ವ್ಯಾಟ್ ದರದಲ್ಲಿ ಏರಿಕೆ ಸಾಧ್ಯತೆ..!?

ತುಮಕೂರು:

    ಕೇಂದ್ರ ಸರ್ಕಾರವು ಜಿ.ಎಸ್.ಟಿ. ದರದಲ್ಲಿ ಹೆಚ್ಚಳ ಮಾಡುತ್ತಿದ್ದಂತೆಯೇ ರಾಜ್ಯಗಳು ಈಗ ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಏರಿಕೆ ಮಾಡಲು ಚಿಂತನೆ ನಡೆಸಿವೆ.ಭಾರತದ ಆರ್ಥಿಕ ಬೆಳವಣಿಗೆ ಮಂದಗತಿಯಲ್ಲಿ ಸಾಗುತ್ತಿದ್ದು, ಸರ್ಕಾರದಿಂದ ಜಿ.ಎಸ್.ಟಿ. ಪರಿಹಾರದಲ್ಲಿ ವಿಳಂಬವಾಗುತ್ತಿದ್ದು, ಇದರ ಪರಿಣಾಮವನ್ನು ರಾಜ್ಯಗಳು ಎದುರಿಸುವಂತಾಗಿದೆ. ವಿತ್ತೀಯ ವರಮಾನ ಕೊರತೆಯಿಂದ ಪಾರಾಗಲು ಅನೇಕ ಮಾರ್ಗಗಳನ್ನು ಹುಡುಕುತ್ತಿವೆ

      ಇದರ ಪರಿಣಾಮವಾಗಿ ಜಿ.ಎಸ್.ಟಿ. ವ್ಯಾಪ್ತಿಯಿಂದ ಹೊರಗಿರುವ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಹೆಚ್ಚಿಸುವ ಬಗ್ಗೆ ಚಿಂತನೆಗಳು ನಡೆಯುತ್ತಿವೆ. ಏಪ್ರಿಲ್-ನವೆಂಬರ್ ಅವಧಿಯಲ್ಲಿನ ಸಿ.ಜಿ.ಎಸ್.ಟಿ. ಸಂಗ್ರಹವು ಅಂದಾಜಿಗಿಂತಲೂ ಶೇ.40 ರಷ್ಟು ಕಡಿಮೆಯಾಗಿದೆ. ಕೇಂದ್ರ ಸರ್ಕಾರಕ್ಕೆ 80 ಸಾವಿರ ಕೋಟಿಯವರೆಗೂ ವರಮಾನ ನಷ್ಟವಾಗುವ ಸಾಧ್ಯತೆ ಇದೆ. ಇದರಿಂದಾಗಿ ಒಟ್ಟಾರೆ ತೆರಿಗೆ ವರಮಾನ ಕೊರತೆಯು 2.03 ಲಕ್ಷ ಕೋಟಿ ತಲುಪುವ ಅಂದಾಜು ಮಾಡಲಾಗಿದೆ.

      ತೆರಿಗೆ ದರದಲ್ಲಿ ಪರಿಷ್ಕರಣೆ ಮಾಡುವುದರಿಂದ ಹಣದುಬ್ಬರದ ಪರಿಸ್ಥಿತಿ ಎದುರಾಗಲಿದೆ. ಈಗಾಗಲೇ ಮಂದಗತಿಯಲ್ಲಿ ಬೆಳವಣಿಗೆ ಯಲ್ಲಿರುವ ಅರ್ಥಿಕತೆ ಇದರಿಂದ ಮತ್ತಷ್ಟು ನಕಾರಾತ್ಮಕ ಪರಿಣಾಮ ಬೀರಲಿದೆ ಎಂದು ವರದಿಗಳು ತಿಳಿಸಿವೆ. ವಿವಿಧ ತೆರಿಗೆಗಳು ಜನರ ಮೇಲೆ ಹೆಚ್ಚುತ್ತಿರುವುದಕ್ಕೆ ಆಕ್ರೋಶ ವ್ಯಕ್ತವಾಗುತ್ತಲೇ ಇದೆ.

      ಸಹಕಾರ ಸಂಘಗಳ ಮೇಲೆ ಆದಾಯ ತೆರಿಗೆ, ಟಿಡಿಎಸ್ ಹಾಗೂ ಜಿ.ಎಸ್.ಟಿ. ವಿಧಿಸಿರುವುದನ್ನು ರದ್ದು ಮಾಡಿ ಎಂದು ಒತ್ತಾಯಿಸಿ ಜಿಲ್ಲೆಯಲ್ಲಿ ವಿವಿಧ ಸಹಕಾರ ಸಂಸ್ಥೆಗಳು ಡಿ.13 ರಂದು ಬೃಹತ್ ಪ್ರತಿಭಟನೆ ನಡೆಸಿದವು. ಇದಕ್ಕೂ ಹಿಂದೆ ವಿವಿಧ ವಾಣಿಜ್ಯ ಸಂಸ್ಥೆಗಳು ನಗರದಲ್ಲಿ ಪ್ರತಿಭಟನೆ ನಡೆಸಿ ಜಿ.ಎಸ್.ಟಿ. ಅಸಮರ್ಪಕ ಕಾರ್ಯಾನುಷ್ಠಾನದ ವಿರುದ್ಧ ಘೋಷಣೆ ಕೂಗಿದ್ದವು. ಹೀಗೆ ಜಿ.ಎಸ್.ಟಿ. ವಿರುದ್ಧ ಮತ್ತು ಅದರ ಅಸಮರ್ಪಕ ಅನುಷ್ಠಾನದ ವಿರುದ್ಧ ಅಲ್ಲಲ್ಲಿ ಅಸಮಾಧಾನಗಳು ವ್ಯಕ್ತವಾಗುತ್ತಲೇ ಇದ್ದು, ಇದೀಗ ರಾಜ್ಯ ಸರ್ಕಾರವು ವ್ಯಾಟ್ ಏರಿಕೆಗೆ ಮುಂದಾಗಿರುವುದು ಮತ್ತಷ್ಟು ಅಸಮಧಾನಕ್ಕೆ ಕಾರಣವಾಗಬಹುದು. ಒಂದು ವೇಳೆ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ವ್ಯಾಟ್ ಹೆಚ್ಚಿಸುವ ಚಿಂತನೆಗಳು ಜಾರಿಯಾದರೆ ಡೀಸೆಲ್ ಮತ್ತು ಪೆಟ್ರೋಲ್ ದರವೂ ಹೆಚ್ಚಳವಾಗಲಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link