ತುಮಕೂರು
ತುಮಕೂರು ಸ್ಮಾರ್ಟ್ ಸಿಟಿ ವತಿಯಿಂದ ಹಮ್ಮಿಕೊಳ್ಳುತ್ತಿರುವ ಕಾಮಗಾರಿಗಳು ಬಗ್ಗೆ ವಿವರವಾದ ಮಾಹಿತಿಯನ್ನು ಕೆಲಸ ನಡೆಯುವ ಸ್ಥಳಗಳಲ್ಲಿ ನಾಮಫಲಕಗಳನ್ನು ಶೀಘ್ರವಾಗಿ & ಕಡ್ಡಾಯವಾಗಿ ಅಳವಡಿಸಬೇಕೆಂದು ಗುತ್ತಿಗೆದಾರರಿಗೆ ಸ್ಮಾರ್ಟ್‍ಸಿಟಿ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಟಿ.ಭೂಬಾಲನ್ ಅವರು ಸೂಚಿಸಿದ್ದಾರೆ.
ತುಮಕೂರು ಸ್ಮಾರ್ಟ್ ಸಿಟಿ ವತಿಯಿಂದ ಹಮ್ಮಿಕೊಂಡಿರುವ ವಿವಿಧ ಕಾಮಗಾರಿಗಳನ್ನು ಹಾಗೂ ವಿವಿಧ ಇಲಾಖೆ ಗಳಿಂದ ಬೇರೆ ಬೇರೆ ಕಾಮಗಾರಿಗಳನ್ನು ಏಕಕಾಲದಲ್ಲಿ ನಿರ್ವಹಿಸುತ್ತಿರುವುದರಿಂದ ಸಾರ್ವಜನಿಕ ವಲಯದಿಂದ ದೂರುಗಳು ಕೇಳಿಬರುತ್ತಿದ್ದು, ಯಾವುದೇ ಇಲಾಖೆಯ ಕಾಮಗಾರಿ ಆಗಿದ್ದರೂ ಸಹ ಸ್ಮಾರ್ಟ್ ಸಿಟಿ ಕಾಮಗಾರಿಗಳೆಂದು ಬಿಂಬಿಸಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಸ್ಮಾರ್ಟ್ ಸಿಟಿಯ ಹಲವು ಕಾಮಗಾರಿಗಳ ಸ್ಥಳದಲ್ಲಿ ನಿರ್ವಹಿಸುತ್ತಿರುವ ಗುತ್ತಿಗೆದಾರರ ವಿವರ, ಯೋಜನೆಯಲ್ಲಿ ಏನೇನು ಬರಲಿದೆ, ಯಾವ ಪ್ರದೇಶದಲ್ಲಿ ಯಾವ ಪ್ರದೇಶದಲ್ಲಿ ಯಾವ ಕೆಲಸ ಕಾರ್ಯಗತವಾಗಲಿದೆ, ಯೋಜನೆಯ ಮೊತ್ತ, ಪ್ರಸ್ತುತ ಸ್ಥಿತಿಗತಿ, ಕಾಮಗಾರಿಗಳ ನಾಮಫಲಕಗಳಲ್ಲಿ ಕಡ್ಡಾಯವಾಗಿದೆ ಇರಬೇಕೆಂದು ಅವರು ತಿಳಿಸಿದ್ದಾರೆ.
ಸ್ಮಾರ್ಟ್ ರೋಡ್ ಅಭಿವೃದ್ಧಿ & ರೋಡ್ ಶೋಲ್ಡರ್ ಅಭಿವೃದ್ಧಿ ಕಾಮಗಾರಿಗಳ 500 ಮೀಟರ್‍ಗಿಂತಲೂ ಕಡಿಮೆ ಉದ್ದದ ರಸ್ತೆಗಳಲ್ಲಿ ಒಂದು ನಾಮಫಲಕ ಮತ್ತು 500 ಮೀಟರ್‍ಗಿಂತಲೂ ಅಧಿಕ ಉದ್ದದ ರಸ್ತೆಗಳಲ್ಲಿ ಪ್ರತಿ 500 ಮೀಟರ್‍ಗೆ ಒಂದು ನಾಮಫಲಕ ಕಡ್ಡಾಯವಾಗಿ ಅಳವಡಿಸಲಾಗುತ್ತಿದೆ. ಸ್ಮಾರ್ಟ್ ಸಿಟಿ ಕಾಮಗಾರಿಗಳು ಶೀಘ್ರವಾಗಿ ಪೂರ್ಣಗೊಳ್ಳಲು ಮತ್ತು ಉತ್ತಮ ಗುಣಮಟ್ಟದಲ್ಲಿ ಅನುಷ್ಠಾನಗೊಳ್ಳಲು ಸಾರ್ವಜನಿಕರು ಸಹಕರಿಸಬೇಕೆಂದು.ಇವರು ಮನವಿ ಮಾಡಿದ್ಧಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
