ಚಿತ್ರದುರ್ಗ:
ಹಸ್ತಪ್ರತಿ ಇಂತಹುದೆ ಕಾವ್ಯ ಎಂದು ನಿಖರವಾಗಿ ಹೇಳುವಾಗ ಸಂಶೋಧಕರು ತುಂಬಾ ಎಚ್ಚರಿಕೆ ವಹಿಸಬೇಕಾಗುತ್ತದೆ. ಪ್ರಾಚೀನ ಸಾಹಿತ್ಯ ಇತಿಹಾಸಕ್ಕೆ ಹತ್ತಿರದ ಸಂಬಂಧವಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯ ಹಸ್ತಪ್ರತಿ ಸಂಶೋಧಕರಾದ ಡಾ.ವೈ.ಸಿ.ಭಾನುಮತಿ ಹೇಳಿದರು.
ಚಿತ್ರದುರ್ಗ ಇತಿಹಾಸ ಕೂಟ ಇತಿಹಾಸ-ಸಂಸ್ಕೃತಿ-ಸಂಶೋಧನೆಗಳ ವಿಚಾರ ವೇದಿಕೆ ಹಾಗೂ ರೇಣುಕಾ ಪ್ರಕಾಶನ ಇವರುಗಳ ಸಹಯೋಗದೊಂದಿಗೆ ಐ.ಎಂ.ಎ.ಹಾಲ್‍ನಲ್ಲಿ ಭಾನುವಾರ ನಡೆದ 35 ನೇ ಉಪನ್ಯಾಸ ಕಾರ್ಯಕ್ರಮದಲ್ಲಿ ಕರ್ನಾಟಕದ ಸ್ಥಳೀಯ ಅರಸರಿಗೆ ಸಂಬಂಧಿಸಿದ ಕೆಲವು ಚಾರಿತ್ರಿಕ ಕಾವ್ಯಗಳು ಎಂಬ ವಿಚಾರ ಕುರಿತು ಮಾತನಾಡಿದರು.
ಐತಿಹಾಸಿಕ ಕಾವ್ಯ ಹಸ್ತಪ್ರತಿ ಭಂಡಾರದಲ್ಲಿದೆ. ಶಾಸನ, ನಾಣ್ಯ, ದಾಖಲೆಗಳನ್ನು ಐತಿಹಾಸಿಕ ಕಾವ್ಯ ಸಂಶೋಧಕರು ಬಳಸಿಕೊಂಡಿರುವುದು ತುಂಬಾ ವಿರಳ. ಕನ್ನಡ ಚಾರಿತ್ರಿಕ ಕಾವ್ಯಗಳಿಗೆ ತನ್ನದೆ ಆದ ಪರಂಪರೆಯಿದೆ. ಅಪ್ರಬುದ್ದ, ಅಪ್ರಕಟಿತ ಕಾವ್ಯ ಸಿಕ್ಕರೆ ಸಂಶೋಧಕರಿಗಾಗುವ ಆನಂದ ಅಷ್ಟಿಷ್ಟಲ್ಲ. ಚಾರಿತ್ರಿಕಕ್ಕೆ ಸಾಹಿತ್ಯಿಕ ಲೇಪನ ಕೊಡುವ ಪರಂಪರೆ ಕನ್ನಡದಲ್ಲಿ ಕಂಡು ಬರುತ್ತದೆ. ಸರ್ಜ ಹನುಮೇಂದ್ರ ಹುಲಿಯನ್ನು ಭೇಟೆಯಾಡಿದ.
ತರಿಕೆರೆ ಪಾಳೆಯಗಾರರು ಹನುಮಂತನ ಪರಮ ಭಕ್ತರಾಗಿದ್ದರು. ಅಶ್ವ, ಗಜ, ಹಂಸ ವಾಹನಗಳನ್ನು ರಾಜರು ಮಾಡಿಸಿ ಯುದ್ದಕ್ಕೆ ಕಳಿಸುತ್ತಿದ್ದರು. ಸರ್ಜ ಹನುಮೇಂದ್ರ ತನ್ನ ಮಗಳ ಜೊತೆ ಸಿಂಹಾಸನದ ಮೇಲೆ ಕುಳಿತು ರಾಜ್ಯಭಾರ ಮಾಡುತ್ತಿದ್ದ ಎನ್ನುವ ದಾಖಲೆಯಿಂದ ಸ್ತ್ರೀಯರಿಗೆ ಗೌರವ ಕೊಡುತ್ತಿದ್ದ ಎನ್ನುವುದು ಗೊತ್ತಾಗುತ್ತದೆ ಎಂದು ತಿಳಿಸಿದರು.
ರಂಗಪ್ಪನಾಯಕನ ಅಡಾಹುಡಿ ಎಂಬ ಕುರಿತು ಜಾನಪದ ಕಾವ್ಯದಲ್ಲಿ ಉಲ್ಲೇಖವಾಗಿದೆ. ಹಿಂದಿನ ವಿದ್ವಾಂಸರು ಅಧ್ಯಯನಶೀಲರಾಗಿದ್ದರು. ನಮ್ಮ ದೇಶದ ಇತಿಹಾಸವನ್ನು ತಿಳಿದುಕೊಳ್ಳಲು ವಿದೇಶಗಳಿಂದ ಸಂಶೋಧಕರು ಬರುತ್ತಿದ್ದಾರೆ. ಆದರೆ ನಮ್ಮಲ್ಲಿರುವ ಬಹುತೇಕ ಸಂಶೋಧಕರು ಕಣ್ಣುಮುಚ್ಚಿ ಕುಳಿತಿದ್ದಾರೆ. ಕಳಲೆ ಮನೆತನ ಮೈಸೂರು ಅರಸರೊಡನೆ ವೈವಾಹಿಕ ಸಂಬಂಧವಿತ್ತು.
ದೇವರಾಜ, ನಂಜರಾಜ ದಳವಾಯಿಗಳು ಮೈಸೂರು ಅರಸರ ಪರವಾಗಿ ಯುದ್ದ ಮಾಡಿ ಜಯತಂದು ಕೊಟ್ಟವರು ಎನ್ನುವುದು ಕರ್ನಾಟಕದ ಸ್ಥಳೀಯ ಅರಸರಿಗೆ ಸಂಬಂಧಿಸಿದ ಕೆಲವು ಚಾರಿತ್ರಿಕ ಕಾವ್ಯಗಳು ಹೇಳುತ್ತವೆ. ಅರಸರ ಚರಿತ್ರೆಗಳು ಹಸ್ತಪ್ರತಿಗಳ ಚಿಕ್ಕ ಚಿಕ್ಕ ದಾಖಲೆಗಳಿವೆ. ಮೆಕೆನ್ಜಿ ಕೈಫಿಯತ್ತುಗಳನ್ನು ತಂದಿದ್ದು, ಮಿಜಿರ್ ಮಹಲು ವಜೀರನ ವಶವಾಯಿತು ಎನ್ನುವುದು ಕೆಲವು ಚಾರಿತ್ರಿಕ ಕಾವ್ಯಗಳಿಂದ ತಿಳಿಯುತ್ತದೆ ಎಂದರು.
ಕೆಳದಿ ಅರಸರು ಶೃಂಗೇರಿಯಲ್ಲಿ ಜಂಗಮ ಮಂಟಪ ಕಟ್ಟಿಸುವ ಪ್ರಯತ್ನ ಮಾಡುತ್ತಾರೆ. ಶ್ರವಣ ಬೆಳಗೋಳದ ಸ್ಥಳ ಪುರಾಣ. ಪೂರ್ಣಯ್ಯ ಕಾಲದಲ್ಲಿ ರಚಿತವಾದ ಕೃತಿ.ಈಗಿನ ಪ್ರಕೃತಿ ವಿಕೋಪ ಆಗ ಕೂಡ ಜರುಗಿತ್ತು ಎನ್ನುವುದು ಕರ್ನಾಟಕದ ಸ್ಥಳೀಯ ಅರಸರಿಗೆ ಸಂಬಂಧಿಸಿದ ಕೆಲವು ಚಾರಿತ್ರಿಕ ಕಾವ್ಯಗಳು ಹೇಳುತ್ತದೆ ಎಂದು ನುಡಿದರು.
ಚಿತ್ರದುರ್ಗ ಇತಿಹಾಸ ಕೂಟದ ಸಂಚಾಲಕ ಡಾ.ಎನ್.ಎಸ್.ಮಹಂತೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.ನಿರ್ದೇಶಕ ಪ್ರೊ.ಲಕ್ಷ್ಮಣ್ ತೆಲಗಾವಿ, ಸಾಹಿತಿ ಬಿ.ಎಲ್.ವೇಣು, ಡಾ.ರಾಮಚಂದ್ರನಾಯಕ, ಮದಕರಿನಾಯಕ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಡಿ.ಗೋಪಾಲಸ್ವಾಮಿ ನಾಯಕ, ಪ್ರಾಧ್ಯಾಪಕ ಡಾ.ಕರಿಯಪ್ಪ ಮಾಳಿಗೆ, ಪುರಾತತ್ವ ಇಲಾಖೆಯ ಪ್ರಹ್ಲಾದ್, ಮೃತ್ಯುಂಜಯಪ್ಪ, ಲೇಖಕ ಆನಂದಕುಮಾರ್, ರೇಣುಕಾ ಪ್ರಕಾಶನದ ಗೌರವಾಧ್ಯಕ್ಷ ಎನ್.ಡಿ.ಶಿವಣ್ಣ ಸೇರಿದಂತೆ ಸ್ನಾತಕೋತ್ತರ ವಿದ್ಯಾರ್ಥಿಗಳು ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
