ರಾಜ್ಯದಲ್ಲಿ ಬಿ.ಜೆ.ಪಿ. ಮೂರುವರೆ ವರ್ಷ ಆಡಳಿತ ನಡೆಸಲು ಯಾವುದೇ ಅಡ್ಡಿ ಆತಂಕವಿಲ್ಲ: ಯಡಿಯೂರಪ್ಪ

ಚಿಕ್ಕನಾಯಕನಹಳ್ಳಿ :
    ರಾಜ್ಯದಲ್ಲಿ ನಡೆದ ಉಪಚುನಾವಣೆಯಲ್ಲಿ ಪಕ್ಷಕ್ಕೆ ಹೆಚ್ಚು ಸ್ಥಾನಗಳು ಬಂದಿದ್ದರಿಂದ ಬಿಜೆಪಿ ಸರ್ಕಾರವು ಮೂರುವರೆ ವರ್ಷ ಯಾವುದೇ ಅಡೆತಡೆ ಇಲ್ಲದೆ ಅಧಿಕಾರ ನಡೆಸುತ್ತದೆ ಎಂದು ಮುಖ್ಯಮತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
     ತಾಲ್ಲೂಕಿನ ಕುಪ್ಪೂರು ಗದ್ದಿಗೆ ಜಾತ್ರಾ ಮಹೋತ್ಸವದಲ್ಲಿ ನಡೆದ ಭಾವೈಕ್ಯ ಧರ್ಮ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತರ ಸಂಕಷ್ಠ ನಿವಾರಿಸಲು, ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ, ಮಹಿಳಾ ಸಬಲೀಕರಣ, ನಿರುದ್ಯೋಗ ತೊಡೆದು ಹಾಕಲು ಸಂಕಲ್ಪ ಮಾಡಿದ್ದೇವೆ, ರಾಜ್ಯದಲ್ಲಿ ಬಿಜೆಪಿ ಸರ್ಕಾರವು ಸಂಪೂರ್ಣ ಅಧಿಕಾರ ಹೊಂದಿದ್ದು ಕೇಂದ್ರ ಸರ್ಕಾರದ ಸಹಕಾರ ದೊರೆಯಲಿದೆ ಎಂದರಲ್ಲದೆ ಧರ್ಮ ಹಾಗೂ ಧಾರ್ಮಿಕ ಚಿಂತನೆ ಜನರ ಒಳಿತಿಗಾಗಿ ಜಾತ್ರೆಗಳು ನಮ್ಮ ಸಂಸ್ಕೃತವನ್ನು ಬಿಂಬಿಸುತ್ತವೆ, ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಜಾತ್ರೆಗಳು, ರಥೋತ್ಸವಗಳು ಜನರ ನಂಬಿಕೆ, ಆಚಾರ, ವಿಚಾರವನ್ನು ಬಿಂಬಿಸುತ್ತವೆ ಎಂದರು.
     ಕುಪ್ಪೂರು ಗದ್ದಿಗೆ ಮಠದ ಅಭಿವೃದ್ದಿಗೆ ಸರ್ಕಾರ 3ಕೋಟಿ ರೂ  ಯೋಜನೆಯನ್ನು ಮುಂಬರುವ ಬಜೆಟ್ನಲ್ಲಿ ಸೇರಿಸಲಿದೆ ಎಂದು ಇದೇ ಸಂದರ್ಭದಲ್ಲಿ ಘೋಷಿಸಿದರು.
      ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಚಿಕ್ಕನಾಯಕನಹಳ್ಳಿ ತಾಲ್ಲೂಕಿನ 96ಕೆರೆಗಳಿಗೆ ನೀರು ಹರಿಸುವ ಯೋಜನೆಗೆ ಸರ್ಕಾರ 260ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ, ಜಿಲ್ಲೆಯ ಹೇಮಾವತಿ ನಾಲಾ ಅಗಲೀಕರಣಕ್ಕೆ ಯಡಿಯೂರಪ್ಪನವರು 550ಕೋಟಿ ರೂಪಾಯಿ ಯೋಜನೆ ಮಂಜೂರು ಮಾಡಿದ್ದು ಇದರಿಂದ ಜಿಲ್ಲೆಯಲ್ಲಿ 1200ಕ್ಯೂಸೆಕ್ಸ್ ನೀರಿನ ಬದಲಾಗಿ 2400 ಕ್ಯೂಸೆಕ್ಸ್ ನೀರು ಹರಿಯಲಿದೆ, ಇದರಿಂದ ತುಮಕೂರು ಜಿಲ್ಲೆಯ ರೈತರ ಜೀವನ ಸುಧಾರಿಸಲಿದೆ ಎಂದರು.
       ಕುಪ್ಪೂರು ಮಠದ ಡಾ.ಯತೀಶ್ವರ ಶಿವಾಚಾರ್ಯಸ್ವಾಮೀಜಿ ಮಾತನಾಡಿ, ರಾಜ್ಯದಲ್ಲಿ ವೀರಶೈವ ಲಿಂಗಾಯಿತ ಧರ್ಮವನ್ನು ಪ್ರತ್ಯೇಕಗೊಳಿಸಲು ಹವಣಿಸಿದರು,  ರಾಜ್ಯದ ವೀರಶೈವ ಮಹಾಸಭಾದ ಅಧ್ಯಕ್ಷರದಾದ ಶಾಮನೂರು ಶಿವಶಂಕರಪ್ಪನವರು ಪ್ರತ್ಯೇಕತೆಯನ್ನು  ವಿರೋಧಿಸಿ ವೀರಶೈವ ಲಿಂಗಾಯಿತ ಒಂದೇ  ಎಂಬ ಏಕಭಿಪ್ರಾಯ ಮೂಡಿಸಲು ಶ್ರಮಿಸಿದರು ಎಂದರು.
      ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಮಾತನಾಡಿ, ಸಮಾಜದಲ್ಲಿ ಮಠಮಾನ್ಯಗಳು ಜನರ ಉದ್ದಾರಕ್ಕಾಗಿ ಅದರದ್ದೇ ಆದ ಸೇವೆಯನ್ನು ಪ್ರಾಮಾಣಿಕವಾಗಿ ಸಲ್ಲಿಸುತ್ತಿದೆ, ಸಿದ್ದಿಪುರುಷರು ದೈವಾನು ಸಂಬೂತರಾದ ಶ್ರೀ ಮರುಳಸಿದ್ದೇಶ್ವರ ಸ್ವಾಮಿಯವರು ಕುಪ್ಪೂರು ಗದ್ದಿಗೆಯಲ್ಲಿ ನಾನೂರು ವರ್ಷಗಳ ಹಿಂದೆ ಲೋಕ ಸಂಚಾರ ಮುಗಿಸಿ ನಿಜ ಸಮಾಧಿಯಾದರು ಎಂಬ ಐತಿಹ್ಯವಿದೆ  ಎಂದರು.
     ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ಮಾಜಿ ಸಚಿವರಾದ ಶಾಮನೂರು ಶಿವಶಂಕರಪ್ಪನವರಿಗೆ ಕುಪ್ಪೂರು ಮರುಳಸಿದ್ದ ಶ್ರೀ ಪ್ರಶಸ್ತಿ, ಅರವಳಿಕೆ ತಜ್ಞೆ ಡಾ.ಎಸ್.ಪಿ.ನಾಗರತ್ನರವರಿಗೆ ಧರ್ಮನಂದಿನಿ ಪ್ರಶಸ್ತಿ, ಬೆಂಗಳೂರಿನ ಮಹಾಗಣಪತಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಎಸ್.ಶಿವರಾಜ್ರವರಿಗೆ ಧರ್ಮರತ್ನಾಕರ ಪ್ರಶಸ್ತಿ ನೀಡಿ ಗೌರವಿಸಿದರು.
      ಕಾರ್ಯಕ್ರಮದಲ್ಲಿ ಸಚಿವ ಆರ್.ಅಶೋಕ್, ಶಾಸಕ ಬಿ.ಸಿ.ನಾಗೇಶ್,   ಶಿವಗಂಗಾ ಕ್ಷೇತ್ರದ ಮಲಯಶಾಂತಮುನಿ ಸ್ವಾಮೀಜಿ, ಯಡಿಯೂರಿನ ರಂಭಾಪುರಿ ಮಠದ ಶ್ರೀ ರೇಣುಕಶಿವಾಚಾರ್ಯಸ್ವಾಮೀಜಿ, ಹೊನ್ನವಳ್ಳಿ ಕರಿಸಿದ್ದೇಶ್ವರ ಮಠದ ಶಿವಪ್ರಕಾಶ ಶಿವಾಚಾರ್ಯಸ್ವಾಮೀಜಿ, ಮಾದಿಹಳ್ಳಿ ಹಿರೇಮಠದ ಚನ್ನಮಲ್ಲಿಕಾಜರ್ನ ಶಿವಾಚಾರ್ಯ ಸ್ವಾಮೀಜಿ, ಜಿಲ್ಲಾಧಿಕಾರಿ ರಾಕೇಶ್ಕುಮಾರ್, ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿ ವಂಶಿಕೃಷ್ಣ, ಸಿಇಓ ಶುಭಾ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link