ಕೌಶಲ್ಯ ಅಭಿವೃದ್ಧಿ ಕೇಂದ್ರಗಳನ್ನು ಆರಂಭಿಸುವ ಅಗತ್ಯ ಹೆಚ್ಚಿದೆ: ಕೆ ಆರ್ ವೇಣುಗೋಪಾಲ್

ಬೆಂಗಳೂರು

   ಬಹುತೇಕ ಪದವೀಧರರು ಕೆಲಸ ಸಿಗದೇ ಹತಾಶರಾಗುತ್ತಿರುವಾಗ ಕೌಶಲ್ಯ ಅಭಿವೃದ್ಧಿ ತರಬೇತಿ ಕೇಂದ್ರಗಳನ್ನು ಆರಂಭಿಸುವ ಅಗತ್ಯವಿದೆ ಎಂದು ಬೆಂಗಳೂರು ವಿವಿ ಕುಲಪತಿ ಕೆ.ಆರ್.ವೇಣುಗೋಪಾಲ್ ಒತ್ತಾಯಿಸಿದರು.

   ಕೌಶಲ್ಯ ಅಭಿವೃದ್ಧಿ ತರಬೇತಿ ಕೇಂದ್ರಗಳ ಜೊತೆಗೆ ಸೈಕಲಾಜಿಕಲ್ ಕೌನ್ಸೆಲಿಂಗ್ ಸೆಂಟರ್ ಶುರು ಮಾಡಬೇಕಾದ ಅಗತ್ಯವಿದೆ ಎಂದು ಅವರು ಮನವಿ ಮಾಡಿದರು.

   ನಗರದ ಸೆಂಟ್ರಲ್ ಕಾಲೇಜಿನ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ದಿಶಾ ಸಂಸ್ಥೆ ಆಯೋಜಿಸಿದ್ದ,ಒಂದು ದಿನದ ಪ್ರಾಂಶುಪಾಲರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿ ಅವರು ವಿಶ್ವವಿದ್ಯಾಲಯ ಗಳು ಮಾಹಿತಿ ಕೇಂದ್ರಗಳಾಗದೇ ಜ್ಞಾನ ಕೇಂದ್ರಗಳಾಗಿ, ಕೌಶಲ್ಯ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದರು.

     ನಾವು ನೀಡುತ್ತಿರುವ ಶಿಕ್ಷಣ ಸಮಾಜಕ್ಕೆ ಪೂರಕವಾಗಿಲ್ಲ. ಉದ್ಯೋಗದ ಮಾರುಕಟ್ಟೆಗೆ ಅನುಗುಣವಾದಂತಹ ಶಿಕ್ಷಣವನ್ನು ನಾವು ನೀಡಬೇಕಿದೆ ಎಂದ ಅವರು, ವಿದ್ಯಾರ್ಥಿಗಳಿಗೆ ಶಿಕ್ಷಕರು ಮಾಹಿತಿ ಒದಗಿಸಲು ಮುಂದಾಗಬೇಕು ಎಂದು ನುಡಿದರು.

     ದಿಶಾ ಮಾರ್ಗದರ್ಶಕ ಮಂಡಳಿ ಸದಸ್ಯ, ಶಿಕ್ಷಣ ತಜ್ಞ ಡಾ.ಗುರುರಾಜ ಕರ್ಜಗಿ ಮಾತನಾಡಿ, ಬದುಕನ್ನು ಪ್ರತಿಕ್ಷ ಣ ಬದಲಿಸಿಕೊಳ್ಳುವ ಮೂಲಕ, ಹೊಸ ಕಲಿಕೆಗೆ ವಿದ್ಯಾರ್ಥಿಗಳಿಗಿಂತ ಮುಂಚೆ ಶಿಕ್ಷ ಕರು ಮುಂದಿರಬೇಕು ಎಂದುವುದನ್ನು ವಿದ್ಯುತ್ ಕಂಬ ಹಾಗೂ ಮರದ ಉದಾಹರಣೆಯೊಂದಿಗೆ ಮಾಹಿತಿ ನೀಡಿ. ನಾವು ಕಾರ್ಯ ನಿರ್ವಹಿಸುವ ಸಂಸ್ಥೆಯ ಹೆಸರನ್ನು ಉತ್ತುಂಗಕ್ಕೆ ಏರಿಸಲು ಶ್ರಮಿಸಬೇಕು ಎಂದು ಶಿಕ್ಷಕರಿಗೆ ಮನಮುಟ್ಟುವಂತೆ ತಿಳಿಸಿದರು.

      ಉಪನ್ಯಾಸಕಿ ರೇಖಾ ರಾಮಚಂದ್ರನ್ ಮಾತನಾಡಿ, ಆಧುನಿಕ ಜಗತ್ತಿನಲ್ಲಿ ಯೋಗಕ್ಕೆ ತುಂಬ ಮಹತ್ವ ಸಿಗುತ್ತಿದೆ. ಯೋಗದ ಕಾರಣದಿಂದ ಜಗತ್ತು ಇಂದು ಭಾರತ ದೇಶದ ಕಡೆಗೆ ತಿರುಗಿ ನೋಡುವಂತಾಗಿದೆ ಎಂದರು.ಈ ಸಂದರ್ಭದಲ್ಲಿ ನ್ಯಾಕ್ ನಿರ್ದೇಶಕ ಎಸ್.ಸಿ.ಶರ್ಮ ಉಪನ್ಯಾಸ ನೀಡಿದರು. ಬೆಂಗಳೂರು ವಿವಿಯ ಮೌಲ್ಯ ಮಾಪನ ವಿಭಾಗದ  ಪ್ರೊ.ಸಿ.ಶಿವರಾಜು ಸೇರಿದಂತೆ ಪ್ರಮುಖರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link