ಕೋಟೆನಾಡಿನಲ್ಲಿ ಸಾಂಸ್ಕೃತಿಕತೆಗೆ ಕೊರತೆಯಿಲ್ಲ..!

ಚಿತ್ರದುರ್ಗ:

    ಚಾರಿತ್ರಿಕ ಹಿನ್ನಲೆ ಹೊಂದಿರುವ ಚಿತ್ರದುರ್ಗದ ಬರದನಾಡು ಎನಿಸಿದರೂ ಇಲ್ಲಿ ಕಲೆ, ಸಾಹಿತ್ಯ, ಶಿಕ್ಷಣ ಹಾಗೂ ಸಾಂಸ್ಕೃತಿಕತೆಗೆ ಕೊರತೆಯಿಲ್ಲವೆಂದು ನ್ಯಾಯಾಧೀಶರಾದ ಸಿ.ಎಸ್.ಜಿತೇಂದ್ರನಾಥ್ ಹೇಳಿದರು ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಎಸ್ ಆರ್ ಎಸ್ ಹೆರಿಟೇಜ್ ಶಾಲೆಯು ಆಯೋಜಿಸಿರುವ ಎಸ್. ಆರ್. ಎಸ್. ಯುವ ತರಂಗ-2019 ಸಾಂಸ್ಕøತಿಕ ಮಹಾಸಮ್ಮೇಳನವಾದ ಮೂರನೇ ದಿನದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು

    ಈ ಶಾಲೆಯು ವಿದ್ಯಾರ್ಥಿಗೆ ಎಲ್ಲಾ ರೀತಿಯ ಕಲೆಯನ್ನು ಹೊರಗೆಳೆಯುವ ವೇದಿಕೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಇದಾಗಿದೆ ನಂತರ ಚಿತ್ರದುರ್ಗ ಸಂಸ್ಕøತಿ ಸಾಂಸ್ಕೃತಿಕ ಹಿನ್ನಲೆಯುಳ್ಳ ಕೋಟೆನಾಡು ಆದರೆ ಬರದ ಛಾಪು ಹೆಚ್ಚಾಗಿದ್ದು ಅರ್ಥಿಕತೆಯಿಂದ ಹಿಂದುಳಿದ ಜಿಲ್ಲೆಯಾಗಿದ್ದರು ಶಿಕ್ಷಣದ ಕೊರತೆ ಇಲ್ಲದೆ ಇಂತಹ ಉತ್ತಮ ಶಿಕ್ಷಣ ಸಂಸ್ಥೆಯು ಸುಮಾರು ವರ್ಷಗಳಿಂದ ಜ್ಞಾನ ನೀಡುವ ಜ್ಞಾನ ದೇಗುಲ ಎಂದರೆ ತಪ್ಪಾಗಲಾರದು ಎಂದರು

     ಜೊತೆ ವಸುಧಾಚರಿತಂ ಎಂಬ ಕಥಾವಸ್ತು ನಿಜಕ್ಕೂ ಒಳ್ಳೆಯ ಸಂದೇಶ ನೀಡಿತ್ತದೆ ಕಾರ್ಯಕ್ರಮ ಕುರಿತು ಮಾತನಾಡಿದರು. ಕಲಿಕೆಗೆ ನಿರಂತರ ಪರಿಶ್ರಮ ಅಗತ್ಯ ನಮ್ಮ ಸಂಸ್ಕøತಿಯನ್ನು ಉಳಿಸುವುದು ಬೆಳಸುವುದು ಹಾಗೂ ಭೂಮಿಯನ್ನು ಕರ್ತವ್ಯ ಎಂದರು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರವಿಶಂಕರ್ ರೆಡ್ಡಿ ಮಾತನಾಡಿ, ಪ್ರತಿಯೊಬ್ಬ ಮನುಷ್ಯ ಒಂದೊಂದು ಗಿಡ ನೆಟ್ಟು ಪೋಷಿಸಿದರೆ ಮುಂದಿನ ಭವಿಷ್ಯಕ್ಕೆ ಉತ್ತಮ ಕೊಡುಗೆಯನ್ನು ನಮ್ಮ ಮಕ್ಕಳು ಮೊಮ್ಮಕಳಿಗೆ ನೀಡುತ್ತವೆ.

    ಪರಿಸರ ಬಗ್ಗೆ ಪ್ರತೊಯೊಬ್ಬರಿಗೂ ಕಾಳಜಿ ಅವಶ್ಯ ಎಂದರು ಪರಿಸಿರ ಉಳಿಸುವುದು ಪ್ರತಿಯೊಬ್ಬರ ಅದ್ಯ ಕರ್ತವ್ಯ ಹಸಿರೆ ಉಸಿರು ಎಂದು ಹೇಳುವುದರ ಜೊತೆ ವಿದ್ಯಾರ್ಥಿಗಳಿಗೆ ಹಾಗೂ ನೆರೆದ ಕೋಟೆ ನಾಡಿನ ಜನತೆಗೆ ಸಂದೇಶ ನೀಡುವುದರ ಜೊತೆಗೆ ಮಕ್ಕಳ ಮುಂದಿನ ಪರೀಕ್ಷೆಗೆ ಸಿದ್ದತೆ, ತಯಾರಿ ಕುರಿತು ಮಾತನಾಡಿದರು.

    ಅಧ್ಯಕ್ಷತೆ ವಹಹಿಸಿದ ಎಸ್. ಆರ್. ಎಸ್. ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಬಿ.ಎ. ಲಿಂಗಾರೆಡ್ಡಿ ಮಾತನಾಡಿ ವಿದ್ಯಾರ್ಥಿಗಳ ಜ್ಞಾನ, ಕೌಶಲ, ಕಲೆಯು ನಿಜಕ್ಕೂ ಶ್ಲಾಫನೀಯ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಒಂದಲ್ಲಾ ಒಂದು ರೀತಿಯ ಕಲೆ ಹಾಸು ಹೊಕ್ಕಾಗಿದೆ. ಈ ಮಕ್ಕಳ ಭೌದ್ದಿಕ, ಭೌತಿಕ ಜ್ಞಾನವನ್ನು ಹೊರಗೆಳೆ ಯುವ ವೇದಿಕೆ ಇದಾಗಿದೆ. ಹಾಗೂ ಪ್ರತಿಭಾವಂತರಲ್ಲವರೂ ಯಾರು ಇಲ್ಲ ಎಲ್ಲಾ ಮಕ್ಕಳಲ್ಲಿಯು ಅದು ಹಾಸು ಹೊಕ್ಕಾಗಿದೆ ವಿದ್ಯಾರ್ಥಿಗಳು ಪಠ್ಯದ ಜೊತೆ ಜೊತೆಯಲ್ಲಿ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ವಿದ್ಯಾರ್ಥಿಯ ಜೀವನ ಪರಿಪೂರ್ಣತೆಯ ಹೊಂದುತ್ತದೆ ಎಂದು ಹೇಳುವುದರ ಜೊತೆ ಶಾಲೆಯ ಶೈಕ್ಷಣಿಕ ಪ್ರಗತಿ.

      ಫಲಿತಾಂಶ ಕುರಿತು ಮಾತನಾಡಿದರು. ಪ್ರಾಚಾರ್ಯ ಎಂ.ಎಸ್. ಪ್ರಭಾಕರ್ ಶಾಲೆಯ ವಾರ್ಷಿಕ ವರದಿ ಹಾಗೂ ವಿದ್ಯಾರ್ಥಿಗಳ ಸಾಧನೆಯನ್ನು ಕುರಿತು ಪ್ರಸ್ತುತ ಪಡಿಸಿದರು.

     ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ಸುಜಾತ ಲಿಂಗಾರೆಡ್ಡಿ, ಉಪಾಧ್ಯಕ್ಷ ಅಮೋಘ್ ಬಿ.ಎಲ್, ಆಡಳಿತಾಧಿಕಾರಿ ಡಾ. ರವಿ ಟಿ.ಎಸ್. ಆಡಳಿತಾಧಿಕಾರಿಗಳು, ಎಸ್. ಆರ್. ಎಸ್. ಸಮೂಹ ಶಿಕ್ಷಣ ಸಂಸ್ಥೆ, ಚಿತ್ರದುರ್ಗ. ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap