸಿಕೊಂಡಿರುವ ವೈಜ್ಞಾನಿಕ ಪದ್ಧತಿಗಳನ್ನು ಈಗ ನಾವು ಅನುಸರಿಸಲು ಮುಂದಾಗಿದ್ದೇವೆ. ತ್ಯಾಜ್ಯ ವಿಲೇವಾರಿ ಕಾಟಾಚಾರಕ್ಕೆ ಎಂಬಂತಾಗಿದೆ ಸಮರ್ಪಕವಾಗಿ ಆಗಬೇಕು. ಇದಕ್ಕೆ ಅಗತ್ಯವಿರುವ ನೆರವನ್ನು ಗ್ರಾಪಂಗಳು ಜನರಿಗೆ ಒದಗಿಸಬೇಕು ಎಂದು ಸೂಚಿಸಿದರು.
ಅರಣ್ಯ ಇಲಾಖೆ ನಿಯತ್ತಿನಿಂದ ಸಸಿಗಳನ್ನು ನೆಟ್ಟು ಪೋಷಿಸಿದ್ದರೆ ಇವತ್ತು ನಾವಿಂದು ಬರದ ಬವಣೆಗೆ ಸಿಲುಕುತ್ತಿರಲಿಲ್ಲ ಎಂದು ವಿಷಾದಿಸಿದ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಸ್ವಚ್ಛತೆ ಕುರಿತಂತೆ ಜನರನ್ನು ದೂಷಿಸಿದರೆ ಪ್ರಯೋಜನವಿಲ್ಲ. ಜನರಲ್ಲಿ ಅರಿವು ಮೂಡಿಸಿ ಅವರಿಗೆ ಕಸ ಹಾಕಲು ಸೂಕ್ತ ಸ್ಥಳ ನಿಗದಿ ಪಡಿಸುವುದು ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಕರ್ತವ್ಯ ಎಂದರು.
ತಾಪಂ ಇಒ ಕೃಷ್ಣ ನಾಯಕ್ ಮಾತನಾಡಿ, ಆಂದೋಲನದ ಅಂಗವಾಗಿ ತಾಲೂಕಿನ ಸಿರಿಗೆರೆ, ಮದಕರಿಪುರ, ಮೇದೆಹಳ್ಳಿ, ಚೋಳಘಟ್ಟ ಹಾಗೂ ಎಂ.ಕೆ.ಹಟ್ಟಿ ಗ್ರಾಪಂಗಳಲ್ಲಿ ವಿಲೇವಾರಿ ಘಟಕವನ್ನು ಆರಂಭಿಸಲಾಗಿದೆ. ಮೆದೇಹಳ್ಳಿಯಲ್ಲಿ ಈಗ ಸ್ಥಾಪಿಸಿರುವ ಘಟಕ ತಾತ್ಕಾಲಿಕ, ಒಂದು ಎಕರೆ ಜಾಗದಲ್ಲಿ ಹೊಸ ಘಟಕ ನಿರ್ಮಾಣವಾಗಲಿದೆ ಎಂದರು.
ಮೇದೆಹಳ್ಳಿ ಗ್ರಾಪಂ ಅಧ್ಯಕ್ಷ ಎಂ.ಉಜ್ಜಿನಿಸ್ವಾಮಿ,ಉಪಾಧ್ಯಕ್ಷೆ ಕಮಲಮ್ಮ,ಮಾಜಿ ಅಧ್ಯಕ್ಷ ವಿಜಯಕುಮಾರ್, ಚೋಳಘಟ್ಟ ಗ್ರಾಪಂ ಅಧ್ಯಕ್ಷ ಸಿದ್ದಣ್ಣ,ಎಂ.ಕೆ.ಹಟ್ಟಿ ಗ್ರಾಪಂ ಅಧ್ಯಕ್ಷೆ ಭಾಗ್ಯಮ್ಮ, ತಾಪಂ ಸದಸ್ಯರಾದ ಪರಮೇಶ್ವರಪ್ಪ, ಮಂಜಣ್ಣ, ಜಿಪಂ ಸದಸ್ಯ ನರಸಿಂಹರಾಜ್ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
