ಬೆಂಗಳೂರು:
ವಿದ್ಯುತ್ ದರ ಪರಿಷ್ಕರಣೆಗೆ ರಾಜ್ಯ ಸರ್ಕಾರ ಮುಂದಾಗಿದ್ದು, ಜೂನ್ ತಿಂಗಳಲ್ಲಿ ಗ್ರಾಹಕರಿಗೆ ವಿದ್ಯುತ್ ದರದ ಬರೆ ಬೀಳುವ ಸಾಧ್ಯತೆ ಇದೆ. ಇಂಧನ ಖಾತೆಯನ್ನೂ ಹೊಂದಿರುವ ಸಿಎಂ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಶಕ್ತಿ ಭವನದಲ್ಲಿ ನಡೆದ ಸಭೆಯಲ್ಲಿ ವಿದ್ಯುತ್ ದರ ಹೆಚ್ಚಳಕ್ಕೆ ವಿದ್ಯುತ್ ಸರಬರಾಜು ಕಂಪನಿ ಅಧಿಕಾರಿಗಳು ಮನವಿ ಸಲ್ಲಿಸಿದ್ದಾರೆ.
ವಿದ್ಯುತ್ ದರ ಹೆಚ್ಚಳ ಸಾಧ್ಯತೆ2018ರ ನವೆಂಬರ್ನಲ್ಲಿ 1 ಯೂನಿಟ್ಗೆ 1.51 ರೂ. ಏರಿಕೆ ಮಾಡುವ ಕುರಿತು ಕೆ.ಇ.ಆರ್.ಸಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಸರ್ಕಾರ 58 ಪೈಸೆ ಏರಿಕೆಗೆ ಮಾತ್ರ ಅನುಮತಿ ನೀಡಿತ್ತು. ಹೀಗಾಗಿ ಈ ವರ್ಷವೂ ಯೂನಿಟ್ಗೆ ಕನಿಷ್ಠ 45 ರಿಂದ 50 ಪೈಸೆ ಏರಿಕೆಯಾಗುವ ಸಾಧ್ಯತೆ ಇದೆ.ಜೊತೆಗೆ ಜೂನ್ ಒಂದರಿಂದ ಹೊಸ ವಿದ್ಯುತ್ ದರ ಪರಿಷ್ಕರಣೆಯಾಗಲಿದೆ ಎಂದು ತಿಳಿದು ಬಂದಿದೆ.
ವಿದ್ಯುತ್ ದರ ಪರಿಷ್ಕರಣೆಗೆ ಕೆಇಆರ್ಸಿ ಸಿದ್ಧತೆ ಮಾಡಿಕೊಂಡಿದ್ದು,ನೀತಿ ಸಂಹಿತೆ ಹಿನ್ನೆಲೆಯಲ್ಲಿ ಲೋಕಸಭೆ ಚುನಾವಣಾ ಫಲಿತಾಂಶದ ನಂತರ ಈ ಹೊಸ ದರ ಪಟ್ಟಿ ಪ್ರಕಟಗೊಳ್ಳುವ ಸಾಧ್ಯತೆ ಇದೆ.ಅಲ್ಲದೆ, ಸಭೆಯಲ್ಲಿ ನೀರಿನ ದರದ ಬಗ್ಗೆಯೂ ಚರ್ಚೆ ನಡೆದಿದೆ.