ಶಿರಾ : ಕೋಟೆ ಸರ್ಕಾರಿ ಶಾಲೆಯಲ್ಲಿ ಕೊಠಡಿಗಳ ಕೊರತೆ

ಶಿರಾ

      ನಗರದ ಕೋಟೆ ಬಡಾವಣೆಯ ಸರ್ಕಾರಿ ಹಿರಿಯ ಮಾಧ್ಯಮಿಕ ಪಾಠಶಾಲೆಯಲ್ಲಿ ಕೊಠಡಿಗಳ ಕೊರತೆ ಇದ್ದು, ಈ ಕೂಡಲೆ ಕೊಠಡಿಗಳ ಕೊರತೆಯನ್ನು ನೀಗಿಸುವಂತೆ ವಿದ್ಯಾರ್ಥಿಗಳ ಪೋಷಕರು ಸಂಬಂಧಪಟ್ಟ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ .ಸದರಿ ಶಾಲೆಯಲ್ಲಿ 224 ವಿದ್ಯಾರ್ಥಿಗಳಿದ್ದು, ಇರುವ ಕೊಠಡಿಗಳಲ್ಲಿ ವಿದ್ಯಾರ್ಥಿಗಳು ಕೂತು ಪಾಠ ಕೇಳಲು ತುಂಬಾ ಸಮಸ್ಯೆಯಾಗಿದೆ. ಸದರಿ ಶಾಲಾ ಆವರಣದಲ್ಲಿ ಹಳೆಯದಾದ ನಾಲ್ಕು ಕೊಠಡಿಗಳ ಪೈಕಿ ಒಂದು ಕೊಠಡಿ ಸಂಪೂರ್ಣವಾಗಿ ನಶಿಸುವ ಹಂತ ತಲುಪಿದೆ. ಉಳಿದ ಮೂರು ಹಳೆಯ ಕೊಠಡಿಗಳ ಹೆಂಚುಗಳು ತೂತು ಬಿದ್ದು ಮಳೆ ಬಂದರೆ ಕೊಠಡಿಗಳು ಸೋರುತ್ತಿವೆ ಎಂದು ಪೋಷಕರು ಆರೋಪಿಸಿದ್ದಾರೆ.

      ಕಳೆದ ಹಲವು ವರ್ಷಗಳಿಂದಲೂ ಶಿಥಿಲಾವಸ್ಥೆ ತಲುಪಿರುವ ಕೊಠಡಿಗಳನ್ನು ಕೆಡವಿ ನೂತನ ಕೊಠಡಿಗಳನ್ನು ನಿರ್ಮಿಸಿಕೊಡುವಂತೆ ಸಂಬಂಧಿಸಿದ ಶಾಲಾ ಮುಖ್ಯಸ್ಥರು ಜಿ.ಪಂ..ಗೆ ಹಾಗೂ ಇಲಾಖೆಗೆ ಪತ್ರ ಬರೆದು ಸಾಕಾಗಿ ಹೋಗಿದ್ದು, ಇನ್ನಾದರೂ ಸಂಬAಧಪಟ್ಟವರು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap