ಮಂಗಳೂರು ಗೋಲಿಬಾರ್ : ಮೃತರ ಕುಟುಂಬಕ್ಕೆ ಸಧ್ಯಕ್ಕೆ ಪರಿಹಾರ ಇಲ್ಲಾ : ಯಡಿಯೂರಪ್ಪ

ಮಂಗಳೂರು:

      ಕೆಲದಿನಗಳ ಹಿಂದೆ ಕರಾವಳಿ ನಗರಿ ಮಂಗಳೂರಿನಲ್ಲಿ ನಡೆದ ಪೊಲೀಸರ ಗೋಲಿಬಾರ್ ನಲ್ಲಿ ಮೃತಪಟ್ಟವರಿಗೆ ಸರ್ಕಾರ ಘೋಷಿಸಿದ ಪರಿಹಾರಕ್ಕೆ ಸಿಎಂ ತಡೆ ನೀಡಿದ್ದಾರೆ.

      ಗೋಲಿಬಾರ್ ನಲ್ಲಿ ಹತಾದವರು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಅವರ ಪರಿಹಾರ ಮೊತ್ತವನ್ನು ತಾತ್ಕಾಲಿಕವಾಗಿ ತಡೆಹಿಯಲಾಗಿದೆ ಮತ್ತು ಆರೋಪ ಸಾಬೀತಾದಲ್ಲಿ ಯಾವುದೇ ಪರಿಹಾರ ನೀಡಲಾಗುವುದಿಲ್ಲ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.

    ಮಂಗಳೂರು ಗೋಲಿಬಾರ್ ಪ್ರಕರಣವನ್ನು ಸಿಐಡಿ ಮತ್ತು ನ್ಯಾಯಾಂಗ ಪ್ರತ್ಯೇಕ ತನಿಖೆಗೆ ಒಪ್ಪಿಸಲಾಗಿದೆ. ತನಿಖೆಯಲ್ಲಿ ಮೃತಪಟ್ಟವನ್ನು ಅಪರಾಧಿಗಳೆಂದು ಸಾಬೀತಾದರೆ ಅವರಿಗೆ ಪರಿಹಾರ ನೀಡುವುದು ಅಕ್ಷಮ್ಯ ಅಪರಾಧವಾಗುತ್ತದೆ. ಹೀಗಾಗಿ ಸದ್ಯಕ್ಕೆ ಪರಿಹಾರ ಮೊತ್ತವನ್ನು ಅವರ ಕುಟುಂಬಕ್ಕೆ ನೀಡುವುದಿಲ್ಲ. ತನಿಖೆ ಮುಗಿಯುವವರೆಗೂ 1 ರೂಪಾಯಿ ಕೂಡ ಬಡುಗಡೆಯಾಗುವುದಿಲ್ಲ ಎಂದು ಸಿಎಂ ಹೇಳಿದ್ದಾರೆ.

    ಗ್ರಹಣ ಹಿನ್ನಲೆಯಲ್ಲಿ ದೋಷ ಪರಿಹಾರಕ್ಕಾಗಿ ಕೆರಳದಲ್ಲಿ ಪೂಜೆ ಮುಗಿಸಿ ಮಂಗಳೂರಿಗೆ ವಾಪಸ್ಸಾದ ವೇಳೆ ಸಿಎಂ ಸುದ್ದಿಗಾರರಿಗೆ  ಹೇಳಿಕೆ ನೀಡಿದ್ದಾರೆ. ಮಂಗಳೂರಿನ ಹಿಂಸಾಚಾರದಲ್ಲಿ ಮೃತಪಟ್ಟವರು ಹಿಂಸಾಚಾರದಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಎಂದು ಅನೇಕರು ಸೃಷ್ಟಿಸಿದರು. ಅದನ್ನು ನಿಯಂತ್ರಿಸಲು ಪೊಲೀಸರು ಅನಿವಾರ್ಯವಾಗಿ ಗೋಲಿಬಾರ್ ನಡೆಸಬೇಕಾಯಿತು.

    ಇದಕ್ಕೆ ಪೂರಕವಾಗಿ ಮಂಗಳೂರು ಪೊಲೀಸರು ಸೋಷಿಯಲ್ ಮೀಡಿಯಾಗಳಲ್ಲಿ ಬಿಡುಗಡೆ ಮಾಡಿರುವ ವಿಡಿಯೊಗಳು ಪುಷ್ಟೀಕರಿಸುತ್ತವೆ. ಇವೆಲ್ಲಾ ನೋಡಿದರೆ ಗೋಲಿಬಾರ್ ನಲ್ಲಿ ಮೃತಪಟ್ಟವರ ಬಗ್ಗೆ ಸಮಗ್ರ ತನಿಖೆಯಾಗಬೇಕು. ಅಲ್ಲಿಯವರೆಗೆ ಪರಿಹಾರ ಮೊತ್ತ ಬಿಡುಗಡೆ ಮಾಡುವುದಿಲ್ಲ ಎಂದಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link