ಸೆಕ್ಷನ್ 144 ಜಾರಿಯಿದ್ದರೂ ನಿರಾತಂಕವಾಗಿ ನಡೆದ ವ್ಯಾಪಾರ

ತುರುವೇಕೆರೆ

     ಮಹಾಮಾರಿ ಕೊರೋನಾ ವೈರಸ್ ಭೀತಿ ಹಿನ್ನೆಲೆ ತಾಲ್ಲೂಕು ಆಡಳಿತ ಹಾಗೂ ಪಟ್ಟಣ ಪಂಚಾಯ್ತಿ ಕಟ್ಟುನಿಟ್ಟಿನ ಆದೇಶ ಮಾಡಿದ್ದರೂ ಸಹ ಸೋಮವಾರ ಪಟ್ಟಣದ ಹೃದಯ ಭಾಗವಾದ ತಾಲ್ಲೂಕು ಕಚೇರಿ ಹಾಗೂ ರಾಘವೇಂದ್ರ ಹೋಟೆಲ್ ಮುಂಭಾಗದಲ್ಲಿ ಬೀದಿ ಬದಿ ವ್ಯಾಪಾರಿಗಳು ವ್ಯಾಪಾರ ಮಾಡಿದ ದೃಶ್ಯ ಕಂಡು ಬಂದಿತು.

     ಸೋಮವಾರ ಸಂತೆ ರದ್ದಾಗಿದ್ದರೂ ಸಂತೆಗೆಂದು ತಾಲ್ಲೂಕಿನ ಮೂಲೆ ಮೂಲೆಯಿಂದ ಎಂದಿನಂತೆ ಪಟ್ಟಣಕ್ಕೆ ಆಗಮಿಸುವ ಹಳ್ಳಿಗರನ್ನು ಗುರಿಯಾಗಿಸಿಕೊಂಡ ವರ್ತಕರು ಸಂತೆ ವ್ಯಾಪಾರದ ಅಂಗಡಿಗಳನ್ನು ಪಟ್ಟಣದ ಹೊರವಲಯದ ತುರುವೇಕೆರೆ ಕೆರೆಕೋಡಿಬಳಿ ಮುನಿಯೂರು ಮಾರ್ಗದ ರಸ್ತೆಯ ಇಕ್ಕೆಲಗಳಲ್ಲಿ ಬಿಡಾರಗಳನ್ನು ತೆರೆದು ಮುಂಜಾನೆಯಿಂದಲೆ ವ್ಯಾಪಾರ ವಹಿವಾಟು ಪ್ರಾರಂಭಿಸಿದರು. ನಂತರ ಎಚ್ಚೆತ್ತುಕೊಂಡ ಪೊಲೀಸ್ ಇಲಾಖೆ ಕಾರ್ಯಪ್ರವೃತ್ತರಾಗಿ ಅಂಗಡಿಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಮುಂದಾದರು.

     ತರಕಾರಿ ವರ್ತಕರು ಹಾಗೂ ಸಂತೆಗೆಂದು ಬಂದಿದ್ದ ಹಣ್ಣಿನ ವ್ಯಾಪಾರಿಗಳು ಈಗಾಗಲೆ ತಾಲ್ಲೂಕು ಕಚೇರಿ ಹಾಗೂ ರಾಘವೇಂದ್ರ ಹೋಟೆಲ್ ಮುಂಭಾಗದಲ್ಲಿ ಈ ಮುಂಚೆಯೆ ಬೀದಿ ಬದಿ ವ್ಯಾಪಾರ ಮಾಡುತ್ತಿದ್ದ ವರ್ತಕರುಗಳ ಮಧ್ಯೆ ನುಸುಳಿ ತಮ್ಮ ವ್ಯಾಪಾರ ಪ್ರಾರಂಭಿಸಿದರು. ಸಾರ್ವಜನಿಕರು ಎಂದಿನಂತೆ ತಮಗೆ ಬೇಕಾದ ದಿನನಿತ್ಯದ ತರಕಾರಿ ಹಾಗೂ ಇನ್ನಿತರ ಪದಾರ್ಥಗಳನ್ನು ಸರ್ವೇ ಸಾಮಾನ್ಯವಾಗಿ ಕೊರೋನಾ ಭಯಭೀತಿಯಿಲ್ಲದೆ ಕೊಳ್ಳುವಿಕೆಗೆ ಮುಂದಾದರು.

    ತಾಲ್ಲೂಕಿನಲ್ಲಿ 144 ಸೆಕ್ಷನ್ ಜಾರಿಯಿದ್ದರೂ ಅಪಾರ ಸಂಖ್ಯೆಯಲ್ಲಿ ಹಬ್ಬದ ಖರೀದಿಗೆ ಜನತೆ ಆಗಮಿಸಿದ್ದರಿಂದ ಪೊಲೀಸ್ ಇಲಾಖೆ ಹಾಗೂ ತಹಸೀಲ್ದಾರ್ ಹಾಗೂ ಪಟ್ಟಣ ಪಂಚಾಯಿತಿ ಟ್ರಾಫಿಕ್ ಸಮಸ್ಯೆ ತೆರವುಗೊಳಿಸುವಲ್ಲಿ ಅಸಹಾಯಕತೆ ಪ್ರದರ್ಶಿಸಿದ್ದು ಸೋಮವಾರ ಕಂಡು ಬಂತು.

    ಒಟ್ಟಾರೆ ಹಬ್ಬದ ಸಡಗರದಲ್ಲಿ ಸಂತೆ ಸಾಮಾನಿಗೆ ಮುಗಿಬಿದ್ದ ಸಾರ್ವಜನಿಕರು ಒಂದೆಡೆಯಾದರೆ, ವರ್ತಕರು ವ್ಯಾಪಾರ ಬಹಳ ಜೋರಾಗಿಯೆ ನಡೆಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap