ಬೆಂಗಳೂರು : 40 ವಾರ್ಡ್‍ಗಳಲ್ಲಿ ಮಾತ್ರ ಕೊರೊನಾ ಸೋಂಕು

ಬೆಂಗಳೂರು

     ಕೊರೊನಾ ಸೋಂಕಿನಿಂದ ಭೀತಿಗೆ ಒಳಾಗಾಗಿದ್ದ ರಾಜಧಾನಿ ಬೆಂಗಳೂರಿನ ಜನತೆಗೆ ಸಾಮಾಧಾನ ಪಡುವ ಸಂಗತಿ ಎನೆಂದರೆ ಇಲ್ಲಿಯವರರಗೆ ನಗರವು ಸೇಫ್ ಜೋನ್‍ನಲ್ಲಿದೆ

    ನಗರದ 40 ವಾರ್ಡ್‍ಗಳಲ್ಲಿ ಮಾತ್ರ ಕೊರೋನಾ ಸೋಂಕು ಇದ್ದು, 158 ವಾರ್ಡ್‍ನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಶೂನ್ಯ ಇದೆ.
ಬೆಂಗಳೂರಿನಲ್ಲಿ ಈವರೆಗೆ 78 ಕೊರೊನಾ ಕೇಸ್ ದಾಖಲಾಗಿದ್ದು, ಸೋಂಕಿರುವ 30 ವಾರ್ಡ್‍ಗಳಲ್ಲಿ ಕೇವಲ ತಲಾ 1 ಕೇಸ್ ಮಾತ್ರ ದಾಖಲಾಗಿದೆ.

     ಪಾದಾರಾಯನಪುರ, ಬಾಪೂಜಿ ನಗರದಲ್ಲಿ ಮಾತ್ರ 7 ಕೊರೊನಾ ಕೇಸ್ ಪತ್ತೆಯಾಗಿವೆ.ಬೆಂಗಳೂರಿನಲ್ಲಿ 78 ಕೊರೊನಾ ಕೇಸ್ ದಾಖಲಾದರೂ ಕೊರೊನಾ ಸ್ವಲ್ಪ ಹಿಡಿತದಲ್ಲಿದೆ. ಕ್ಷೇತ್ರವಾರು ಹೆಚ್ಚು ಪ್ರಸಾರ ಆಗಿಲ್ಲ. ದೇಶದ ಬೇರೆ ನಗರಗಳಿಗೆ ಹೋಲಿಸಿದರೆ ಬೆಂಗಳೂರು ಈ ಕ್ಷಣದವರೆಗೂ ಸೇಫ್ ಜೋನ್‍ನಲ್ಲೇ ಇದೆ. 78 ಮಂದಿಯಲ್ಲಿ ಈಗಾಗಲೇ 27 ಮಂದಿ ಡಿಸ್ಚಾರ್ಜ್ ಆಗಿದ್ದು 49 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇಬ್ಬರು ಮೃತಪಟ್ಟಿದ್ದಾರೆ.

ಸೋಂಕಿತರು ಇರುವ ವಾರ್ಡ್‍ಗಳು:

    ರಾಧಾಕೃಷ್ಣ ಟೆಂಪಲ್ ವಾರ್ಡ್, ಅರಮನೆ ನಗರ, ಮಲ್ಲೇಶ್ವರಂ, ಜೆಸಿ ನಗರ, ಹೂಡಿ, ಸಿವಿ ರಾಮನ್ ನಗರ, ಹೊಯ್ಸಳ ನಗರ, ಗಾಂಧಿ ನಗರ, ದೊಮ್ಮಲೂರು, ಸಂಪಂಗಿರಾಮನಗರ, ಹಗ್ಡೂರ್, ಜ್ಞಾನ ಭಾರತಿ, ಬಾಪೂಜಿ ನಗರ, ಪಾದಾರಾಯ ನಪುರ , ಜೆ.ಪಿ ನಗರ, ವಿವಿ ಪುರಂ, ಹೊಂಬೇಗೌಡ ನಗರ, ಆಡುಗೋಡಿ, ಸುದ್ದಗುಂಟೆ ಪಾಳ್ಯ, ಆರ್.ಆರ್ ನಗರ, ಕತ್ರಿಗುಪ್ಪೆ, ಗೊರಗುಂಟೆ ಪಾಳ್ಯ, ಮಡಿವಾಳ, ಹೆಚ್‍ಎಸ್‍ಆರ್ ಲೇಔಟ್, ಶಾಕಾಂಬರಿ ನಗರ, ಚಿಕ್ಕಲಸಂದ್ರ, ಕೋಣನಕುಂಟೆ, ಅಂಜನಾಪುರ, ಹೆಮ್ಮಿಗೆಪುರ, ಗರುಡಾಚಾರ್ ಪಾಳ್ಯ, ಸಂಜಯನಗರ, ಮಾರುತಿ ಸೇವಾನಗರ, ರಾಮಸ್ವಾಮಿ ಪಾಳ್ಯ, ವಸಂತ್ ನಗರ ಮತ್ತು ಸುಧಾಮ ನಗರ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap