ಕೆಟ್ಟ ನೀರಿನ ಘಟಕ : ಕೇಳುವವರೆ ಇಲ್ಲ

ಗುಬ್ಬಿ

    ತಾಲ್ಲೂಕಿನ ಮಂಚಲದೊರೆ ಗ್ರಾಮದಲ್ಲಿ ಶುದ್ದ ನೀರಿನ ಘಟಕ ಕೆಟ್ಟು ಸುಮಾರು 2 ತಿಂಗಳೆ ಕಳೆದಿವೆ. ಇದುವರೆಗೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ನೀರಿಗಾಗಿ ಹಾಹಾಕಾರ ಉಂಟಾಗಿದೆ ಎಂದು ಮಂಚಲದೊರೆ ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.ಮಂಚಲದೊರೆ ಗ್ರಾಮದಲ್ಲಿ ಸುಮಾರು ಒಂದು ಸಾವಿರ ಮನೆಗಳಿದ್ದು, ಸುತ್ತಮುತ್ತಲಿನ ಹಳ್ಳಿಯ ಗ್ರಾಮಸ್ಥರು ಸಹ ಇದೇ ಕುಡಿಯುವ ನೀರಿನ ಘಟಕವನ್ನು ಅವಲಂಬಿಸಿದ್ದಾರೆ. ಘಟಕವನ್ನು ಸರಿಯಾಗಿ ನಿರ್ವಹಿಸದೆ ತಿಂಗಳಲ್ಲಿ ಪದೆ ಪದೆ ಎರಡು ಮೂರು ಸಲ ಕೆಟ್ಟು ಹೋಗುತ್ತಿದೆ.

     ಶುದ್ದ ನೀರಿನ ಘಟಕ ಕೆಟ್ಟು ಹೋಗಿರುವುದರಿಂದ ಮಂಚಲದೊರೆಯಿಂದ ಸುಮಾರು 5 ಕಿ.ಮೀ. ದೂರದಲ್ಲಿರುವ ಹೂವಿನಕಟ್ಟೆ ಗ್ರಾಮಕ್ಕೆ ಹೋಗಿ ಕುಡಿಯುವ ನೀರನ್ನು ತರಬೇಕಾದ ಪರಿಸ್ಥಿತಿ ಬಂದಿದೆ. ಸಂಬಂಧಪಟ್ಟ ಅಧಿಕಾರಿಗಳು ತುರ್ತಾಗಿ ನೀರಿನ ಘಟಕವನ್ನು ಸರಿಪಡಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link