ಬಿಜಪಿಯಲ್ಲೀಗ ಭವಿಷ್ಯದ ನಾಯಕತ್ವದ ಚಿಂತೆ..!

ಬೆಂಗಳೂರು

     ರಾಜ್ಯ ಬಿಜೆಪಿಯಲ್ಲೀಗ ಮುಂದಿನ ನಾಯಕತ್ವದ ಜಪ ಶುರುವಾಗಿದ್ದು,ವಿಧಾನಮಂಡಲ ಅಧಿವೇಶನದ ಬಳಿಕ ದಿಲ್ಲಿಗೆ ತೆರಳಿ ವರಿಷ್ಠರನ್ನು ಭೇಟಿಯಾಗಲು ಸಮಾನ ಮನಸ್ಕ ಶಾಸಕರು ನಿರ್ಧರಿಸಿದ್ದಾರೆ.

    ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರಕಾರಕ್ಕೆ ಒಂದು ವರ್ಷ ಪೂರೈಸಿದ ಹಿನ್ನಲೆಯಲ್ಲಿ ಸಚಿವ ಸಂಪುಟ ಪುನಾರಚನೆ ಮಾತು ಜೋರಾಗಿ ಕೇಳಿ ಬಂದಿತ್ತು.ಇದೇ ಕಾರಣದಿಂದ ಶಾಸಕರ ನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಮೊದಲ ಹಂತದಲ್ಲಿ ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ ಮಾಡಲಾಯಿ ತು ಎಂದು ಹೇಳಲಾಗಿತ್ತು.ಆದರೆ,ಶಾಸಕರ ಮನಸ್ಸಿನಲ್ಲಿ ಬೇರೆಯದೆ ಆಲೋಚನೆಯಿದೆ.

    ಪಕ್ಷದ ಭವಿಷ್ಯದ ದೃಷ್ಟಿಯಿಂದ ಸಾಮೂಹಿಕ ನಾಯಕತ್ವದ ಸೂತ್ರ ತರಲು ಇದು ಸಕಾಲ ಎಂಬ ಪ್ರಮುಖ ನಾಯಕರ ಅಭಿಪ್ರಾಯ ಎನ್ನಲಾಗಿದೆ.ಈ ನಿಟ್ಟಿ ನಲ್ಲಿ ಸಮಾನ ಮನಸ್ಕ ಶಾಸಕರು ಹತ್ತಾರು ಬಾರಿ ಪ್ರತ್ಯೇಕ ಸಭೆಗಳನ್ನು ಬೆಂಗಳೂರು,ಹುಬ್ಬಳ್ಳಿ,ಬೆಳಗಾವಿ ಸೇರಿದಂತೆ ಬೇರೆ ಬೇರೆ ಕಡೆಗಳಲ್ಲಿ ಭೋಜನಕೂ ಟದ ನಪದಲ್ಲಿ ನಡೆಸಿದ್ದಾರೆ.ಈ ಪೈಕಿ ಹೆಚ್ಚಿನವರು ಉತ್ತರ ಕರ್ನಾಟಕದ ಶಾಸಕರಾಗಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.

    ಪ್ರಸ್ತುತ ವ್ಯವಸ್ಥೆಯಲ್ಲೇ ಸರಕಾರ ಮುಂದುವರಿದರೆ ಕ್ಷೇತ್ರದಲ್ಲಿ ಹಾಗೂ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವುದು ಸಾಧ್ಯವಿಲ್ಲ.ಯ ಡಿಯೂರಪ್ಪ ಅವರು ರಾಜ್ಯ ಬಿಜೆಪಿಯ ವರಿಷ್ಠ ನಾಯಕರಾದರೂ ಅವರನ್ನು ಪೂರ್ಣಾವಧಿಗೆ ಮುಂದುವರಿಸಿದರೆ ಹೊಸ ನಾಯಕತ್ವಕ್ಕೆ ಇದು ಅಡ್ಡಿಯಾ ಗಲಿದೆ.ಮುಂದಿನ ಚುನಾವಣೆ ವೇಳೆಗೆ ಬಿಎಸ್‍ವೈಗೆ 80 ವರ್ಷ ದಾಟಲಿದೆ.ಹೀಗಾಗಿ ಮತ್ತೆ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯೆಂದು ಬಿಂಬಿಸಲಾಗದು. ಯಡಿಯೂರಪ್ಪ ಅವರ ನಾಯಕತ್ವದಲ್ಲೇ ಮುಂದಿನ ಚುನಾವಣೆಗೆ ತೆರಳಿ ಫಲಿತಾಂಶದ ಬಳಿಕ ಬೇರೊಬ್ಬರನ್ನು ಆಯ್ಕೆ ಮಾಡುವ ಭರವಸೆ ಸರಿಯಾದ ಕ್ರಮವಲ್ಲ.ಇದರಿಂದ ,ಮತದಾರರು,ಪಕ್ಷದ ಕಾರ್ಯಕರ್ತರೂ ಗೊಂದಲಕ್ಕೆ ಸಿಲುಕುವ ಸಾಧ್ಯತೆ ಇದೆ.ಪರಿಸ್ಥಿತಿ ಹೀಗಿರುವುದರಿಂದ ಹಾಲಿ ಅವಧಿಯಲ್ಲೇ ಹೊಸ ನಾಯಕರ ಉದಯವಾಗಬೇಕು.ಪರ್ಯಾಯ ನಾಯಕರನ್ನು ಗುರುತಿಸಬೇಕೆಂಬುದು ಬಹುತೇಕ ಶಾಸಕರ ಅಭಿಪ್ರಾಯವಾಗಿದೆ.

     ಜತೆಗೆ ಎಲ್ಲರನ್ನೂ ಸಮನ್ವಯದಿಂದ ಕರೆದುಕೊಂಡು ಹೋಗುವಂಥವರಿಗೆ ಜವಾಬ್ದಾರಿ ನೀಡ ಬೇಕು.ನಾಯಕತ್ವದ ಹೊಣೆ ವಹಿಸಿಕೊಂಡವರಿಗೆ ಸಾಮರ್ಥ್ಯ ರುಜುವಾತು ಪಡಿಸಲು ಕನಿಷ್ಠ 2 ವರ್ಷ ಕಾಲಾವಕಾಶ ಸಿಕ್ಕಿದರೆ ಮುಂದಿನ ಚುನಾವಣೆಗೆ ಅನುಕೂಲವಾಗಲಿದೆ.ಇದರಿಂದ ಪಕ್ಷದ ಭವಿಷ್ಯವೂ ಗಟ್ಟಿಯಾಗಲಿದೆ ಎಂಬ ಪ್ರತಿಪಾದನೆ ಶಾಸಕರ ವಲಯದಲ್ಲಿ ಕೇಳಿ ಬಂದಿದೆ.
ಬಿಎಸ್‍ವೈ ಹೊರತಾದ ರಾಜ್ಯ ಬಿಜೆಪಿಯಲ್ಲಿ ಶೂನ್ಯ ಆವರಿಸಲಿದೆ ಎನ್ನುವುದು ಶಾಸಕರಿಗೂ ತಿಳಿದಿದೆ.ಆದರೆ,ವಯಸ್ಸಿನ ಕಾರಣದಿಂದ ಇನ್ನು ಮುಂದೆ ಆಡಳಿತಾತ್ಮಕ ಚಟುವಟಿಕೆಯಲ್ಲಿ ಸಕ್ರಿಯರಾಗುವುದು ಕಷ್ಟವಾಗಬಹುದು.ಇಂತಹ ಸಂದರ್ಭದಲ್ಲಿ ಆಪ್ತರು ಹಸ್ತಕ್ಷೇಪ ಮಾಡಬಹುದು.ಯಡಿಯೂರಪ್ಪ ಅವರ ಉತ್ತರಾಧಿಕಾರಿ ತಾವೆಂದು ಬಿಂಬಿಸಿಕೊಳ್ಳಲು ಆಮೂಲಕ ಪಕ್ಷದ ಮೇಲೆ,ಶಾಸಕರ ಮೇಲೆ ಹಿಡಿತ ಸಾಧಿಸುವ ಪ್ರಯತ್ನ ನಡೆಸಬಹುದು ಎಂಬ ಆತಂಕ ಕೆಲವು ಶಾಸಕರಲ್ಲಿ ಕಂಡು ಬಂದಿದೆ.

    ವಿಧಾನ ಮಂಡಲ ಅಧಿವೇಶನಕ್ಕೆ 15 ದಿನ ಮೊದಲು ಶಾಸಕಾಂಗ ಪಕ್ಷದ ಸಭೆ ನಡೆಸಬೇಕೆಂದು ಶಾಸಕರು ಆಗ್ರಹಿಸಿದ್ದರು.ಆದರೀಗ ಶಾಸಕಾಂಗ ಸಭೆ ನಡೆ ಸುವ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷರು,ಸರ್ಕಾರದ ಮುಖ್ಯಸ್ಥರಿಂದ ಶಾಸಕರು ನಿರೀಕ್ಷಿಸುತ್ತಿಲ್ಲ.ಹೀಗಾಗಿ ತಮ್ಮೆಲ್ಲಾ ಅಹವಾಲು,ಅಸಮಾಧಾನ,ಅನುದಾನ,ಅಭಿ ವೃದ್ಧಿಅಡ್ಡಿ ಆತಂಕಗಳನ್ನು ನೇರವಾಗಿ ಹೈಕಮಾಂಡ್ ರವಾನಿಸುವ ಪ್ರಯತ್ನ ಬಿಜೆಪಿ ಶಾಸಕರು ನಡೆಸಿದ್ದಾರೆ.

    ಬಜೆಟ್ ಅಧಿವೇಶನದ ವೇಳೆ ಭೋಜನಕೂಟದ ನೆಪದಲ್ಲಿ ಉತ್ತರ ಕರ್ನಾಟಕದ ಭಾಗದ ಶಾಸಕರು,ಲಿಂಗಾಯತ ಪ್ರಮುಖ ನಾಯಕರು ನಡೆಸುತ್ತಿದ್ದ ನಾಯ ಕತ್ವ ಬದಲಾವಣೆ ಚೆರ್ಚೆ ಮಳೆಗಾಲದ ಅಧಿವೇಶನದ ವೇಳೆ ಬಹುತೇಕ ಸ್ವಷ್ಟ ರೂಪ ಪಡೆದುಕೊಳ್ಳಲಿದೆ.ಅಲ್ಲದೆ ಅಧಿವೇಶನ ಮುಗಿದ ಬಳಿಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು,ಕೇಂದ್ರ ಗೃಹ ಸಚಿವ ಹಾಗೂ ರಾಷ್ಟ್ರೀಯ ಸಂಘಟನೆ ಕಾರ್ಯದರ್ಶಿಯಗಳನ್ನು ಭೇಟಿ ಮಾಡಲು ಸಮಯಾವಕಾಶ ಪಡೆದುಕೊಳ್ಳಲು ಇನ್ನಿಲ್ಲದ ಪ್ರಯತ್ನ ನಡೆದಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap