ಕೃಷಿ ಮಾರುಕಟ್ಟೆಯಲ್ಲಿ ಕೃಷಿಕರಿಗೆ ಜಾಗವಿಲ್ಲ

ತಿಪಟೂರು

     ಅಂತು ಇಂತು ನಗರದ ಎ.ಪಿ.ಎಂ.ಸಿ ಹಣ್ಣು ಮತ್ತು ತರಕಾರಿ ಮಾರುಕಟ್ಟೆ ಸ್ವಚ್ಛವಾಗಿ ಅಕ್ರಮ ಒತ್ತುವರಿದಾರರನ್ನು ತೆರವುಗೊಳಿಸಿದ ನಂತರ ಮಾರುಕಟ್ಟೆಗೆ ಆಗಮಿಸಿದ ರೈತರಿಗೆ ಶಾಕ್ ಕಾದಿತ್ತು. ಇದರಿಂದ ರೊಚ್ಚಿಗೆದ್ದ ರೈತರು ಶುಕ್ರವಾರ ನಮಗೆ ಜಾಗ ಸಿಗದಿದ್ದರೆ ಮಾರುಕಟ್ಟೆಯನ್ನು ಬಂದ್ ಮಾಡುವುದಾಗಿ ಎಚ್ಚರಿಸಿ ಹೋದ ಘಟನೆ ಗುರುವಾರ ಬೆಳಗ್ಗೆ ಮಾರುಕಟ್ಟೆಯ ಅಂಗಳದಲ್ಲಿ ನಡೆಯಿತು.

      ರೈತರು ತಾವು ಕಷ್ಟಪಟ್ಟು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ಇರುವಂತಹ ಸಂದರ್ಭದಲ್ಲಿ, ಏನೇ ಕಷ್ಟ ಬಂದರೂ ನಾವು ಉಳುವುದನ್ನು ಬಿಡುವುದಿಲ್ಲವೆಂದು ಮತ್ತೆ ಬೆಳೆ ಬೆಳೆದು ಇಲ್ಲದ ಸಂಕಷ್ಟಕ್ಕೆ ಗುರಿಯಾಗುತ್ತಿದ್ದಾರೆ. ಕೊರೊನಾ ಲಾಕ್‍ಔಟ್ ಸಮಸ್ಯೆಯಿಂದ ಬಳಲುತ್ತಿರುವ ಈ ಸಂದರ್ಭದಲ್ಲಿ ದಲ್ಲಾಳಿಗಳ ಹಿಡಿತದಲ್ಲಿದ್ದ ಮಾರುಕಟ್ಟೆಯನ್ನು ಕೊರೊನಾ ನೆಪದಲ್ಲಾದರು ಸ್ವಚ್ಛಗೊಳಿಸಿದ್ದರು. ಈ ವಿಷಯ ತಿಳಿದ ರೈತರು ಹೇಗೂ ನಾವು ಬೆಳೆದ ತರಕಾರಿಗಳು ಇಲ್ಲೇ ಮಾರಿದರಾಯಿತು ಎಂದು ಬಂದ ರೈತರಿಗೆ ಮಾರುಕಟ್ಟೆಯಲ್ಲಿ ಸ್ಥಳವೇ ಸಿಗದೆ ಇದ್ದರಿಂದ ಧÀರಣಿ ಮಾಡುವ ಹಂತಕ್ಕೆ ತಲುಪಿದ್ದರು.

      ರೈತರು ಮತ್ತು ವ್ಯಾಪಾರಿಗಳ ಮಧ್ಯೆ ಕೈ ಕೈ ಮಿಲಾಯಿಸುವ ಪರಿಸ್ಥಿತಿಗೆ ಕೂಡ ಹೋಗಿದ್ದು, ಪ್ರತಿ ವ್ಯಾಪಾರಿಯೂ ಮಾರುಕಟ್ಟೆಯಲ್ಲಿ ಗೋದಾಮು, ಅಂಗಡಿ ಮತ್ತು ರೈತರ ಜಾಗಗಳನ್ನು ಆಕ್ರಮಿಸಿಕೊಂಡಿರುತ್ತಾರೆ. ಪರಿಸ್ಥಿತಿ ಉದ್ವಿಗ್ನವಾಗುವುದನ್ನು ಕಂಡು ಸ್ಥಳದಲ್ಲೇ ಇದ್ದ ಪೆÇಲೀಸ್ ಇನ್‍ಸ್ಪೆಕ್ಟರ್ ನವೀನ್ ಅವರಿಗೆ ರೈತರು ಸಮಸ್ಯೆಗಳನ್ನು ವಿವರಿಸಿದರು.

      ಈಡೇನಹಳ್ಳಿ ತರಕಾರಿ ಬೆಳಗಾರ ನಟರಾಜು ಪತ್ರಿಕೆಯೊಂದಿಗೆ ಮಾತನಾಡಿ, ನಾವು ಕಷ್ಟಪಟ್ಟು ಬೆಳೆದ ತರಕಾರಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ, ಇನ್ನು ನೇರವಾಗಿ ಮಂಡಿಗೆ ಬಿಡೋಣವೆಂದರೆ ಹುರುಳಿ ಕಾಯಿ ಕೆ.ಜಿ ಒಂದಕ್ಕೆ 30 ರೂ. ಕೊಡುತ್ತಾರೆ. ಅಲ್ಲದೆ ಮಂಡಿಯವರು ಒಂದು ಚೀಟಿ ಕೊಡುತ್ತಾರೆ. ನಂತರ ಅದನ್ನು ಕಂಪ್ಯೂಟರ್ ಬಿಲ್ ಮಾಡಿ ನಮ್ಮ ಹೆಸರನ್ನು ಕೂಗಿದಾಗ ಹೋಗಬೇಕು. ನಂತರ ನಮ್ಮ ಬಿಲ್ ಮೊತ್ತದಲ್ಲಿ 100 ಕ್ಕೆ 10 ರೂ. ನಂತೆ ಸೇವಾ ಶುಲ್ಕವನ್ನು ಕಡಿತಗೊಳಿಸಿ ಹಣ ಕೊಡುತ್ತಾರೆ. ಅಷ್ಟೊತ್ತಿಗಾಗಲೆ ನಾವು ಹಾಕಿದ ಮಾಲು ಮಾರಾಟವಾಗಿರುತ್ತದೆ. ನಾವೆ ಕುಳಿತು ಮಾರಾಟ ಮಾಡೋಣ ಎಂದರೆ ಸ್ಥಳ ದೊರಕುತಿಲ್ಲ. ನಮ್ಮ ಮತ್ತು ಗ್ರಾಹಕರ ನಡುವೆ ಅಮಾನುಷ ಮಧ್ಯವರ್ತಿಗಳು ಹಣ ಲೂಟಿ ಹೊಡೆಯುತ್ತಿದ್ದಾರೆಂದು ತಿಳಿಸಿದರು.

      ನಾಗರಘಟ್ಟ ಮೇಲನಹಳ್ಳಿಯ ಟೊಮೊಟೊ ಬೆಳಗಾರ ಸ್ವಾಮಿ ಮಾತನಾಡಿ, ನಾವು ಕಷ್ಟಪಟ್ಟು ಟೊಮೊಟೊ ಬೆಳೆದಿದ್ದೇವೆ. ಮಂಡಿಗೆ ಹೋದರೆ 10 ಕೆ.ಜಿ.ಯ ಚೀಲಕ್ಕೆ 30 ರೂ. ಎನ್ನುತ್ತಾರೆ. ಹೊರಗಡೆ ಮಾರುಕಟ್ಟೆಯಲ್ಲಿ ಕೆ.ಜಿ. ಗೆ ಸುಮಾರು 15 ರಿಂದ 20 ರೂ. ಗೆ ಮಾರಾಟ ಮಾಡುತ್ತಿದ್ದಾರೆ. ಇದನ್ನು ಕಂಡು ನಾವೇ ಮಾರಲು ಹೊರಟರೆ ಮಧ್ಯವರ್ತಿಗಳು ನಮಗೆ ಸ್ಥಳದ ಅವಕಾಶವನ್ನೇ ಕೊಡುತ್ತಿಲ್ಲ ಎಂದು ಆರೋಪಿಸಿದರು.

       ಸಾಲಹಳ್ಳಿ ತಿಂಗಳ ಹುರುಳಿ ಬೆಳೆಗಾರ ಕೇಶವಮೂರ್ತಿ ತಿಳಿಸಿದಂತೆ, ನಮ್ಮ ಹತ್ತಿರ ಹುರಳಿಕಾಯಿಯನ್ನು 30 ರೂ.ಗೆ ತೆಗೆದುಕೊಂಡು, ಅವರದ್ದೆ ಅಂಗಡಿಗಳಿಗೆ ಕೊಟ್ಟು ಕೆ.ಜಿ.ಗೆ 60 ರೂ. ನಂತೆ ಮಾರಿಸುತ್ತಿದ್ದಾರೆ. ನಾವೇ ಮಾರುತ್ತೇವೆ ಎಂದು ಹೊರಟರೆ ನಮ್ಮ ಹಿಂದೆಯೇ ಬಂದು ಜಾಗವಿಲ್ಲದಂತೆ ಮಾಡುತ್ತಾರೆ. ಈಗಲಾದರು ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸಿ ರೈತರಿಗೆ ಸೂಕ್ತ್ತವಾದ ಮಾರಾಟ ವೇದಿಕೆಯನ್ನು ಕಲ್ಪಿಸಿಕೊಡಬೇಕೆಂದು ವಿನಂತಿಸಿದರು.

       ಇದು ಇಂದಿನ ಸಮಸ್ಯೆಯೇನಲ್ಲ. ಇದು ಮಾರುಕಟ್ಟೆ ಪ್ರಾರಂಭವಾದಾಗಿನಿಂದ ಇರುವ ಸಮಸ್ಯೆಯಾಗಿದೆ. ಹಾಗೆಯೇ ನಡೆದುಕೊಂಡು ಬಂದಿದೆ. ನಾವು ಯಾರಿಗೂ ಸ್ಥಳವನ್ನು ನಿಗದಿ ಮಾಡಿಲ್ಲ. ಬೆಳಗ್ಗೆ ಯಾರು ಮೊದಲು ಬರುತ್ತಾರೋ ಅವರಿಗೆ ಸ್ಥಳ ದೊರೆಯುತ್ತದೆ. ಇನ್ನು ಹೆಚ್ಚಿಗೆ ರೈತರು ಬಂದರೆ ಅವರಿಗೆ ಆರ್.ಟಿ.ಓ ಕಚೇರಿಯ ಆವರಣದಲ್ಲಿ ಸ್ಥಳವಾಕಾಶ ಮಾಡಿಕೊಡಲಾಗು ವುದೆಂದು ತಿಳಿಸಿದರು.ಮಾರುಕಟ್ಟೆಯಲ್ಲಿ ದಲ್ಲಾಳಿಗಳ ಹಾವಳಿಯನ್ನು ತಪ್ಪಿಸಿ, ಗ್ರಾಹಕರು ಮತ್ತು ರೈತರ ನಡುವೆ ನೇರ ಸಂಪರ್ಕವೇರ್ಪಟ್ಟರೆ ಗ್ರಾಹಕರಿಗೆ ಉತ್ತಮ, ತಾಜಾ ತರಕಾರಿಯ ಜೊತೆಗೆ ಕಡಿಮೆ ದರಕ್ಕೆ ಮತ್ತು ರೈತರಿಗೆ ನೇರವಾಗಿ ಹಣ ಸಿಗುವುದರಿಂದ ರೈತರ ಬದುಕು ಹಸನಾಗುತ್ತದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap