ಎಚ್‍ಎಎಲ್ ಸಂಸ್ಥೆಯ ಘನತೆ ಮತ್ತು ಸಾಮಥ್ರ್ಯಕ್ಕೆ ಧಕ್ಕೆ:ದಿನೇಶ್ ಗುಂಡೂರಾವ್

ಬೆಂಗಳೂರು

     ದೇಶದ ಪ್ರತಿಷ್ಠಿತ ಬೆಂಗಳೂರಿನ ಎಚ್‍ಎಎಲ್ ಸಂಸ್ಥೆಯ ಘನತೆ ಮತ್ತು ಸಾಮಥ್ರ್ಯಕ್ಕೆ ಧಕ್ಕೆ ಉಂಟು ಮಾಡುವ ರೀತಿಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ನೀಡಿರುವ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

      ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ರಫೇಲ್ ಯುದ್ಧ ವಿಮಾನ ಖರೀದಿ ವಿಚಾರದಲ್ಲಿ ರಕ್ಷಣಾ ಸಚಿವರು ನೀಡಿದ ಉತ್ತರವನ್ನು ಖಂಡಿಸುತ್ತೇನೆ. ರಾಜ್ಯದ ಪ್ರತಿನಿಧಿಯಾಗಿ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ನಿನ್ನೆ ಸದನದಲ್ಲಿ ಕೊಟ್ಟ ಉತ್ತರ ರಾಜ್ಯಕ್ಕೆ ಮಾಡಿದ ಅನ್ಯಾಯವಾಗಿದೆ. ಅವರ ಹೇಳಿಕೆಯಿಂದಾಗಿ ಸಾಕಷ್ಟು ಆತಂಕ, ಅನುಮಾನ ಮೂಡಿಸಿದೆ. ರಕ್ಷಣಾ ಸಚಿವೆಯಾಗಿ ಎಚ್‍ಎಎಲ್ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಸಾಮಥ್ರ್ಯವಿಲ್ಲದ,ಅನನುಭವಿ ರಿಲಯೆನ್ಸ್ ಸಂಸ್ಥೆಗೆ ಗುತ್ತಿಗೆ ಕೊಟ್ಟಿದ್ದನ್ನು ಸಮರ್ಥಿಸಿಕೊಂಡಿರುವ ಅವರ ನಿಲುವನ್ನು ತೀವ್ರ ಖಂಡಿಸುತ್ತೇವೆ ಎಂದರು.

ಎಚ್‍ಎಎಲ್ ಯುದ್ಧ ವಿಮಾನ ತಯಾರಿಕೆಗೆ ಸಾಮಥ್ರ್ಯ ಇಲ್ಲ ಎಂದಿದ್ದಾರೆ.ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂಬಂತೆ ಮಾತಾನಾಡಿದ್ದಾರೆ. ಇಲ್ಲಿ ತಯಾರಿಕೆ ಮಾಡಲು ಆಗುವುದಿಲ್ಲ,ಅಗತ್ಯ ಸೌಲಭ್ಯ,ತಂತ್ರಜ್ಞಾನ, ಉತ್ಪಾದನಾ ಸಾಮಥ್ರ್ಯ ಇಲ್ಲವೆಂದಿದ್ದಾರೆ.ಇದು ರಾಜ್ಯಕ್ಕೆ, ದೇಶಕ್ಕೆ ಮಾಡಿದ ಅವಮಾನ ಎಂದು ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.

        ಸದನದಲ್ಲಿ ರಫೆಲ್ ವಿಚಾರವಾಗಿ ಸ್ಪಷ್ಟ ಉತ್ತರ ನೀಡದೆ ವಿಷಯಾಂತರ ಮಾಡಿದ್ದಾರೆ.ಎಚ್‍ಎಎಲ್ ನಲ್ಲಿ ವಿಮಾನ ತಯಾರಿಕೆ ,ತಂತ್ರಜ್ಞಾನ,ಮಾನವ ಸಂಪನ್ಮೂಲ ಇಲ್ಲದಿದ್ದಲ್ಲಿ ಸಂಸ?ಥೆಯನ್ನು ನಡೆಸುವ ಗತ್ಯಂತರವಿಲ್ಲ.ಎಚ್‍ಎಎಲ್ ನನ್ನು ಮುಚ್ಚಿಬಿಡಿ ,ಆಮೂಲಕ ರಾಜ್ಯದಿಂದ ಆಯ್ಕೆಯಾಗಿದ್ದಕ್ಕೆ ಕೊಟ್ಟ ಕೊಡುಗೆ ಎಂದು ಕೊಳ್ಳುತ್ತೇವೆಂದು ವ್ಯಂಗ್ಯವಾಡಿದರು.

       ಯುಪಿಎ ಸರ್ಕಾರದ ಒಪ್ಪಂದದ ಪ್ರಕಾರ ಯುದ್ದ ವಿಮಾನ ಎಚ್‍ಎಎಲ್ ನಲ್ಲೇ ತಯಾರಾಗುತ್ತಿತ್ತು. ಇಲ್ಲಿನ ಉದ್ಯೋಗಿಗಳಿಗೆ ಅತ್ಯಾಧುನಿಕ ತಂತ್ರಜ್ಞಾನದ ಜ್ಞಾನ ಸಿಗುತ್ತಿತ್ತು.ಇನ್ನಷ್ಟು ಕಂಪನಿಗಳ ಆರಂಭಕ್ಕೆ ಅವಕಾಶದ ಬಾಗಿಲು ತೆರೆದುಕೊಳ್ಳುತ್ತಿತ್ತು. ಎಚ್‍ಎಎಲ್ ಕಂಪನಿ ಮೇಲೆ ವಿಶ್ವಾಸ ಇಲ್ಲ ಎಂದರೆ ಕಂಪನಿ ಮುಚ್ಚಿಬಿಡಿ. ನಿಮ್ಮ ಸಂಸ್ಥೆ ಬಗ್ಗೆ ನಿಮಗೇ ವಿಶ್ವಾಸ ಇಲ್ಲ ಅಂದ್ರೆ ಕಂಪನಿ ಯಾಕೆ ಬೇಕು ? ಎಚ್‍ಎಎಲ್ ಸಾಲ ತೆಗೆದುಕೊಂಡು ಸಂಬಳ ನೀಡುವ ಸ್ಥಿತಿ ಬಂದಿದೆ.1 ಸಾವಿರ ಕೋಟಿ ರೂ.ಸಾಲ ಪಡೆದಿದೆ. ತಯಾರಿಕೆ ಕೆಲಸ ಸಿಕ್ಕಿದ್ದರೆ ಇಲ್ಲಿನ ಸಿಬ್ಬಂದಿಗೆ ಕೆಲಸ ಸಿಗುತ್ತಿತ್ತು. ಎಚ್‍ಎಎಲ್ ಉಳಿಸುವ ಕೆಲಸ ಆಗುತ್ತಿತ್ತು. ನಾವು ಮುಂದೆ ಅಧಿಕಾರಕ್ಕೆ ಬಂದರೆ, ನಾವು ರಿಲೆಯೆನ್ಸ್ ಕಂಪನಿಗೆ ನೀಡಿದ ಗುತ್ತಿಗೆ ರದ್ದುಪಡಿಸಿ ಎಚ್‍ಎಎಲ್ ಗೆ ನೀಡುವ ಕಾರ್ಯ ಮಾಡುತ್ತೇವೆ.

         ಯುಪಿಎ ಸರ್ಕಾರದ ಅವಧಿಯಲ್ಲಿ ಆದೇಶ ಹಂತ ತಲುಪಿದ್ದ ರಫೆಲ್ ಆದೇಶವನ್ನು ಪ್ರಧಾನಿ ನರೇಂದ್ರ ಮೋದಿ ರಾತ್ರೋರಾತ್ರಿ ಬೇರೆ ಖಾಸಗಿ ಕಂಪನಿಗೆ ಬದಲಿಸಿದರು.ಇಂದಿನ ಸ್ಥಿತಿಗೆ ಪ್ರಧಾನಿಯವರೇ ಕಾರಣ.ನಮ್ಮ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿಯವರು ಬೆಂಗಳೂರಿಗೆ ಬಂದಾಗ ಈ ವಿಚಾರ ಪ್ರಸ್ತಾಪವಾಗಿತ್ತು ಎಂದರು.

        ಮೂವತ್ತು ವರ್ಷದಲ್ಲಿ ಈ ರೀತಿಯ ಪರಿಸ್ಥಿತಿ ಬಂದಿದೆ. ಯಾರಿಗೂ ಹೇಳದೆ, ಒಬ್ಬನೇ ಒಬ್ಬ ವ್ಯಕ್ತಿ ದೇಶದ ಪ್ರಧಾನಿ ಈ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ದಿನೇಶ್ ಗುಂಡುರಾವ್ ಕಿಡಿಕಾರಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link