ಪಾವಗಡ ರಸ್ತೆಯಲ್ಲೊಬ್ಬ ನೈಸರ್ಗಿಕ ಸಂಪತ್ತನ್ನು ಸಂರಕ್ಷಿಸುವ ಪ್ರೇಮಿ

ಚಳ್ಳಕೆರೆ

    ನೈಸರ್ಗಿಕ ಸಂಪತ್ತನ್ನು ಉಳಿಸಿಬೆಳೆಸುವ ನಿಟ್ಟಿನಲ್ಲಿ ಸರ್ಕಾರ ಅರಣ್ಯ ಇಲಾಖೆ ಮತ್ತು ಸ್ಥಳೀಯ ಆಡಳಿತದ ಮೂಲಕ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಪ್ರತಿಯೊಬ್ಬ ವ್ಯಕ್ತಿಯೂ ಗಿಡಮರಗಳನ್ನು ಬೆಳೆಸಿ ಪ್ರೋತ್ಸಾಹಿಸುವಂತೆ ಸಾರ್ವಜನಿಕವಾಗಿ ಮನವಿ ಮಾಡುತ್ತಿದ್ದು, ಇಂತಹ ಮನವಿಗಳಿಗೆ ಹೆಚ್ಚಿನ ಒತ್ತು ನೀಡದೆ ಇಂದಿಗೂ ಸಹ ನಾವು ನಿರೀಕ್ಷೆ ಮಾಡಿದ ಮಟ್ಟದಲ್ಲಿ ನಮ್ಮ ನೈಸರ್ಗಿಕ ಸಂಪತ್ತು ಬೆಳವಣಿಗೆಯಾಗಿಲ್ಲ.

    ಇದಕ್ಕೆಲ್ಲಾ ಪ್ರತಿರೋಧವೆನ್ನುವಂತೆ ನಗರದ ಕೂಲಿ ಕಾರ್ಮಿಕನೊಬ್ಬ ಪ್ರತಿನಿತ್ಯ ತಮ್ಮ ನಿತ್ಯ ಕಾಯಕದ ನಡುವೆ ಪಾವಗಡ ಮುಖ್ಯರಸ್ತೆಯಲ್ಲಿ ತಾನೇಗಿಡಗಳನ್ನು ನೆಟ್ಟು ಅವುಗಳಿಗೆ ಪ್ರತಿನಿತ್ಯ ನೀರು ಹಾಕುವ ಮೂಲಕ ಹಸಿರು ಕ್ರಾಂತಿಗೆ ಮುನ್ನುಡಿ ಬರೆಯುತ್ತಿದ್ದಾನೆ. ಎತ್ತಿನಗಾಡಿ ಹೊಂದಿರುವ ಈ ಕೂಲಿ ಕಾರ್ಮಿಕನ ಹೆಸರು ಗೂಡಾರಿಪಾಲಯ್ಯ ಎಂದಿದ್ದು, ಕಳೆದ ಎರಡು ವರ್ಷಗಳಿಂದ ಈತ ಹೂವಿನ ಗಿಡಗಳು ಸೇರಿದಂತೆ ವಿವಿಧ ಜಾತಿಯ ಗಿಡಗಳನ್ನು ತಂದು ರಸ್ತೆ ಬದಿಯ ಡಿವೈಡರ್‍ನಲ್ಲಿ ನೆಟ್ಟು ಪೋಷಣೆ ಮಾಡುತ್ತಿದ್ದಾನೆ. ಇತ್ತೀಚೆಗೆ ತಾನೇ ನಗರಸಭೆ ಆಡಳಿತವೂ ಸಹ ಈ ಭಾಗದಲ್ಲಿ ಗಿಡ ನೆಟ್ಟಿದ್ದು, ಅವುಗಳಿಗೂ ಸಹ ಈತ ನೀರು ಹಾಕಿ ಪೋಷಣೆ ಮಾಡುತ್ತಿದ್ದಾನೆ.

    ಇಲ್ಲಿನ ಸುತ್ತಮುತ್ತಲಿನ ವ್ಯಾಪಾರಿಗಳು ಹಾಗೂ ಅಂಗಡಿ ಮಾಲೀಕರು ಗೂಡಾರಿ ಪಾಲಯ್ಯನ ಪರಿಸರ ಸಂರಕ್ಷಣೆಯ ಬಗ್ಗೆ ಸಂತಸಗೊಂಡಿದ್ದು, ಇವನು ಮಾಡುವ ಕಾರ್ಯವನ್ನು ಮುಕ್ತಕಂಠದಿಂದ ಪ್ರಶಸ್ತಿಸುತ್ತಿದ್ದಾರೆ. ಕುಮಾರ್, ಸುರೇಶ್, ಅವಲಕ್ಕಿ, ತಿಪ್ಪೇಸ್ವಾಮಿ, ಶಿವು, ಚಂದ್ರು ಮುಂತಾದವರು ಹೇಳುವಂತೆ ಪ್ರತಿನಿತ್ಯವೂ ಮುಂಜಾನೆ ಗಿಡಗಳಿಗೆ ನೀರು ತಂದು, ಗೊಬ್ಬರ, ಕಟ್ಟಿಗೆ ನೆಟ್ಟು ಪೋಷಣೆ ಮಾಡುವ ಈ ಹಮಾಲಿಯ ಕಾರ್ಯ ಮೆಚ್ಚುವಂತಹದ್ದು. ಸುಮಾರು 25ಕ್ಕೂ ಹೆಚ್ಚು ವಿವಿಧ ಜಾತಿಯ ಗಿಡಗಳನ್ನು ನೆಟ್ಟು ಪ್ರತಿದಿನವೂ ಅವುಗಳ ರಕ್ಷಣೆ ಮಾಡುತ್ತಿದ್ದಾನೆ. ಆಸಕ್ತಿಯಿಂದ ಪ್ರತಿನಿತ್ಯ ಗಿಡಗಳಿಗೆ ನೀರುಣಿಸುವ ಇವನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap