ನೂತನ ಸಚಿವರ ಪರಿಚಯ ಅಗತ್ಯವಿಲ್ಲ ಅವರು ನಮ್ಮಲ್ಲಿದ್ದವರೇ : ಸಿದ್ದರಾಮಯ್ಯ

ಬೆಂಗಳೂರು

  ಕೆಲದಿನಗಳ ಹಿಂದೆಯಷ್ಟೆ ಪದಗ್ರಹಣ ಮಾಡಿದ ನೂತನ ಸಚಿವರನ್ನು ವಿಧಾನಸಭೆಗೆ ಪರಿಚಯಿಸಲು ಮುಖ್ಯಮಂತ್ರಿ ಮುಂದಾದಾಗ ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು.

   ಜಂಟಿ ಅಧಿವೇಶನದ ಎರಡನೇ ದಿನ ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆಯೇ 2018ನೇ ಸಾಲಿನ ಸಿಎಜಿ ವರದಿಯನ್ನು ಸದನದಲ್ಲಿ ಮಂಡಿಸಿದರು. ಆ ಬಳಿಕ ನೂತನ ಸಚಿವರನ್ನು ಪರಿಚಯ ಮಾಡಿಕೊಡಲು ಸಿಎಂ ಯಡಿಯೂರಪ್ಪ ಮುಂದಾದರು. ನೂತನ ಸಚಿವರಾದ ರಮೇಶ್ ಜಾರಕಿಹೊಳಿ, ಬಿ.ಸಿ. ಪಾಟೀಲ್, ಡಾ. ಸುಧಾಕರ್, ಶಿವರಾಂ ಹೆಬ್ಬಾರ್ ಸೇರಿದಂತೆ ಎಲ್ಲ 10 ನೂತನ ಸಚಿವರ ಹೆರುಗಳನ್ನು ಹೇಳುತ್ತಿದ್ದರು. ಆಗ ಮಧ್ಯೆ ಪ್ರವೇಶ ಮಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ನೂತನ ಸಚಿವರೇ ಸದನದಲ್ಲಿ ಇಲ್ಲ, ಸದನದಲ್ಲಿದ ಸಚಿವರನ್ನು ಏಕೇ ಪರಿಚಯ ಮಾಡಿಕೊಡುತ್ತೀರಿ? ಇದು ನಗೆಪಾಟಲಾಗುತ್ತದೆ. ಹಾಜರಿರುವ ಸಚಿವರನ್ನು ಮಾತ್ರ ಪರಿಚಯ ಮಾಡಿಕೊಡಿ ಎಂದರು.

    ಇದರೊಂದಿಗೆ ಜಂಟಿ ಅಧೀವೇಶನದ ಎರಡನೇ ದಿನವೂ ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಯಾಗಲಿ ಅಥವಾ ಅಭಿವೃದ್ಧಿಯ ಬಗ್ಗೆಯಾಗಲಿ ಏನೂ ಚರ್ಚೆಯಾಗದಿರುವುದು ಬೇಸರದ ಸಂಗತಿ , ಆದರೂ ಒಮ್ಮತದ ನಿರ್ಣಯಕ್ಕೆ ಮಾತ್ರ ವಿಧಾನಸಭೆ ಬರಲಿಲ್ಲ ಸದನದಲ್ಲಿ ಹಾಜರಿರದೇ ಇರುವ ಸಚಿವರ ಹೆಸರುಗಳನ್ನು ಬಿಟ್ಟು ಉಳಿದಂತೆ ಹಾಜರಿದ್ದ ಸಚಿವರಾದ ಶಿವರಾಂ ಹೆಬ್ಬಾರ್, ಬಿ.ಎ. ಬಸವರಾಜು ಅವರನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸದನಕ್ಕೆ ಪರಿಚಯಿಸಿದ್ರು.
 
     ಆಗ ಮತ್ತೆ ಸಿಎಂ ಯಡಿಯೂರಪ್ಪ ಕಾಲೆಳೆದ ವಿಪಕ್ಷ ನಾಯಕ ಸಿದ್ದರಾಮಯ್ಯ, ಇರಲಿ ಬಿಡಿ ಅವರ ಪರಿಚಯದ ಅಗತ್ಯವಿಲ್ಲ. ಅವರೆಲ್ಲ ನಮ್ಮಲ್ಲಿದ್ದವರೆ ಎಂದರು. ಆಗ ಮಧ್ಯ ಪ್ರವೇಶ ಮಾಡಿದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಅವರು ನಿಮ್ಮಲ್ಲಿ ಇದ್ದವರೇ, ಆದರೆ ಇಲ್ಲಿದ್ದವರಿಗೂ ಆ ವಿಷಯ ಗೊತ್ತಾಗಲಿ ಎಂದು ಹಾಸ್ಯಚಟಾಕಿ ಹಾರಿಸಿದ್ರು.
  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap