ಹೊಸದುರ್ಗ
ಹೊಸದುರ್ಗ ತಾಲೂಕಿನ ಜಾನಕಲ್ಲು ಗ್ರಾಮದ ಪೊಲೀಸ್ ಪೇದೆಯೊಬ್ಬರು ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು ಅವರಲ್ಲಿ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ. ಇದರಿಂದ ತಾಲ್ಲೂಕಿನಲ್ಲಿ ಕೊರೊನಾ ಸೋಂಕು ಹರಡುವ ಭೀತಿ ಎದುರಾಗಿದೆ. ಇದರಿಂದ ತಾಲ್ಲೂಕಿನ ಜನರು ಆತಂಕಗೊಂಡಿದ್ದಾರೆ.
ಕೊರೋನಾ ಸೋಂಕಿತ ಪೊಲೀಸ್ ಪೇದೆಯೊಬ್ಬರು ತಾಲೂಕಿನ ಜಾನಕಲ್ ಗ್ರಾಮದಲ್ಲಿ ಮೇ 2ರಿಂದ ಮೇ 5ರ ತನಕ ಇದ್ದರು ಎನ್ನಲಾಗಿದೆ. ಈ ಸಮಯದಲ್ಲಿ ಬೇರೆಯ ಪತ್ನಿಯ ತವರೂರು ಹೊಳಲ್ಕೆರೆ ತಾಲ್ಲೂಕಿನ ಗಟ್ಟಿಹೊಸಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ್ದರು ಎಂದು ತಿಳಿದುಬಂದಿದೆ. ಅಲ್ಲದೆ ಸಂಬಂಧಿಕರ ಮನೆಯಲ್ಲಿ ನಡೆದ ಹುಟ್ಟು ಹಬ್ಬದ ಆಚರಣೆಯಲ್ಲಿ ಪಾಲ್ಗೊಂಡಿದ್ದರು ಎನ್ನಲಾಗಿದೆ. ಈ ಪೇದೆಯ ಪ್ರಾಥಮಿಕ ಸಂಪರ್ಕದಲ್ಲಿದ್ದ ಸಾರ್ವಜನಿಕರನ್ನು ಈಗಾಗಲೇ ಜಿಲ್ಲಾಡಳಿತ ಆದೇಶದ ಮೇರೆಗೆ ತಾಲೂಕು ಆಡಳಿತ ಕ್ವಾರಂಟೈನ್ ಮಾಡಿದೆ. ಈ ನಡುವೆ ಜಾನಕಲ್ಲು ಗ್ರಾಮ ಮತ್ತು ಗಟ್ಟಿಹೊಸಹಳ್ಳಿ ಗ್ರಾಮವನ್ನು ಕ್ವಾರಂಟೈನ್ ಗೆ ಒಳ ಪಡಿಸಿರುತ್ತಾರೆ.
ಜಾನಕಲ್ಲು ಗ್ರಾಮದ 15 ಜನರನ್ನು ಮಾಡದಕೆರೆ ಇಂದಿರಾ ಗಾಂಧಿ ರೆಸಿಡೆನ್ಸಿಯಲ್ ಸ್ಕೂಲ್ ನಲ್ಲಿ ಕ್ವಾರಂಟೈನ್ ಮಾಡಿದ್ದು, ಇದರಲ್ಲಿ 12 ಜನ ಸಾಂಸ್ಥಿಕ ಕ್ವಾರಂಟೈನ್ ಇದ್ದಾರೆ. ಉಳಿದ ಮೂರು ಮಂದಿಗೆ ಹೋಂ ಕ್ವಾರಂಟೈನ್ ಮಾಡಲಾಗಿದೆ. ತಾಯಿ ಮಗು ಮತ್ತು ವೃದ್ಧನಿಗೆ ಹೋಂ ಕ್ವಾರಂಟೈನ್ ಮಾಡಲಾಗಿದೆ. ಇನ್ನು ಹೊಳಲ್ಕೆರೆ ತಾಲ್ಲೂಕಿನ ಗಟ್ಟಿಹೊಸ ಹಳ್ಳಿ ಗ್ರಾಮದ ಪೇದೆ ಪತ್ನಿಯ 7 ಸಂಬಂಧಿಕರನ್ನು ಕೂಡ ಕ್ವಾರಂಟೈನ್ ಮಾಡಲಾಗಿದ್ದು, ಇವರ ಜೊತೆಗೆ ಪತ್ನಿಯ ಅಣ್ಣ, ಅತ್ತಿಗೆ ಹಾಗೂ ಐದು ವರ್ಷದ ಮಗು ಸೇರಿದಂತೆ ಹೋಂ ಕ್ವಾರಂಟೈನ್ ಮಾಡಲಾಗಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಚಂದ್ರಶೇಖರ್ ಕಂಬಾಳಿ ಮಠ್ ಪ್ರಜಾಪ್ರಗತಿಗೆ ಪ್ರತಿಕ್ರಿಯಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
