ಈ ಬಾರಿ ಬಜೆಟ್ ನಲ್ಲಿ ಮದ್ಯ ಪ್ರಿಯರಿಗೆ ಕಾದಿದೆ ದೊಡ್ಡ ಶಾಕ್..!

ಬೆಂಗಳೂರು

     ಪ್ರಸಕ್ತ ಸಾಲಿನ ಬಜೆಟ್ ಅನ್ನು ಮಾರ್ಚ್ 05ರಂದು ಮಂಡಿಸಲಿದ್ದಾರೆ . ಈ ಬಾರಿ ಬಜೆಟ್ ನಲ್ಲಿ ಮದ್ಯದ ಬೆಲೆ ಏರಿಕೆಗೆ ಅಬಕಾರಿ ಇಲಾಖೆ ಪ್ರಸ್ತಾವನೆ ಸಲ್ಲಿಸಿದೆ.

     ಬಜೆಟ್ ನಲ್ಲಿ ಈ ಬಗ್ಗೆ ತೆರಿಗೆ ಸಂಗ್ರಹಕ್ಕಾಗಿ ಮದ್ಯದ ಬೆಲೆ ಏರಿಕೆ  ಮಾಡುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ. ಬಜೆಟ್ ನಲ್ಲಿ ತೆರಿಗೆ ಹೆಚ್ಚಳ ಘೋಷಣೆಯಾಗುತ್ತಿದ್ದಂತೆ ಏಪ್ರಿಲ್ 1 ರಿಂದ ನೂತನ ದರ ಪಟ್ಟಿ ಜಾರಿಗೆ ಬರಲಿದೆ. ಅಬಕಾರಿ ತೆರಿಗೆ ಶೇಕಡ 10 ರಷ್ಟು ಹೆಚ್ಚಳವಾಗುವ ನಿರೀಕ್ಷೆಯಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

    ಅಬಕಾರಿ ಇಲಾಖೆಗೆ ಮುಂದಿನ ಹಣಕಾಸು ವರ್ಷಕ್ಕೆ 25 ಸಾವಿರ ಕೋಟಿ ರೂಪಾಯಿ ಗುರಿ ನಿಗದಿಪಡಿಸಲು ಹಣಕಾಸು ಇಲಾಖೆ ಹೊಂದಿರುವ ಸಿಎಂ ಯಡಿಯೂರಪ್ಪ ತೀರ್ಮಾನ ಕೈಗೊಂಡಿದ್ದು ಅಬಕಾರಿ ತೆರಿಗೆಯನ್ನು ಶೇಕಡ 10 ರಷ್ಟು ಹೆಚ್ಚಳ ಮಾಡುವ ಸಾಧ್ಯತೆ ಇದೆ. ಆದಾಯ ತರುವ ಪ್ರಮುಖ ಇಲಾಖೆಗಳಲ್ಲಿ ಒಂದಾಗಿರುವ ಅಬಕಾರಿ ಇಲಾಖೆ ಆದಾಯ ಗುರಿ ಹೆಚ್ಚಿಸಲು ತೆರಿಗೆ ಹೆಚ್ಚಳ ಮಾಡಲಾಗುವುದು ಎಂದು ಹೇಳಲಾಗಿದೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ