ಬಿಜೆಪಿಯಿಂದ ಯಾವ ಸಮಸ್ಯೆಗೋ ಪರಿಹಾರ ಸಿಗದು

ಚಿತ್ರದುರ್ಗ:

    ಕೋಮುವಾದಿ ಬಿಜೆಪಿ, ಪ್ರಾದೇಶಿಕ ಪಕ್ಷ ಜೆಡಿಎಸ್.ನಿಂದ ಯಾವ ಸಮಸ್ಯೆಗಳಿಗೂ ನಿವಾರಣೆ ಸಿಗುತ್ತದೆಂದು ನಿರೀಕ್ಷಿಸುವುದು ಕಷ್ಟ. ಹಾಗಾಗಿ ಈ ಬಾರಿಯ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್‍ನ ಸಮರ್ಥ ಅಭ್ಯರ್ಥಿ ರಮೇಶ್‍ಬಾಬುಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಜಯಶಾಲಿಯನ್ನಾಗಿಸುವಂತೆ ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ ಪದವೀಧರ ಮತದಾರರಲ್ಲಿ ವಿನಂತಿಸಿದರು.

    ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಪದವೀಧರರು, ಶಿಕ್ಷಕರು, ಉಪನ್ಯಾಸಕರು, ನಿರುದ್ಯೋಗಿ ಪದವೀಧರರು ಹಾಗೂ ದಲಿತರು, ಶೋಷಿತರ ಪರ ಕಾಳಜಿಯುಳ್ಳ ರಮೇಶ್‍ಬಾಬುರವರನ್ನು ನಮ್ಮ ಪಕ್ಷದಿಂದ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಗೆ ಕಣಕ್ಕಿಳಿಸಲಾಗಿದೆ. ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ. ಚುನಾವಣಾ ಪೂರ್ವದಲ್ಲಿ ದೇಶದ ಜನರಿಗೆ ನೀಡಿದ್ದ ಯಾವ ಭರವಸೆಗಳನ್ನು ಇದುವರೆವಿಗೂ ಈಡೇರಿಸಿಲ್ಲ.

    ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ನೀಡುವುದಾಗಿ ಯುವಕರನ್ನು ನಂಬಿಸಿ ಅಧಿಕಾರಕ್ಕೆ ಬಂದಿರುವ ಪ್ರಧಾನಿ ಮೋದಿಯಿಂದ ಅತ್ತ ದೇಶದ ಅಭಿವೃದ್ದಿಯೂ ಆಗಿಲ್ಲ. ಇತ್ತು ನಿರುದ್ಯೋಗಿಗಳ ಕೈಗೆ ಉದ್ಯೋಗವು ಸಿಕ್ಕಿಲ್ಲ. ಇಂತಹ ಹೊಣೆಗೇಡಿ ಸರ್ಕಾರ ಬೇಕೋ, ಇಲ್ಲ ಸದಾ ಬಡವರ ಪರವಾಗಿರುವ ಕಾಂಗ್ರೆಸ್ ಸರ್ಕಾರ ಲೇಸೋ ಎನ್ನುವುದನ್ನು ಪ್ರಜ್ಞಾವಂತ ಮತದಾರರು ಚಿಂತಿಸಿ ಮತಯಾಚನೆ ಮಾಡುವಂತೆ ಎಲ್.ಹನುಮಂತಯ್ಯ ಕೋರಿದರು.

    ಐದು ನೂರು ಹಾಗೂ ಒಂದು ಸಾವಿರ ರೂ.ಮುಖ ಬೆಲೆಯ ನೋಟುಗಳ ನಿಷೇಧ, ಜಿ.ಎಸ್.ಟಿ.ಯಿಂದಾಗಿ ಸಣ್ಣ ಕೈಗಾರಿಕೆಗಳು, ಮಧ್ಯಮ ಕೈಗಾರಿಕೆಗಳು ಮುಚ್ಚಿವೆ. ಜಿ.ಎಸ್.ಟಿ.ಮೂಲಕ ದೇಶದ ಜನತೆಯಿಂದ ಶೇ.28 ರಷ್ಟು ತೆರಿಗೆಯನ್ನು ಕೇಂದ್ರ ಸರ್ಕಾರ ವಸೂಲಿ ಮಾಡುತ್ತಿದೆ. ಇಂತಹ ಕೆಲಸವನ್ನು ಕಾಂಗ್ರೆಸ್ ಎಂದಿಗೂ ಮಾಡಿಲ್ಲ. ಎ.ಪಿ.ಎಂ.ಸಿ. ಭೂಸುಧಾರಣಾ ಕಾಯಿದೆ ತಿದ್ದುಪಡಿ ರೈತರಿಗೆ ಮಾರಕವಾಗಿದೆ. ಒಂದು ಇಲ್ಲವೆ ಎರಡು ಎಕರೆ ಭೂಮಿಯುಳ್ಳ ಸಣ್ಣಹಿಡುವಳಿದಾರರ ಸಂಖ್ಯೆಯೇ ನಮ್ಮಲ್ಲಿ ಜಾಸ್ತಿಯಿರುವುದರಿಂದ ಕೃಷಿ ವಲಯದ ಮೇಲೆ ದುಷ್ಪರಿಣಾಮ ಬೀರಿದೆ. ಕಾರ್ಪೊರೇಟ್ ಕಂಪನಿಗಳು, ಬಂಡವಾಳಶಾಹಿಗಳು ಲ್ಯಾಂಡ್ ಬ್ಯಾಂಕ್ ಮಾಡಿಕೊಂಡು ರೈತರನ್ನು ಕೂಲಿ ಕಾರ್ಮಿಕರನ್ನಾಗಿ ಮಾಡಿಕೊಳ್ಳಲಿದೆ. ಇದರ ವಿರುದ್ದ ಇಡೀ ದೇಶದಲ್ಲಿ ಹೋರಾಟ ನಡೆಯುತ್ತಿದ್ದರೂ ಪ್ರಧಾನಿ ಮೋದಿ ತನ್ನ ಮೊಂಡು ವಾದದರಿಂದ ಹಿಂದೆ ಸರಿಯುತ್ತಿಲ್ಲ. ಇವನ್ನೆಲ್ಲಾ ಪದವೀಧರ ಮತದಾರರು ಗಮನಿಸಿ ಕಾಂಗ್ರೆಸ್‍ನ ಸಮರ್ಥ ಅಭ್ಯರ್ಥಿ ರಮೇಶ್‍ಬಾಬುಗೆ ಬೆಂಬಲಿಸುವಂತೆ ಮನವಿ ಮಾಡಿದರು.

    ಕೊರೋನಾ ಸಂಕಷ್ಟದಲ್ಲಿ ಕಾರ್ಮಿಕರಿಗೆ ಎಂಟು ಗಂಟೆ ಕೆಲಸ ಬದಲು ಹನ್ನೆರಡು ಗಂಟೆ ನಿಗಧಿಪಡಿಸಲು ಹೊರಟಿದೆ. ದೇಶದಲ್ಲಿ ಮಹಿಳೆಯರ ಮೇಲೆ ದಿನದಿಂದ ದಿನೆ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು ಜಾಸ್ತಿಯಾಗುತ್ತಿದೆ. ಉತ್ತರಪ್ರದೇಶದ ಹಥ್ರಾಸ್‍ನಲ್ಲಿ ಯುವತಿ ಮೇಲೆ ಅತ್ಯಾಚಾರ ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬೊಬ್ಬ ಪೊಲೀಸ್ ಅಧಿಕಾರಿ ಒಂದೊಂದು ರೀತಿಯಲ್ಲಿ ಹೇಳಿಕೆ ನೀಡುತ್ತಿರುವುದನ್ನು ಗಮನಿಸಿದೆ ಕಾಮುಕರು ಎಷ್ಟು ಪ್ರಭಾವಿಗಳಿರಬಹುದೆಂಬುದು ಗೊತ್ತಾಗುತ್ತದೆ.

    ಸಂತ್ರಸ್ಥ ಕುಟುಂಬಕ್ಕೆ ರಕ್ಷಣೆ ನೀಡಬೇಕಾಗಿರುವ ಪೊಲೀಸರೆ ಕಾನೂನು ಕೈಗೆತ್ತಿಕೊಂಡು ಅತ್ಯಾಚಾರ ಆರೋಪಿಗಳನ್ನು ಬಚಾವ್ ಮಾಡಲು ಮುಂದಾಗಿದ್ದಾರೆ. ಯು.ಪಿ.ಎ.ಸರ್ಕಾರ ಜಾರಿಗೆ ತಂದಿದ್ದ ಆರ್.ಟಿ.ಐ. ಆಹಾರ ಸುರಕ್ಷತೆ, ಆರ್.ಟಿ.ಇ. ಬಿಜೆಪಿ.ಕೈಗೆ ಸಿಕ್ಕಿರುವುದರಿಂದ ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ದೇವಸ್ಥಾನ ಮುಖ್ಯವೋ, ಉದ್ಯೋಗ ಮುಖ್ಯವೋ ಎನ್ನುವುದನ್ನು ಪದವೀಧರ ಮತದಾರರು ಪರಾಮರ್ಶಿಸಿ ಯೋಗ್ಯರಿಗೆ ಮತ ನೀಡಿ ಎಂದರು.

     ಮಾಜಿ ಸಚಿವ ಹೆಚ್.ಆಂಜನೇಯ ಮಾತನಾಡಿ ಹೋರಾಟದ ಹಾದಿಯಿಂದ ಬಂದಿರುವ ರಮೇಶ್‍ಬಾಬುರವರಲ್ಲಿ ಬದ್ದತೆ, ಛಲ, ಸಮಸ್ಯೆ, ನೋವಿನ ಬಗ್ಗೆ ಅರಿವುಳ್ಳವರು. ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಶ್ರೇಷ್ಟ ವ್ಯಕ್ತಿಯನ್ನು ಕಾಂಗ್ರೆಸ್ ಪಕ್ಷ ಚುನಾವಣೆಗಿಳಿಸಿದೆ. ಪದವೀಧರರು, ಶಿಕ್ಷಕರು, ಉಪನ್ಯಾಸಕರು, ನಿರುದ್ಯೋಗಿ ಪದವೀಧರರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಕೋರಿದರು.

    ಸರ್ಕಾರದಲ್ಲಿ ಖಾಲಿ ಹುದ್ದೆಗಳು ಸಾಕಷ್ಟಿವೆ. 2014 ರ ಲೋಸಕಭೆ ಚುನಾವಣಾ ಪೂರ್ವದಲ್ಲಿ ವರ್ಷಕ್ಕೆ ಎರಡು ಕೋಟಿ ಯುವಕರಿಗೆ ಉದ್ಯೋಗ ನೀಡುವುದಾಗಿ ವಾಗ್ದಾನ ಮಾಡಿ ದೇಶದ ಪ್ರಧಾನಿಯಾದ ನರೇಂದ್ರಮೋದಿ ನುಡಿದಂತೆ ನಡೆಯುವಲ್ಲಿ ಸೋತಿದ್ದಾರೆ. ಮಾತಿನಲ್ಲೇ ಹೊಟ್ಟೆ ತುಂಬಿಸುವ ಜಾಯಮಾನ ಅವರದು. ಹಾಗಾಗಿ ಎಲ್ಲಾ ಸಮಸ್ಯೆಗಳನ್ನು ಕೈಗೆತ್ತಿಕೊಂಡು ಹೋರಾಡಬಲ್ಲ ಸೂಕ್ತ ಅಭ್ಯರ್ಥಿ ರಮೇಶ್‍ಬಾಬುರವರನ್ನು ಪದವೀಧರ ಮತದಾರರು ಆಯ್ಕೆ ಮಾಡಬೇಕಿದೆ ಎಂದು ಕೇಳಿಕೊಂಡರು.ಮೋಹನ್‍ಕುಮಾರ್ ಕೊಂಡಜ್ಜಿ, ಜಿ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಆರ್.ನರಸಿಂಹರಾಜ, ಸದಸ್ಯ ಬಿ.ಪಿ.ಪ್ರಕಾಶ್‍ಮೂರ್ತಿ, ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link