ಬೆಂಗಳೂರು
ತಮಗೆ ಕಾಂಗ್ರೆಸ್ ನಿಂದಾಗಲಿ, ಜೆಡಿಎಸ್ ಪಕ್ಷದಿಂದಾಗಲಿ ಯಾವುದೇ ಆಫರ್ ಬಂದಿಲ್ಲ. ಬಿಜೆಪಿಯನ್ನು ತೊರೆಯು ಬಗ್ಗೆ ತೀರ್ಮಾನಿಸಿಲ್ಲ ಎಂದು ಮೈಸೂರು ಕೃಷ್ಣರಾಜ ಕ್ಷೇತ್ರ ಬಿಜೆಪಿ ಶಾಸಕ ನಾಗೇಂದ್ರ ಸ್ಪಷ್ಟಪಡಿಸಿದ್ದಾರೆ.
ಆಪರೇಷನ್ ಬಿಜೆಪಿಗೆ ತಿರುಗೇಟು ಕೊಡಲು ಮುಖ್ಯಮಂತ್ರಿ ಕುಮಾರಸ್ವಾಮಿ ಮೈಸೂರು ಚಿತ್ರದುರ್ಗ ಭಾಗದ ಬಿಜೆಪಿ ಶಾಸಕರಿಗೆ ಪಕ್ಷ ಸೇರಲು ಆಹ್ವಾನ ನೀಡಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ನಗರದಲ್ಲಿಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ನಾಗೇಂದ್ರ, ತಮಗೆ ಪಕ್ಷ ಬದಲಾವಣೆ ಮಾಡುವ ಬಗ್ಗೆ ಆಲೋಚನೆಯಿಲ್ಲ. ಬಿಜೆಪಿ ಬಿಡಬೇಕೆಂದು ತಾವು ತೀರ್ಮಾನಿಸಿದ್ದರೆ ಹಿಂದೆಯೇ ಯಡಿಯೂರಪ್ಪ ಅವರ ಜತೆ ಕೆಜೆಪಿಗೆ ಹೋಗಬಹುದಿತ್ತು. ಆದರೆ ತಾವು ಅಂತಹ ನಿರ್ಣಯ ಕೈಗೊಂಡಿಲ್ಲ. ಹೀಗಿರುವಾಗ ಪ್ರಸಕ್ತ ಸಂದರ್ಭದ ರಾಜಕಾರಣದಲ್ಲಿ ಏಕೆ ಪಕ್ಷ ಬಿಡಲಿ.ಯಾವುದೇ ಕಾರಣಕ್ಕೂ ತಾವು ಬಿಜೆಪಿ ಬಿಟ್ಟು ಹೋಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








