ಬದಲಾದ ತಂತ್ರಜ್ಞಾನಕ್ಕೆ ಹೊಂದಿಕೊಳ್ಳುವ ಅನಿವಾರ್ಯತೆ :ನ್ಯಾ.ಅಭಯ್ ಓಕಾ

ಬೆಂಗಳೂರು
      ಕೋವಿಡ್‍ನಂತಹ ತುರ್ತು ಪರಿಸ್ಥಿತಿಯಲ್ಲಿ ಎಲ್ಲವೂ ಕ್ಲಿಷ್ಟಕರವಾಗಿರುವಾಗ ಬದಲಾವಣೆ ಎಂಬುದು ಅನಿವಾರ್ಯ. ವಕೀಲರು ಸಹ  ಬದಲಾದ ತಂತ್ರಜ್ಞಾನಕ್ಕೆ ಅನಿವಾರ್ಯವಾಗಿ ಹೊಂದಿಕೊಳ್ಳಲೇಬೇಕು ಎಂದು ಕರ್ನಾಟಕ ರಾಜ್ಯ ಹೈ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ್  ಓಕಾ ಸಲಹೆ ನೀಡಿದರು.
      ಮೇ 24ರಂದು ಅಪರಾಹ್ನ ಆಯೋಜಿಸಿದ್ದ ಆನ್‍ಲೈನ್ ಸಂವಾದದಲ್ಲಿ ಪ್ರಸ್ತುತ ಸನ್ನಿವೇಶದಲ್ಲಿ ಕೋರ್ಟ್‍ಗಳಲ್ಲಿ ತಾಂತ್ರಿಕತೆ ನಿರ್ವಹಣೆ ಮತ್ತು ವಕೀಲರ ಪಾತ್ರ ಕುರಿತು ರಾಷ್ಟ್ರಾದ್ಯಂತ ಇರುವ ವಕೀಲ ಸಮೂಹದೊಂದಿಗೆ ಅವರು ಮಾತನಾಡುತ್ತಾ ಮೇಲ್ಕಂಡಂತೆ ತಿಳಿಸಿದರು. 
   
     ಕೊರೋನಾ ಲಾಕ್‍ಡೌನ್‍ನಿಂದಾಗಿ ಎಲ್ಲಾ ಕಡೆ ನ್ಯಾಯಾಲಯಗಳು ಮುಚ್ಚಬೇಕಾಗಿದೆ. ಆದರೂ ಅನಿವಾರ್ಯ ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ತಂತ್ರಜ್ಞಾನ ಬಹಳ ಮುಖ್ಯ. ಇದಕ್ಕೆ ನ್ಯಾಯಾಂಗದ ಎಲ್ಲರೂ ಹೊಂದಿಕೊಳ್ಳಬೇಕು ಎಂದು ಸಲಹೆ ನೀಡುತ್ತಲೇ ಪ್ರಸ್ತುತ ಎದುರಿಸುತ್ತಿರುವ ಸವಾಲುಗಳು ಹಾಗೂ ವಕೀಲರು ಸನ್ನದ್ದಗೊಳ್ಳಬೇಕಿರುವ ಕೆಲವು ಕಲಂಗಳ ಬಗ್ಗೆ ಮಾಹಿತಿ ನೀಡಿದರು.
     ರಾಜ್ಯ ಮತ್ತು ರಾಷ್ಟ್ರ ಉನ್ನತ ನ್ಯಾಯಾಲಯಗಳಿಗಿಂತ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ನ್ಯಾಯಾಲಯಗಳಲ್ಲಿ ಪ್ಲಿಡಿಂಗ್ಸ್ ತುಂಬಾ ಅರ್ಥಗರ್ಭಿತವಾಗಿ ಇರುತ್ತದೆ. ವಾಸ್ತವಾಂಶ ಅದರಲ್ಲಿ ಇರುತ್ತದೆ. ಮೇಲ್ಮನವಿಗಳಲ್ಲಿ ಇವೆಲ್ಲವೂ ನಿರೂಪಿತವಾಗಿರುವುದಿಲ್ಲ ಎಂದ ಅವರು, ಇಂದಿನ ಸನ್ನಿವೇಶದಲ್ಲಿ ವಕೀಲರು ಜನಸಾಮಾನ್ಯರ ಹಂತಕ್ಕೆ ಇಳಿದು ಅವರ ಮನಸ್ಥತಿ ಅರಿತು ಕಾರ್ಯನಿರ್ವಹಿಸಬೇಕಾಗಿದೆ. ಹಿರಿಯ ವಕೀಲರು ಕಿರಿಯ ವಕೀಲರಿಗೆ ಮಾರ್ಗದರ್ಶನ ನೀಡಬೇಕಾಗಿದೆ. ವೃತ್ತಿ ಗೌರವ ಕಾಪಾಡಲು ಶ್ರಮಿಸಬೇಕಾಗಿದೆ. ಈ ಎರಡು ತಿಂಗಳ ಅವಧಿಯಲ್ಲಿ ಸಮಯ ವ್ಯರ್ಥ ಮಾಡದೆ ಏನಾದರೂ ಕಲಿಯುವ ಹಾಗೂ ತಮ್ಮ ಜೀವನ, ಆತ್ಮ ಚರಿತ್ರೆಗಳನ್ನು ನಿರೂಪಿಸುವ ಮಟ್ಟಕ್ಕಾದರೂ ಬೆಳೆದರೆ ಮುಂದಿನವರೆಗೆ ಅದು ಉಪಯುಕ್ತವಾಗುತ್ತದೆ ಎಂದರು. 
   
     ಕೋವಿಡ್ ಈ ಸ್ಥಿತಿಯಲ್ಲಿ ನ್ಯಾಯಾಲಯಗಳು ಇ-ಫೈಲಿಂಗ್ ಮತ್ತು ವೀಡಿಯೋ ಕಾನ್‍ಫರೆನ್ಸ್ ಮೂಲಕ ಕಾರ್ಯನಿರ್ವಹಿಸುತ್ತಿವೆ. ಜೂನ್ 1 ರ ನಂತರ ಪರಿಸ್ಥಿತಿ ಅವಲೋಕಿಸಿ ಸೂಕ್ತ ಕ್ರಮಕ್ಕೆ ಮುಂದಾಗಬೇಕಾಗುತ್ತದೆ. ಪ್ರಾಂತ್ಯದಿಂದ ಪ್ರಾಂತ್ಯಕ್ಕೆ ಕೊರೋನಾ ಭಿನ್ನ ರೂಪದಲ್ಲಿ ಇರುವುದರಿಂದ ಎಲ್ಲಾ ಕಡೆಯೂ ಒಂದೇ ಹೋಲಿಕೆ ಮಾಡಲಾಗದು ಎಂದು ತಿಳಿಸಿ,  ಇ-ಮೇಲ್ ನೋಟಿಸ್ ಬಗ್ಗೆ ಗಮನ ಸೆಳೆದು, ಈ ಜಾರಿ ಕ್ರಮದಲ್ಲಿ ಮುಂದಿನ ದಿನಗಳಲ್ಲಿ ಸ್ಪಷ್ಟತೆ ಸಿಗಲಿದೆ.
     ವಕೀಲರು, ಕಕ್ಷಿದಾರರು ಹಾಗೂ ಜನಸಾಮಾನ್ಯರು ಇವರೆಲ್ಲರನ್ನೂ ಗಮನದಲ್ಲಿಟ್ಟುಕೊಂಡು ನಿಯಮ ಜಾರಿ ಮಾಡಬೇಕಾಗುತ್ತದೆ. ಅಮಲು ಜಾರಿ ಬಗ್ಗೆ ಹಲವು ಆದೇಶಗಳು ಈಗಾಗಲೆ ಜಾರಿಯಲ್ಲಿವೆ ಎಂದರು. ಸುಮಾರು 1-20 ನಿಮಿಷಗಳ ಕಾಲ ಜೂಮ್  ಆ್ಯಪ್ ಮೂಲಕ ವೀಡಿಯೋ ಕಾನ್‍ಫರೆನ್ಸ್ಸ್‍ನಲ್ಲಿ 500 ಕ್ಕೂ ಹೆಚ್ಚು ಲಾಗಿನ್ ಆಗಿ ನಿರರ್ಗಗಳವಾಗಿ ಮಾತನಾಡಿದರು. ತುಮಕೂರಿನ ಹಿರಿಯ ವಕೀಲರಾದ ಎಸ್.ವಿ.ರವೀಂದ್ರನಾಥ ಠ್ಯಾಗೂರು ಸೇರಿದಂತೆ ಇತರೆ ವಕೀಲರು ಈ ಸಂವಾದದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap