ತಿಪಟೂರು
ಮಾರ್ಚ್ 1 ರಿಂದ ಸಂಪೂರ್ಣವಾಗಿ ಪ್ಲಾಸ್ಟಿಕ್ ಮತ್ತು ಕಳಪೆ ಗುಣಮಟ್ಟದ ಫ್ಲೆಕ್ಸ್ ನಿಷೇದ ಎಂದು ನಗರಸಭೆಯ ವಾಹನಗಳಲ್ಲಿ ಅಬ್ಬರದ ಪ್ರಚಾರ ನೀಡುತ್ತಿರುವ ನಗರಸಭೆ ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಮಾತ್ರ ಸುಮ್ಮನಿದೆ.
ನಗರದಲ್ಲಿ ಕಳಪೆ ಗುಣಮಟ್ಟದ ಫ್ಲೆಕ್ಸ್ ನಿಷೇದವಿದ್ದರೂ ನಗರದ ಪ್ರವಾಸಿಮಂದಿರ ವೃತ್ತ, ಮತ್ತಿತರ ವೃತ್ತಗಳಲ್ಲಿ ಕಳಪೆಗುಣಮಟ್ಟದ ಫ್ಲೆಕ್ಸ್ ಹಾಕುತ್ತಿದ್ದಾರೆ. ಆದರೆ ಈ ಫ್ಲೆಕ್ಸ್‍ಗೆ ನಗರಸಭೆಯಿಂದ ಅನುಮತಿ ಪತ್ರವನ್ನು ಲಗತ್ತಿಸಿರುತ್ತಾರೆ. ಬಟ್ಟೆ ಫ್ಲೆಕ್ಸ್‍ಗೆ ಅನುಮತಿ ಕೊಟ್ಟಿದ್ದರು ಅದನ್ನು ಲೆಕ್ಕಿಸದೆ ಕಳಪೆಗುಣಮಟ್ಟದ ಫ್ಲೆಕ್ಸ್‍ಅನ್ನು ಹಾಕಿದ್ದರು ನಗರಸಭೆಯವರು ಅನುಮತಿಮಾತ್ರನೀಡಿ ತಮಗೆ ಕಂದಾಯಬಂದರೆ ಸಾಕೆಂದು ತೋರಿಸಿಕೊಟ್ಟಿದ್ದಾರೆ.
ಟ್ರೇಡ್ ಲೈಸೆನ್ಸ್ :
ಇದೇ ರೀತಿ ಹಲವಾರು ಟ್ರೇಡ್ ಲೈಸೆನ್ಸ್‍ಗಳ್ಳಿ ಹೆಚ್ಚಿನವು ಹಳೇಪಾಳ್ಯಕ್ಕೆ ಸಂಬಂಧಿಸಿದವು ಆದರೆ ಈ ಇವುಗಳು ಸರ್ಕಾರದ ಯೋಜನೆಗಳ ಸಾಲವನ್ನು ತೆಗೆದುಕೊಳ್ಳಲು ಮಾತ್ರ ಅನುಮತಿ ತೆಗೆದುಕೊಂಡಿದ್ದಾರೆ. ಇನ್ನು ನಗರದ ಅಕ್ಕಪಕ್ಕದ ರಸ್ತೆಗಳಲ್ಲಿರುವ ಪ್ರತಿಷ್ಟಿತ ಅಂಗಡಿ ಮುಂಗಟ್ಟುಗಳಲ್ಲೇ ವ್ಯಾಪಾರದ ಅನುಮತಿ ಪತ್ರವಿಲ್ಲ ಇದ್ದರೂ ಏಕೆ ಪ್ರದರ್ಶಿಸುತ್ತಿಲ್ಲ ಇದನ್ನೂ ಏಕೆ ನಗರಸಭೆಯವರು ಪ್ರಶ್ನಿಸುತ್ತಿಲ್ಲ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಅವ್ಯಾಹತವಾಗಿ ನಡೆಯುತ್ತಿರುವ ಪ್ಲಾಸ್ಟಿಕ್ ಮಾರಾಟ :
ನಗರದಲ್ಲಿ ಮಾರ್ಚ್ 1 ರಿಂದ ಪ್ಲಾಸ್ಟಿಕ್ ನಿಷೇದ ಜಾರಿಯಲ್ಲಿದ್ದು ಮೊದಮೊದಲು ಎಲ್ಲಾ ಕಡೆ ಮೊದಲಿನಂತೆ ನಗರದ ಎಲ್ಲಾ ಕಡೆ ಅವ್ಯಾಹತವಾಗಿ ಮತ್ತೆ ನಿಷೇದಿತ ಪ್ಲಾಸ್ಟಿಕ್ ಮತ್ತೆ ಬಿರುಗಾಳಿಯಂತೆ ಬರುತ್ತಿದೆ ಇನ್ನಾದರೂ ಇದರ ಬಗ್ಗೆ ನಗರಸಭೆಯ ಅಧಿಕಾರಿಗಳು ಎಚ್ಚೆತ್ತುಕೊಳ್ಳಲಿ.
“ನಗರಸಭೆಯ ಪ್ಲಾಸ್ಟಿಕ್ ನಿಷೇದ ಮತ್ತು ಹಸಿಕಸ ಮತ್ತು ಒಣಕಸವನ್ನು ವಿಂಗಡಿಸಿ ಎಂಬುದು ಕೇವಲ ಪ್ರಚಾರಕ್ಕೆ ಮಾತ್ರ ಸೀಮಿತ ವಾಗಿದ್ದು ಅದನ್ನು ಜಾರಿಮಾಡುವಲ್ಲಿ ಏಕೆ ನಗರಸಭೆಯ ಅಧಿಕಾರಿಗಳು ಇದನ್ನು ನಿರ್ಲಕ್ಷಿಸಿ ಪರಿಸರಕ್ಕೆ ಹಾನಿಮಾಡುತ್ತಿದ್ದಾರೆಂದು” ವಿಜ್ಞಾನ ಶಿಕ್ಷಕರಾದ ಶಿವಕುಮಾರ್ ಪ್ರಶ್ನಿಸುತ್ತಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
